
ಔರಾದ: ದೇವಿ ಪಾರ್ವತಿಯ ಪ್ರತಿರೂಪ ಭವಾನಿ ನಮ್ಮ ಭಾಗದ ಭಕ್ತರ ಆರಾಧ್ಯ ದೈವ, ಭಕ್ತಿಯಿಂದ ಪೂಜಿಸಿದರೆ ವರನೀಡುವಳು ಈ ತಾಯಿ ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ, ದೇಗಲಮಡಿ ಮತ್ತು ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ನುಡಿದರು. ಔರಾದ ತಾಲ್ಲೂಕಿನ ಚಿಂತಕಿ ಗ್ರಾಮದಲ್ಲಿ ಇಚಿಗೆ ನಡೆದ ಜೈ ಭವಾನಿ ಮಾತಾ ನವರಾತ್ರಿ ಉತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಕ್ಷೇತ್ರಪತಿ ಶಿವಾಜಿ ಮಹಾರಾಜ ಈ ಅಂಬಾ ಭವಾನಿಯಿಂದ ವರಪಡಿದಿದರು. ಹೀಗಾಗಿ ಎಲ್ಲಾ ಕಡೆ ಜಯಪಡೆಯಲು ಸಾಧ್ಯವಾಯಿತ್ತು, ಈ ತಾಯಿ ಶಿಷ್ಟರ ಪಾಲಕ ದುಷ್ಟರ ನಾಶಕಳಾಗಿದಳು ಎಂದು ಹೇಳಿದರು.
ಜಾತಿ, ಮತ, ಪಂಥಗಳ ಭೇದ ಮಾಡದೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಬೇಕು. ಹೃದಯ ವೈಶಾಲ್ಯತೆ ಮೆರೆಯಬೇಕು. ದಯೆ, ಕರುಣೆಯಂಥ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಗಂಡ – ಹೆಂಡತಿಯಲ್ಲಿ ಸಮನ್ವಯತೆ ಇರಬೇಕು. ಪಾಲಕರು ಮಕ್ಕಳಿಗೆ ನೈತಿಕತೆ, ಮಾನವೀಯತೆ ಒಳಗೊಂಡ ಸಂಸ್ಕಾರಯುತ ಶಿಕ್ಷಣ ಕೊಡಬೇಕು. ಮಕ್ಕಳು ಪಾಲಕರ ಸೇವೆ ಮಾಡಿ ಋಣ ತೀರಿಸಬೇಕು ಎಂದು ತಿಳಿಸಿದರು.
ಜೀವನದ ಸಾರ್ಥಕತೆಗೆ ಬುದ್ಧ, ಬಸವಣ್ಣ, ಯೇಸು ಕ್ರೈಸ್ತ ಮೊದಲಾದ ಮಹಾ ಪುರುಷರ ತತ್ವಗಳನ್ನು ಪಾಲಿಸಬೇಕು ಎಂದರು.
ಜೈ ಭವಾನಿ ಮಾತಾ ನವರಾತ್ರಿ ಉತ್ಸವ ಒಗ್ಗಟ್ಟಿನಿಂದ ನಡೆಸಿಕೊಂಡು ಬರುತ್ತಿರುವ ಚಿಂತಕಿ ಗ್ರಾಮಸ್ಥರ ಕಾರ್ಯ ಶ್ಲಾಘನೀಯ. ಗ್ರಾಮಸ್ಥರ ಮೇಲೆ ದೇವಿ ಕೃಪೆ ಸದಾ ಇರಲಿ ಎಂದು ಆಶಿಸಿದರು.
ಪ್ರಮುಖರಾದ ಹುನಗೊಂಡಾ ಬಾಂಬ್ರೆ, ಪವನ ಪೂಜಾರಿ ಮತ್ತಿತರರು ಇದ್ದರು.