
Oplus_131072
ಬೀದರ:- ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಮಾನಸಿಕ ವಿಭಾಗದ ವತಿಯಿಂದ ಬೀದರ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಆಚರಣೆ ಕಾರ್ಯಕ್ರಮಕ್ಕೆ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಶಿವಕುಮಾರ ಶೇಟಕಾರ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ದೈಹಿಕ ಆರೋಗ್ಯಕ್ಕಿಂತ ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಲ್ಲಿ ವ್ಯಕ್ತಿಯು ಸಂಪುರ್ಣ ಆರೋಗ್ಯವಂತ ವ್ಯಕ್ತಿಯಾಗಲು ಸಾಧ್ಯ. ನಮ್ಮ ಸಂಸ್ಥೆಯ ಮಾನಸಿಕ ವಿಭಾಗದ ವತಿಯಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ರಾಯಚೂರು ನವೋದಯ ವೈದ್ಯಕೀಯ ಕಾಲೇಜಿನ ಮಾನಸಿಕ ವಿಭಾಗದ ಮುಖ್ಯಸ್ಥ ಡಾ.ರಾಹುಲ್ ಮಂದಕನಳ್ಳಿ ಮಾತನಾಡಿ, ವೈದ್ಯರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಆತ್ಮಹತ್ಯೆ ತಡೆಗಟ್ಟುವ ಕ್ರಮಗಳ ಕುರಿತು ಉಪನ್ಯಾಸ ನೀಡಿದರು. ಮಾನಸಿಕ ವಿಭಾಗದ ಮುಖ್ಯಸ್ಥರಾದ ಡಾ.ಶ್ವೇತಾ ಕುನಕೇರಿ ಮಾತನಾಡಿ ದೈಹಿಕ ಚಟುವಟಿಕೆಯಲ್ಲಿ ಕಡಿಮೆ ಸಮಯ ನೀಡಿ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಮಯ ವ್ಯಯ ಮಾಡುತ್ತಿರುವುದರಿಂದ ಹಲವಾರು ಮಾನಸಿಕ ಕಾಯಿಲೆಗಳು ಉಲ್ಭಣಗೊಳ್ಳುತ್ತಿದ್ದು ತುಂಬಾ ಆತಂಕಕಾರಿಯಾಗಿದೆ ಇದನ್ನು ತಡೆಗಟ್ಟಲು ಹೆಚ್ಚಿನ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಶಸ್ತç ಚಿಕಿತ್ಸಕರಾದ ಡಾ.ಮಹೇಶ ಬಿರಾದಾರ, ವೈದ್ಯಕೀಯ ಅಧೀಕ್ಷಕರಾದ ಡಾ.ಶಿವಯೋಗಿ ಬಾಲಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಕಿರಣಪಾಟೀಲ್, ಡಾ.ರಾಘವೇಂದ್ರ ವಾಗೋಲೆ, ಡಾ.ಅಭಿಜೀತ್ ಪಾಟೀಲ್, ಡಾ.ಪ್ರೀತಮ್, ಡಾ.ಪೂರ್ಣಿಮಾ, ಮನೋಸಾಮಾಜಿಕ ತಜ್ಞರಾದ ನಾಗರಾಜ ಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಡಾ.ಪ್ರೀತಮ್ ಹಾಗೂ ವಂದನಾರ್ಪಣೆಯನ್ನು ಡಾ.ರಾಘವೇಂದ್ರ ವಾಗಲೋಲೆ ನಡೆಸಿಕೊಟ್ಟರು.