
ಔರಾದ:-ಭಾರತೀಯ ಭವ್ಯ ಪರಂಪರೆಯಲ್ಲಿ
ಅನೇಕ ಹಬ್ಬ ಹರಿದಿನಗಳು ಸಹಜ. ಆದರೆ ಕೈಗಾರಿಕಾ ಕ್ಷೇತ್ರದಲ್ಲಿ ಆಯುಧ ಪೂಜೆ ಹಿನ್ನೆಲೆಯಲ್ಲಿ ಇಡೀ ಕೈಗಾರಿಕಾ ಕ್ಷೇತ್ರ ಸ್ವಚ್ಛ ಗೊಳಿಸಿ ಅತಿ ಉಲ್ಲಾಸ ದೊಂದಿಗೆ ಆಚರಿಸುವ ಅಪರೂಪ ಸಂಭ್ರಮ ಇದಾಗಿದೆ ಎಂದು ಕ.ಸಾ.ಪ. ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ನುಡಿದರು.
ಪಟ್ಟಣದ ಬಸವನ ವಾಡಿ ಥಾಂಡಾ ಹತ್ತಿರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ *ಆಯುಧ ಪೂಜೆ ಹಾಗೂ ರತನ ಟಾಟಾಜಿ ಅವರ ಶ್ರದ್ಧಾಂಜಲಿ* ಸಭೆಯಲ್ಲಿ ಮಾತನಾಡಿದ ಶಿವಶಂಕರ ಟೋಕರೆ ಟಾಟಾದಿಂದ ವಿಶೇಷವಾಗಿ ನಮ್ಮ ಕೌಶಲ್ಯ ಕ್ಷೇತ್ರಕ್ಕೆ ತುಂಬ ಸಹಕಾರ ಸಿಕ್ಕಿದೆ. ನಾಲ್ಕು ವರ್ಷಗಳ ಹಿಂದೆ ಕರ್ನಾಟಕ ಸರಕಾರ ಹಾಗೂ ಟಾಟಾ ಸಹಯೋಗದೊಂದಿಗೆ ಔರಾದನಲ್ಲಿ ಮೂವತ್ಮೂರು ಕೋಟಿ ಅನುದಾದಲ್ಲಿ ಪರಿಪೂರ್ಣ ಯಂತ್ರೋಪಕರಣಗಳು ಹಾಗೂ ಕಟ್ಟಡ ನಿರ್ಮಾಣವಾಗಿ ಇಂದು ಪ್ರತಿವರ್ಷ 44 ಕುಶಲಕರ್ಮಿಗಳಿಗೆ ರೊಬೋಟ್ ಹಾಗೂ ಎಂ ಇ ವ್ಹಿ ತರಬೇತಿ ನಡೆಸಲಾಗುತ್ತಿದೆ. ಈಗಾಗಲೆ ತರಬೇತಿ ಪಡೆದ ಈ ತಾಲೂಕಿನ ಟಾಟಾ ತರಬೇತಿಯನ್ನು ಪಡೆದವರು
ನೌಕರಿ ಮಾಡಿ ಉಪಜೀವನ ಸಾಗಿಸುತ್ತಿರುವುದಕ್ಕೆ ರತನ ಟಾಟಾ ಅವರ ಕೊಡುಗೆ ಬಹಳ ದೊಡ್ಡದ್ದಾಗಿದೆ
ಎಂದು ಅವರ ಸಹಕಾರ ಸ್ಮರಣೆ ಮಾಡಿ ಇದರ ಕ್ಷಿಪ್ರ ಅನುಷ್ಠಾನ ಅಭಿವೃದ್ಧಿ ಹರಿಕಾರರಾದ ಮಾನ್ಯ ಶ್ರೀ ಪ್ರಭು ಬಿ ಚವ್ಹಾಣ ಶಾಸಕರ ದೂರದೃಷ್ಟಿ ಸಹ ಇಲ್ಲಿ ಮರೆಯಲಾಗದು.ತಾಲೂಕಿನ ಅನೇಕ ಯೋಜನೆಗಳಲ್ಲಿ ಕೌಶಲ ಅಭಿವೃದ್ಧಿ ಮಾಡಿ ಹಿಂದುಳಿದ ಭಾಗಕ್ಕೆ ಕಾಯಕಲ್ಪ ನೀಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ತರಬೇತಿ ಅಧಿಕಾರಿಗಳಾದ ಯುಸೂಫ್ ಮಿಯ್ಯ ಜೋಜನಾ ಮಾತಾಡಿ ನಮ್ಮ ಸರಕಾರಿ ಐಟಿಐನಲ್ಲಿ
ಕೌಶಲ ಕಲಿತ ಮಕ್ಕಳಿಗೆ ಟಾಟಾ ಯೋಜನೆ ಯಿಂದ ಬಹು ಕೌಶಲ್ಯ ಕಲಿಯಲು ಅನುಕೂಲವಾಗಿದೆ.
ಇಲ್ಲಿ ಕೊರತೆ ಎಂಬುದಿಲ್ಲ, ಯಂತ್ರೋಪಕರಣ ಹಾಗೂ ಸಂಪನ್ಮೂಲವ್ಯಕ್ತಿಗಳಿರುವುದರಿಂದಲೇ ಇಂದು ಪಾಸಾದ ನಮ್ಮ ಎಲ್ಲ ಮಕ್ಕಳಿಗೆ ಬೆಂಗಳೂರಿನ ಬಿ.ಇ.ಎಲ್. ಕಾರರ್ಖಾನೆಯವರು ಅಪ್ರಂಟಿಷಿಪ್ ತರಬೇತಿ ಅಯ್ಕೆ ಮಾಡಿರುವುದು ಸಂತೃಪ್ತಿ ತಂದಿದೆ. ನಮ್ಮ ಭಾಗಕ್ಕೆ ಟಾಟಾನವರ ಬಹು ದೊಡ್ಡ ಕೊಡುಗೆಯಾಗಿದ್ದು, ಅವರು ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರ ಆತ್ಮಕ್ಕೆ ಎರಡು ನಿಮಿಷಗಳ ಕಾಲ ಮೌನ ವಹಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಮೊದಲಿಗೆ ಕಛೇರಿ ಅಧೀಕ್ಷಕರಾದ
ಸುದರ್ಶನಕುಮಾರ ಮಂಗಲಗಿಕರ
ಸ್ವಾಗತಿಸಿದರೆ, ಕಿ ತ ಅ ಧನರಾಜ ಸ್ವಾಮಿ ನಿರೂಪಿಸಿದರೆ ಗಂಗಾರಾಮ ಯನಗುಂದಾ ವಂದಿಸಿದರು.ಕಾರ್ಯಕ್ರಮದಲ್ಲಿ ಚಂದ್ರಮೋಹನ ಬಂಗಾರೆ,ಮರಖಲೆ ಸಂಗಮೇಶ, ಸಲೀಮ, ರಾಣಿ ಸಿಬ್ಬಂದಿ ಜೊತೆಗೆ ವಿವಿಧ ವೃತ್ತಿಯ ತರಬೇತಿದಾರರು ಪಾಲ್ಗೊಂಡಿದ್ದರು.