
filter: 0; jpegRotation: 0; fileterIntensity: 0.000000; filterMask: 0; module:1facing:0; hw-remosaic: 0; touch: (-1.0, -1.0); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
ಔರಾದ:- ಶಾಸಕರ ಕಛೇರಿಯಲ್ಲಿ ಡಿ.22ರಂದು ಪರಮ ಪೂಜ್ಯ ಲಿಂ. ಡಾ.ಚನ್ನಬಸವ ಪಟ್ಟದ್ದೇವರ 135ನೇ ಜಯಂತಿಯನ್ನು ಆಚರಿಸಲಾಯಿತು. ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಪೂಜ್ಯರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ, ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ವೇಳೆ ಮಾತನಾಡಿ, ನಿಜಾಮರ ಆಳ್ವಿಕೆಯ ಸಂದರ್ಭದಲ್ಲಿ ನಮ್ಮ ಭಾಗದಲ್ಲಿ ಉರ್ದು ಭಾಷೆಯ ಪ್ರಭಾವ ಹೆಚ್ಚಾಗಿ ಕನ್ನಡ ಅಳಿವಿನಂಚಿನಲ್ಲಿತ್ತು. ಸಾಕಷ್ಟು ದಬ್ಟಾಳಿಕೆ-ವಿರೋಧದ ನಡುವೆಯೂ ಹೊರಗಡೆ ಉರ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸುವ ಮೂಲಕ ನಾಡಿನಲ್ಲಿ ಕನ್ನಡದ ಉಳಿವಿಗೆ ಶ್ರಮಿಸಿದ್ದರು. ಈಗಲೂ ಭಾಲ್ಕಿ ಮಠ ಕನ್ನಡ ಮಠ ಎಂದೇ ಖ್ಯಾತಿಯಾಗಿದೆ ಎಂದು ಸ್ಮರಿಸಿದರು.
ಸಮಾಜದಲ್ಲಿ ಬೇರೂರಿದ್ದ ಅಸಮಾನತೆ, ಜಾತಿ, ಲಿಂಗ ತಾರತಮ್ಯದಂತಹ ಸಮಸ್ಯೆಗಳನ್ನು ತೊಡೆದು ಹಾಕಿ ಕಲ್ಯಾಣ ರಾಜ್ಯವಾಗಿಸಲು 12ನೇ ಶತಮಾನದಲ್ಲಿ ಬಸವಾದಿ ಶರಣರು ಹೋರಾಡಿದ್ದರು. ಅವರಂತೆ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಕೂಡ 20ನೇ ಶತಮಾನದಲ್ಲಿ ಶರಣರ ಆಶಯಗಳಿಗಾಗಿಯೇ ಹೋರಾಡಿದ್ದಾರೆ ಎಂದರು.
ಧಾರ್ಮಿಕ ಕೆಲಸಗಳ ಜೊತೆಗೆ ಶಿಕ್ಷಣದ ಬೆಳವಣಿಗೆಗೆ ಶ್ರಮಿಸಿದ್ದರು. ಶಿಕ್ಷಣದ ಕೊರತೆ ಕಾಣಿಸಿದ ಸಂದರ್ಭದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಯನ್ನು ತೆರೆದು ಮಾದರಿಯಾದವರು. ಜನ ಜೀವನಕ್ಕೆ ಮಾರಕವಾಗಿ ಪರಿಣಮಿಸುವ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ಕೂಡ ಪರಮ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಸಾಗುತ್ತಿದ್ದಾರೆ. ಸಮಾಜಕ್ಕೆ ಬೇಡವಾದ ಅನಾಥ ಮಕ್ಕಳಿಗೆ ಆಶ್ರಯ ನೀಡುವುದಲ್ಲದೇ ಉತ್ತಮ ಶಿಕ್ಷಣ ಮತ್ತು ಸಂಸ್ಕೃತಿಯನ್ನು ಕಲಿಸುತ್ತಿದ್ದಾರೆ ಎಂದು ಹೇಳಿದರು.
ಪೂಜ್ಯರ ಆಶಯದಂತೆಯೇ ಬಸವಕಲ್ಯಾಣದಲ್ಲಿ ವಿನೂತನ ಮತ್ತು ಭವ್ಯವಾದ ಅನುಭವ ಮಂಟಪ 600 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಹಿಂದೆ ನಾನು ಸಚಿವನಾಗಿದ್ದಾಗ ಭೂಮಿ ಪೂಜೆ ನೆರವೇರಿಸಿದ ಹೆಮ್ಮೆಯಿದೆ. ಮುಂದಿನ ದಿನಗಳಲ್ಲಿ ಅನುಭವ ಮಂಟಪ ಬೃಹತ್ ಪ್ರವಾಸಿ ತಾಣವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.
ಡಾ.ಚನ್ನಬಸವ ಪಟ್ಟದ್ದೇವರು ನಾಡು ಕಂಡ ಅಪರೂಪದ ಸಂತರಾಗಿದ್ದರು. ಅವರ ಹೆಸರು ಸದಾ ಸ್ಮರಣೀಯವಾಗಿಸಬೇಕೆಂಬ ಉದ್ದೇಶದಿಂದ ಹಿಂದೆ ಸಚಿವನಾಗಿದ್ದಾಗ ಬೀದರ ಜಿಲ್ಲಾ ರಂಗಮಂದಿರಕ್ಕೆ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರ ವೆಂದು ಮರುನಾಮಕರಣ ಮಾಡಿಸಿದ್ದೇನೆ. ಇದು ನನ್ನ ಜೀವನದ ಅವಿಸ್ಮರಣೀಯ ಘಳಿಗೆಯಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ದಯಾನಂದ ಘೂಳೆ, ಸಂದೀಪ ಪಾಟೀಲ, ರಮೇಶ ಗೌಡ, ಜಗದೀಶ ಪಾಟೀಲ, ಎಂ.ಡಿ ಸಲಾವುದ್ದಿನ್, ಮಹೇಶ ಭಾಲ್ಕೆ, ಸಿದ್ರಾಮಪ್ಪ ನಿಡೋದೆ, ಕಿರಣ ಶೆಂಬೆಳ್ಳಿ, ಬಾಬು ಎಕಲಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.