July 20, 2025

ಔರಾದ: ತಾಲೂಕಿನ ಬಾದಲಗಾಂವ ಗ್ರಾಮದಲ್ಲಿ ಬುಧವಾರ ಸೋಯಾಬಿನ್ ಮತ್ತು ಉದ್ದು ಖರೀದಿ ಕೇಂದ್ರವನ್ನು ಡಾ // ಶಿವಕುಮಾರ ಕುಂಬಾರ ಸಹಾಯಕ ನಿರ್ದೇಶಕರು ಕೃಷಿ ಮಾರಾಟ ಇಲಾಖೆ ಬೀದರ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಜಿಲ್ಲಾ ವ್ಯವಸ್ಥಾಪಕ ಮಲ್ಲಿಕಾರ್ಜುನ ಉದ್ಘಾಟಿಸಿದರು.

ಮುಂಗಾರು ಬೆಳೆಗಳನ್ನು ತಮ್ಮ ಜಲನಯನ ರೈತರ ಉತ್ಪಾದಕರ ಕಂಪನಿಗೆ ರೈತರು ತಮ್ಮ ಹೋಲದಲ್ಲಿ ಬೆಳೆದ ಧಾನ್ಯಗಳನ್ನು ಮಾರಾಟ ಮಾಡಲು ಮುಂದಾಗಬೇಕೆAದ ಅವರು ಖರೀದಿ ಕೇಂದ್ರದಲ್ಲಿ ಕೇಂದ್ರ ಸರ್ಕಾರದ ಬೆಂಬಲ ಯೋಜನೆಯಡಿ ನ್ಯಾಪೇಡ್ ಪರವಾಗಿ 2024-25ನೇ ಸಾಲಿನ ಎಫ್ ಎಕ್ಯೂ ಗುಣಮಟ್ಟದ ಬೆಳೆಗಳನ್ನು ಖರಿದಿ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಸೂಚನೆ ನೀಡಿದ ಪ್ರತಿಯೊಂದು ಕಾಳುಗಳಿಗೂ ಬೆಂಬಲ ಬೆಲೆ ಹಾಗೂ ಕೇಂದ್ರ ಸರ್ಕಾರ ಸೂಚಿಸಿದ ಮಾರ್ಗದರ್ಶನದಲ್ಲಿ ಪಡೆದುಕೊಳ್ಳಲಾಗುತ್ತದೆ ಎಂದರು.

ಕಡಿಮೆ ದರದಲ್ಲಿ ಹಾಗೂ ದಲ್ಲಾಳಿಗಳ ಮಾತಿಗೆ ರೈತರು ಮರುಳಾಗದೆ ಕಷ್ಟಪಟ್ಟು ಬೆಳೆಸಿದ ಬೆಳೆಗಳಿಗೆ ಹೆಚ್ಚಿನ ಲಾಭವನ್ನು ಪಡೆದುಕೊಂಡು ಆರ್ಥಿಕ ಅಭಿವೃದ್ಧಿಗಾಗಿ ಮುಂದಾಗಬೇಕೆAದು ಸಲಹೆ ನೀಡಿದರು.

ಬಾದಲಗಾಂವ ಜಲನಯನ ಖರಿದಿ ಕೇಂದ್ರದ ನಿರ್ದೇಶಕ ಶಿವಕುಮಾರ ಬಿರಾದರ ಮಾತನಾಡಿ,ತಾಲೂಕಿನಲ್ಲಿರುವ ಪ್ರತಿಯೊಬ್ಬ ರೈತರು ಇದರ ಲಾಭವನ್ನು ಪಡೆದುಕೊಳ್ಳ ಬಹುದಾಗಿದೆ. ಬೆಳೆ ಕಾಳುಗಳನ್ನು ಖರಿದಿ ಕೇಂದ್ರಕ್ಕೆ ತರುವ ಮುನ್ನ ರೈತರು ತಮ್ಮ Fid ಮತ್ತು ಆಧಾರ ಕಾರ್ಡ ಖಾತೆಯೊಂದಿಗೆೆ ಬಂದು ನೊಂದಣಿ ಮಾಡಿಸಿಕೊಂಡ ನಂತರ ತಮ್ಮ ಬೆಳೆಗಳನ್ನು ಮಾರಾಟಕ್ಕೆ ತರಬೇಕೆಂದು ಮನವಿ ಮಾಡಿದರು ಬ್ಯಾಂಕ್ ಖಾತೆಯ ಮೂಲಕ ರೈತರಿಗೆ ಸಂಸ್ಥೆಯಿದ ಹಣವನ್ನು ಜಮೆ ಮಾಡಲಾಗುತ್ತದೆ ಎಂದರು.

ಇಗಾಗಲೆ ನಮ್ಮ ಸಂಸ್ಥೆಯ ಸದಸ್ಯರು ಬಾದಲಗಾಂವ, ಮರಪಳ್ಳಿ,ತೇಂಗಪೂರ್,ಯನಗುoದಾ,ಮಮದಾಪೂರ ಸೇರಿದಂತೆ ಇನ್ನಿತರರ ಗ್ರಾಮಕ್ಕೆ ತೆರಳಿ ನೊಂದಣಿ ಮಾಡಿಸಿಕೊಳ್ಳುವುದರ ಜೋತೆಗೆ ರೈತರಿಗೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ ನಿಗಧಿಯಂತೆ ಕಾಳು ಖರಿದಿ ಮಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಲಾಗಿದೆ ಎಂದರು.

ಮಾರಾಟ ಮಹಾ ಮಂಡಳ ಎಡಿ ಮಾತನಾಡಿ, ರಾಜ್ಯದ ಗಡಿ ಭಾಗದಲ್ಲಿ ಜಲನಯನ ಸಂಸ್ಥೆ ಉತ್ತಮ ರೀತಿಯಲ್ಲಿ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ.ರಾಜ್ಯದಲ್ಲಿಯೇ ಉತ್ತಮ ಸಂಸ್ಥೆಯಾಗಿ ಬೆಳೆದು ಇನ್ನಷ್ಟು ರೈತರಿಗೆ ಸಹಕಾರ ನೀಡಲು ಸರ್ಕಾರದ ಹಾಗೂ ರೈತರ ಮದ್ಯೆ ಕೊಂಡಿಯಾಗಿ ಕೆಲಸ ಮಾಡಲೆಂದು ಹಾರೈಸಿದರು.

ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆಯಲ್ಲಿ ಸೋಯಾಬಿನ್ ಕ್ವಿಂಟಲಗೆ 4200 ಇದ್ದರೆ ನಮ್ಮ ಜಲನಯನ ಬಾದಲಗಾಂವ ಸಂಸ್ಥೆಯಲ್ಲಿ 4989 ಪ್ರತಿ ಕ್ವಿಂಟಲ್ಗೆ ನೀಡಲಾಗುತ್ತಿದೆ ಎಂದರು.

ಸೋಫಾನರಾವ ಶೇರಿಕಾರ ಅರವಿಂದ ಬಿರಾದರ,ಬಾಬುರಾವ ಪಂಚಾಳ,ತುಳಸೀರಾಮ್,ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771