
ಚಡಚಣ, ಸೆಪ್ಟೆಂಬರ್. 18:- ಪಟ್ಟಣದ ವಿದ್ಯಾ ನಗರದಲ್ಲಿ ಶ್ರೀ ಸಾಯಿ ಗಜಾನನ ಮಿತ್ರ ಮಂಡಳಿಯವರು ಪ್ರತಿಷ್ಠಾಪಿಸಿದ ಗಣಪನ ಮುಂದೆ ಬಡಾವಣೆಯ ಚಿಣ್ಣರರಿಂದ ವಿವಿಧ ವೇಷಭೂಷಣ ಸ್ಪರ್ಧೆಯ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಬಣ್ಣ ಬಣ್ಣದ ದೀಪಗಳಿಂದ ಅಲಂಕೃತಗೊಂಡಿದ್ದ ವೇದಿಕೆಯಲ್ಲಿ ಅನೇಕ ಮಹನೀಯರ ಸಾಂಸ್ಕೃತಿಕ ವೇಷಭೂಷಣ ತೊಟ್ಟು, ಸಂಗೀತಕ್ಕೆ ತಕ್ಕಂತೆ ಪುಟಾಣಿಗಳು ಅದ್ಭುತವಾದ ಪ್ರದರ್ಶನವನ್ನು ನೀಡಿ, ನೋಡುಗರ ಕಣ್ಮನ ಸೆಳೆದರು.
ಆಧುನಿಕ ಯುಗದ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಸಾಂಸ್ಕೃತಿಕ, ಪರಂಪರೆಯ ಮಹನೀಯರ ಉಡುಗೆ-ತೊಡುಗೆ ತೊಟ್ಟು, ಭಾರತೀಯ ಸಂಸ್ಕೃತಿ ಕುರಿತು ವೇದಿಕೆ ಮೇಲೆ ಸುಂದರವಾದ ಪ್ರದರ್ಶನ ನೀಡಿದ್ದು, ನೆರೆದಿದ್ದ ನೂರಾರು ಜನರ ಗಮನ ಸೆಳೆಯಿತು.