
ಔರಾದ:-ಔರಾದ ಮತ್ತು ಕಮಲನಗರ ತಾಲೂಕಿ ಅಧಿನದಲ್ಲಿ ಬರುವ ಕಟ್ಟಡ ಕಾರ್ಮಿಕರಿಗೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಬೆಂಗಳೂರು ರವರ ವತಿಯಿಂದ ಕಟ್ಟಡ ಕಾರ್ಮಿಕರಿಗೆ “ಆರ್.ಪಿ.ಎಲ್. ತರಬೇತಿ” ಆಯೋಜಿಸಲು ನೈಜ್ಯ ಕಟ್ಟಡ ಕಾರ್ಮಿಕರು,
ಈ ಕೆಳಕಂಡಂತೆ ಎಲ್ಲಾ ದಾಖಲಾತಿಗಳು ತೆಗೆದುಕೊಂಡು ದಿನಾಂಕ: 15.10.2024, ಸಮಯ: 5:00 ರವರೆಗೆ ಕಾರ್ಮಿಕ ಇಲಾಖೆ, ಔರಾದ ವೃತ್ತ ಔರಾದ ಕಛೇರಿಗೆ ಬಂದು RPL ತರಬೇತಿಗಾಗಿ ನೋಂದಣಿ ಮಾಡಿಕೊಳ್ಳಲು ಜಿಲ್ಲಾ ವ್ಯವಸ್ಥೆಪಕರು ವೀರೇಶ ಮತ್ತು ಆನಂದ ಸಹಾಯಕ ವ್ಯವಸ್ಥೆಪಕರು 9611899691 ಇವರಿಗೆ ಸಂಪರ್ಕಿಸಿ ನೋಂದಣಿ ಮಾಡಿ,ತರಬೇತಿ ಪಡೆಯಲು ಔರಾದ ತಾಲೂಕಿನ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರು ತಿಳಿಸಿರುತ್ತಾರೆ.
ಸಲ್ಲಿಸಬೇಕಾದ ದಾಖಲಾತಿಗಳು:-
1. ಲೇಬರ್ ಕಾರ್ಡ್,ಝರಾಕ್ಸ್ ಪ್ರತಿ.
2.ಆಧಾರ್ ಕಾರ್ಡ್, ಝರಾಕ್ಸ್ ಪ್ರತಿ.
3.ಬ್ಯಾಂಕ್ ಪಾಸ್ ಬುಕ್, ಝರಾಕ್ಸ್ ಪ್ರತಿ
4. ಮೊಬೈಲ್ ಸಂಖ್ಯೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಇಲಾಖೆ ಔರಾದ್ / ಕಮಲನಗರ ಕಚೇರಿಗೆ ಸಂಪರ್ಕಿಸಲು ಕೊರಲಾಗಿದೆ ಎಂದು ಕಾರ್ಮಿಕ ಇಲಾಖೆಯ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರು ತಿಳಿಸಿರುತ್ತಾರೆ.