
module:31facing:0; ?hw-remosaic: 0; ?touch: (0.31166667, 0.31166667); ?modeInfo: Beauty ; ?sceneMode: Night; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:31facing:0; hw-remosaic: 0; touch: (0.31166667, 0.31166667); modeInfo: Beauty ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
ಔರಾದ:-ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಅನೇಕ ಗಂಟೆಗಳನ್ನು ವಿನಿಯೋಗಿಸುವ ಅಗತ್ಯವಿಲ್ಲ. ನಿತ್ಯವೂ ನಮ್ಮ ಯೋಚನೆಗಳು, ಭಾವನೆಗಳು ಹಾಗೂ ವರ್ತನೆಗಳು ಹೇಗಿವೆ, ಅವುಗಳ ಮೂಲ ಎಲ್ಲಿದೆ ಮತ್ತು ಏನನ್ನು ಸರಿಪಡಿಸಿಕೊಳ್ಳಬೇಕು ಎಂಬ ಆತ್ಮಾವಲೋಕನ ಮಾಡಿಕೊಂಡಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂದು ಸಂತಪುರ ಹೋಲಿ ಕ್ರ್ಯಾಸ್ ಚರ್ಚ್ ಸಹ ನಿರ್ದೇಶಕ ಫಾದರ್ ಕ್ಲಿವನ್ ಗೊಮ್ಸ್ ನುಡಿದರು.
ತಾಲೂಕಿನ ಸಂತಪುರ ದೀಪಾಲಯ ಸಂಸ್ಥೆ ಮತ್ತು ಹುಮ್ನಾಬಾದ್ ಆರ್ ಬಿಟ್ ಸಂಸ್ಥೆ ಮತ್ತು ಲಿವ್ ಲವ್ ಲಾಫ್ ಸಮಾಜ ಸೇವೆ ಸಂಸ್ಥೆಗಳ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು , ಮಾನಸಿಕವಾಗಿ ಸದೃಢರಾಗಲು ಎಲ್ಲರೂ ತಮಗೋಸ್ಕರ ಇಡೀ ದಿನದಲ್ಲಿ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಸ್ವಯಂಚಿಂತನೆಗೆ ಮೀಸಲಿಡಬೇಕುಡಬೇಕು. ಮಾನಸಿಕ ರೋಗಿಗಳು ಮೂಡನಂಬಿಕೆಗೆ ಬಲಿಯಾಗದೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಅವರಿಂದ ಸರಿಯಾದ ಚಿಕಿತ್ಸೆ ಪಡೆದು ಗುಣಮುಖರಾಗಬೇಕು. ಚಿಂತೆ ಚಿತೆಗೆ ಮೂಲ ಕಾರಣವಾಗಿರುವುದರಿಂದ ಸಾರ್ವಜನಿಕರು ದಿನಾಲು ಯಾವುದೇ ಚಿಂತೆಗೆ ಒಳಗಾಗಬಾರದು. ಬದುಕಿನಲ್ಲಿ ನಗುನಗುತ ಕಾಲ ಕಳೆಯಬೇಕು. ಮಾನಸಿಕ ರೋಗಿಗಳಿಗೆ ಧೈರ್ಯ ತುಂಬಬೇಕು. ಅವರೊಂದಿಗೆ ಉತ್ತಮ ರೀತಿಯಿಂದ ವರ್ತಿಸಬೇಕು ಎಂದರು.
ಹೆಡ್ಗಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪ್ರವೀಣ್ ಕುಮಾರ್ ಮಾತನಾಡಿ , ಮಾನಸಿಕ ಆರೋಗ್ಯದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ಸುತ್ತಲಿನ ಕಳಂಕವನ್ನು ಕಡಿಮೆ ಮಾಡಲು ಎಲ್ಲರು ಪಣ ತೊಡಬೇಕು. ಸ್ವಸ್ಥ ಜೀವನ ಸುಖಮಯ ಜೀವನ,ಆರೋಗ್ಯಕರ ಜೀವನ ಸಂತೋಷದ ಜೀವನ ಎನ್ನುವ ಧ್ಯೇಯ ವಾಕ್ಯದೊಂದಿಗೆ ವಿಶ್ವದಾದ್ಯಂತ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು ಇದರ ಮೂಲ ಉದ್ದೇಶ ವಾಗಿದೆ.ಪ್ರತಿಯೊಬ್ಬರಿಗೂ ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಪ್ರೋತ್ಸಾಹಿಸಬೇಕು.ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು ಈ ಪರಿಸ್ಥಿತಿಗಳಿಂದ ಬಳಲುತ್ತಿರುವವರಿಗೆ ಕಡಿಮೆ ಒಂಟಿತನವನ್ನು ಅನುಭವಿಸಲು ಸಹಾಯ ಮಾಡಬೇಕು ಎಂದರು.
ಹುಮನಾಬಾದ ಅರ್ಬಿಟ್ ಸಂಸ್ಥೆ ಸಹ ನಿರ್ದೇಶಕ ಫಾ. ವಿಜಯ ಮಾತನಾಡಿದರು.
ಮರಿಯಾ ಕ್ರಪಾ ಮುಖ್ಯಸ್ಥೆ ಸಿಸ್ಟರ್ ರೀಮಾ, ದೀಪಾಲಯ ಸಮಾಜ ಸೇವೆ ಸಂಸ್ಥೆ ಸಹ ನಿರ್ದೇಶಕಿ ಸಿಸ್ಟರ್ ಲಿನೆಟ್, ಸಿಸ್ಟರ್ ಶಕುಂದಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಚಂದ್ರಕಾಂತ, ಕವಿತಾ, ರಫೀದ್, ಬಬನ್, ಶಿವಕುಮಾರ್, ಸಂಗೀತಾ ಇತರರಿದ್ದರು.
ಸುಂದರರಾಜ ಸ್ವಾಗತಿಸಿದರು .ಸುಭಾಷ್ ಮಾನಕಾರಿ ನಿರೂಪಣೆ ಮಾಡಿದರು.