
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಕಮಲನಗರ:-ತಾಲ್ಲೂಕಿನ ಸೋನಾಳ ಶ್ರೀ ವಿರಕ್ತಮಠದ ಲಿಂಗೈಯಕ. ಶ್ರೀ ಮ.ನಿ.ಪ್ರ. ನಿರಂಜನ ಮಹಾಸ್ವಾಮಿಗಳವರ 15 ಪುಣ್ಯಸ್ಮರಣೋತ್ಸವ ಹಾಗೂ ನೂತನ ರಥೋತ್ಸವ ನಿಮ್ಮತ್ಯ ಶುಕ್ರವಾರ ಸಾಮೂಹಿಕ ಇಷ್ಟಲಿಂಗ ದೀಕ್ಷೆ ದಿ:20-12-2024 ರಂದು ಬೆಳಿಗ್ಗೆ 7 ಗಂಟೆಗೆ ಮಠಾಧ್ಯಕ್ಷರಾದ ಶ್ರೀ ಮ. ನಿ. ಪ್ರ. ಚನ್ನವೀರ ಮಹಾಸ್ವಾಮಿಗಳವರು, ಸೋನಾಳ ಅವರ ಅಮೃತ ಹಸ್ತದಿಂದ ಭಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿದರು.
ಸೋನಾಳ ವಿರಕ್ತ ಮಠಕ್ಕೆ ಆಗಮಿಸಿದ ಅಪಾರ ಭಕ್ತರು ಶುಕ್ರವಾರ ಬೆಳಗ್ಗೆ 7:00 ದೈನಂದಿನ ಕಾರ್ಯ ಕಲಾಪ ಸ್ನಾನ ಮಾಡಿ ನಿರಂಜನ ಮಹಾಸ್ವಾಮಿಗಳ ದರ್ಶನ ಪಡೆದು ಸಾಮೂಹಿಕ ಇಷ್ಟಲಿಂಗ ಪೂಜೆ, ಸಮಾರಂಭದಲ್ಲಿ ಭಾಗವಹಿಸಿದ್ದರು.
ಯುವಕರು, ಮಹಿಳೆಯರು ಸೇರಿದಂತೆ 45ಕ್ಕೂ ಹೆಚ್ಚು ಜನ ಲಿಂಗದೀಕ್ಷೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಿಂಗಧಾರಣೆಯ ವಿಧಿ ವಿಧಾನಗಳನ್ನು ತಿಳಿದುಕೊಂಡರು.
‘ನಮ್ಮೊಳಗಿನ ಮಹಾ ಮನಸ್ಸು ಗಟ್ಟಿಗೊಳಿಸಲು ಇಷ್ಟಲಿಂಗ ನೆರವಾಗಲಿದೆ. ಈ ಲಿಂಗದ ಮೂಲಕ ಮನಸ್ಸು ನಿಯಂತ್ರಿಸಿ ಆತ್ಮಬಲ ಹೆಚ್ಚಿಸಿಕೊಂಡಾಗ ಸಹಜವಾಗಿಯೇ ಶರೀರ ಹಾಗೂ ಭಾವ ಶುದ್ಧಿಯಾಗುತ್ತದೆ. ಇದರಿಂದ ಸಂಸ್ಕಾರವಂತ ಸಮಾಜ ಕಟ್ಟಲು ಸಾಧ್ಯವಾಗುತ್ತದೆ’ ಎಂದು ಭಕ್ತರನ್ನು ಉದ್ದೇಶಿಸಿ ಚೆನ್ನವೀರ ಸ್ವಾಮೀಜಿ ಮಾತನಾಡಿದರು.