
ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ್ ಟ್ರಸ್ಟ್ (ರಿ) ವತಿಯಿಂದ ಸಾಹಿತಿ ಮತ್ತು ರಂಗಭೂಮಿ ಕಲಾವಿದ ಡಾ. ಷಣ್ಮುಖಯ್ಯ ತೋಟದರವರಿಗೆ ” ದಿನಾಂಕ :- 14-09-2024 ರಂದು ” ಕರ್ನಾಟಕ ವಿಕಾಸ ರತ್ನ ” ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ರಮೇಶ ಸುರ್ವೆಯವರ ನೇತ್ರತ್ವದಲ್ಲಿ ರವೀಂದ್ರ ಕಲಾ ಕ್ಷೇತ್ರ ಆವರಣದ ನಯನ ರಂಗಮಂದಿರ ದಲ್ಲಿ ಸರ್. ಎಂ. ವಿಶ್ವೇಶ್ವರಯ್ಯನವರ 163 ನೇ ಜಯಂತ್ಸೋತ್ವವ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಡಾ.ಬಸವ
ರಾಮಾನಂದ ಸ್ವಾಮಿಗಳು ಮತ್ತು ಕರ್ನಾಟಕ ಸರಕಾರದ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಡಾ.ಎಲ್.ಎನ್.ಮುಕುಂದರಾಜ್ ಹಾಗು ಚಲನಚಿತ್ರ ನಟರಾದ ಶಂಕರಭಟ್, ಶ್ರೀಮತಿ ವೀಣಾ ಅನೇಕ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದರು.
ಡಾ.ಬಸವ ರಮಾನಂದ ಮಾಹಸ್ವಾಮಿಗಳು ಮತ್ತು ಡಾ ರಾಜಶೇಖರ ಮಠಪತಿ (ರಾಗಂ) ಸರ್.ಎಂ.ವಿಶ್ವೇಶ್ವರಯ್ಯನವರ ಜೀವನ ಮತ್ತು ಕಾಯಕದ ಬಗ್ಗೆ ಮಾತನಾಡಿದರು.ಮತ್ತು ಸಭೆಯ ಅಧ್ಯಕ್ಷರಾದ ಡಾ.ಎನ್.ಎಲ್ ಮುಕುಂದರಾಜ್ರ, ಮೇಶ ಸುರ್ವೇಯವರ ಕಾರ್ಯಕ್ರಮಗ ಬಗ್ಗೆ ಶ್ಲಾಘೀನಿಯ ಮಾತುಗಳನ್ನಾಡಿದರು.