
ಔರಾದ:-ಮಾಜಿ ಸಚಿವರು ಹಾಗೂ ಔರಾದ(ಬಿ) ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ನ.7ರಂದು ಮಹಾರಾಷ್ಟ್ರ ರಾಜ್ಯದ ಕಂದಾರ ಮುಖೇಡ್ ವಿಧಾನಸಭಾ ಕ್ಷೇತ್ರದ ಹಂಗರಗಾ, ಖತಗಾಂವ, ದೇಗಾಂವ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ತುಷಾರ ಗೋವಿಂದರಾವ ರಾಠೋಡ ಹಾಗೂ ನಾಂದೇಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಸಂತುಕರಾವ ಹಂಬರಡೆ ಪರ ಪ್ರಚಾರ ನಡೆಸಿದರು.
ವಾಡಿಪಾಡಿ ತಾಂಡಾ, ಬಾರಾಭಾಯಿ ತಾಂಡಾ, ಜೈವಾಲ ತಾಂಡಾ, ದೇಗಾಂವ ತಾಂಡಾ, ಪರ್ತಾಪೂರ, ರಾವಿ, ರಾವಿ ತಾಂಡಾ, ಹಳನಿ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಪ್ರವಾಸ ಕೈಗೊಂಡು ಮಹಾರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರುವುದು ಅತ್ಯಂತ ಅವಶ್ಯವಿದೆ. ದೇಶವನ್ನು ವಿಶ್ವಗುರುವನ್ನಾಗಿಸಲು ಪಣತೊಟ್ಟು ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕಿದೆ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಕೋರಿದರು.
ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂಧೆ, ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಹಾಗೂ ಅಜಿತ ಪವಾರ ಅವರ ನೇತೃತ್ವದ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ಜನಾಂಗದವರ ಶ್ರೇಯೋಭಿದ್ದಿಗಾಗಿ ಕೆಲಸ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳನ್ನು ಮುಂದುವರೆಸಲು ಮತ್ತೊಮ್ಮೆ ಅವಕಾಶ ನೀಡಬೇಕು ಎಂದು ಕೋರಿದರು.
ಅಭಿವೃದ್ಧಿ ಪರವಾಗಿರುವ ಡಾ.ತುಷಾರ ಗೋವಿಂದರಾವ ರಾಠೋಡ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮತ್ತೊಮ್ಮೆ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ ಇವರನ್ನು ಮತ್ತು ಸಾಮಾಜಿಕ ಕಳಕಳಿಯ ಡಾ.ಸಂತುಕರಾವ ಹಂಬರಡೆ ಅವರು ಪಕ್ಷವು ನಾಂದೇಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಇಬ್ಬರ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿಯ ಅಲೆಯಿದೆ. ಎಲ್ಲ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಚರ್ಚೆಯಾಗುತ್ತಿದೆ. ಹಾಗಾಗಿ ಮುಖೇಡ್ ವಿಧಾನಸಭಾ ಕ್ಷೇತ್ರ ಹಾಗೂ ನಾಂದೇಡ್ ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರು ಬಿಜೆಪಿಯ ಅಭ್ಯರ್ಥಿಗಳ ಬಗ್ಗೆ ಒಲವು ಹೊಂದಿದ್ದು, ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುವುದು ಶತಸಿದ್ದ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ದೇವಿದಾಸ ರಾಠೋಡ್, ಶಿವಾಜಿರಾವ ಪಾಟೀಲ ಮುಂಗನಾಳ, ಶಂಕರ ರಾಠೋಡ, ಸಂಗ್ರಾಮಪ್ಪ ಮಾಳಗೆ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಶಿವರಾಜ ಅಲ್ಮಾಜೆ, ಮಾರುತಿ ಚವ್ಹಾಣ, ಸಚಿನ ರಾಠೋಡ್, ಕೇರಬಾ ಪವಾರ, ಪ್ರದೀಪ ಪವಾರ, ಸುಜಿತ ರಾಠೋಡ, ಧನಾಜಿ ಜಾಧವ, ಲಕ್ಷ್ನಣ ಜಾಧವ, ಅನೀಲ ಚಿಮ್ಮೇಗಾಂವ, ಸಿದ್ರಾಮಪ್ಪ ನಿಡೋದೆ, ಬಾಲಾಜಿ ಕಾಸ್ಲೆ ಸೇರಿದಂತೆ ಇತರರು ಉಪಸ್ಥಿತರಿದ್ದರು.