July 20, 2025

ಔರಾದ:-ಖೆರಡಾನಿಂದ ಚಿಕ್ಲಿ(ಯು) ಮಹಾರಾಷ್ಟ್ರದ ಬಾಡರ ವರೆಗೆ 8.5 ಕೋಟಿ ವೆಚ್ಚದಲ್ಲಿ ರಸ್ತೆ ಕೇಲಸದ ಸ್ಥಳಕ್ಕೆ ಮಾಜಿ ಸಚಿವರು ಹಾಗೂ ಔರಾದ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಅ.5ರಂದು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು.

ನಿರ್ಮಾಣ ಹಂತದಲ್ಲಿರುವ ರಸ್ತೆಯ ಮೇಲೆ ನಡೆದಾಡಿ ಕೆಲಸ ಹೇಗಾಗಿದೆ ಎನ್ನುವುನ್ನು ಗಮನಿಸಿದರು. ರಸ್ತೆಯ ಅಳತೆ ಎಷ್ಟು ಮಾಡುತ್ತಿದ್ದೀರಿ ?ಎಷ್ಟು ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಸ್ಥಳದಲ್ಲಿದ್ದವರಿಗೆ ಪ್ರಶ್ನಿಸುವ ಮೂಲಕ ಕಾಮಗಾರಿಯ ಕುರಿತು ವಿವರಣೆ ಪಡೆದರು.

ಚಿಕ್ಲಿ(ಯು), ದಾಬಕಾ ಸೇರಿದಂತೆ ಹಲವಾರು ಗ್ರಾಮಸ್ಥರಿಗೆ ಅನುಕೂಲವಾಗಲಿರುವ ಈ ರಸ್ತೆ ಬಹು ನಿರೀಕ್ಷಿತ ಕೆಲಸವಾಗಿದ್ದು, ಜನತೆಯ ಬೇಡಿಕೆಯಂತೆ 8.5 ಕೋಟಿ ವೆಚ್ಚದಲ್ಲಿ ರಸ್ತೆ ಕೇಲಸಾ ಮಾಡಲಾಗುತ್ತಿದೆ ಕೆಲಸ ಅಚ್ಚುಕಟ್ಟಾಗಿ ಆಗಬೇಕು ಗುತ್ತಿಗೆದಾರರಿಗೆ ಸೂಚಿಸಿದರು.

ರಸ್ತೆಗೆ ಗುಣಮಟ್ಟದ ಸಾಮಗ್ರಿಗಳನ್ನು ಬಳಕೆ ಮಾಡಬೇಕು. ಟೆಂಡರ್ ವೇಳೆ ನೀಡಿರುವ ಮಾನದಂಡಗಳ ಅನ್ವಯ ಕಾಮಗಾರಿ ನಡೆಯಬೇಕು.ಕಲ್ಲು,ಮಣ್ಣು ಹಾಗೂ ಮತ್ತಿತರೆ ಸಲಕರಣೆಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಕೆ ಮಾಡಬೇಕು.ಮುಂದಿನ ದಿನಗಳಲ್ಲಿ ಈ ರಸ್ತೆಯ ಕುರಿತು ದೂರುಗಳು ಬಾರದ ರೀತಿಯಲ್ಲಿ ಕೆಲಸ ಸರಿಯಾಗಿ ಮಾಡಬೇಕೆಂದು ಗುತ್ತಿಗೆದಾರರಿಗೆ
ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ಸಂಜು ಮೆಕರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771