
ಔರಾದ:-ನವರಾತ್ರಿ ಸಂದರ್ಭ ಶಕ್ತಿ ದೇವತೆಗಳ ಆರಾಧನೆ ಮಾಡಿ, ಒಂಬತ್ತು ದಿನಗಳ ಕಾಲ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿ ಎಲ್ಲರ ಓಳತಿಗಾಗಿ ಬೇಡಿಕೊಳ್ಳುವುದೇ ಆಯುಧ ಪೂಜೆಯ ಮೂಲ ಉದ್ದೇಶವಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಬಿಸಿ ಟ್ರಸ್ಟ್ ತಾಲೂಕು ಯೋಜನಾಧಿಕಾರಿ ರಾಘವೇಂದ್ರಗೌಡಾ ನುಡಿದರು.
ರವಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಚೇರಿಯಲ್ಲಿ ನವರಾತ್ರಿ ಅಂಗವಾಗಿ ಆಯುಧಪೂಜೆ(ಲಕ್ಷ್ಮಿಪೂಜೆ) ಹೋಮಹವನ ನೇರವೇರಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರ ಮಂಜುನಾಥ ಸ್ವಾಮಿ ಹಾಗು ದೇವತೆಗಳ ಅನುಗ್ರಹದಿಂದ ಉತ್ತಮ ಮಳೆ ಬೆಳೆಯಾಗಿ ಕನ್ನಡ ನಾಡು ಸಂಪದ್ಭರಿತವಾಗಿರಲಿ ಎಂದು ಆಶಿಸಿದರು.
ಜನಜಾಗ್ರತಿ ವೇದಿಕೆ ಜಿಲ್ಲಾ ಉಪಾದ್ಯಕ್ಷ ಡಾ. ಶಾಲಿವಾನ್ ಉದಗಿರೆ ಮಾತನಾಡಿ, ಎಲ್ಲರು ಒಗ್ಗಟ್ಟಾಗಿ ಒಂದೆಡೆ ಸೇರಿ ಹಬ್ಬ ಆಚರಿಸುವದರಲ್ಲಿ ನಮ್ಮಲ್ಲಿ ಭಾವೈಕ್ಯತೆ ಮೂಡಿ ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡುತ್ತದೆ ಎಂದರು.
ಪೂಜಾ ನಿಮಿತ್ಯ ಕಚೇರಿಗೆ ತಳಿರು ತೋರಣಗಳಿಂದ ಹಾಗು ವಿವಿಧ ಬಗೆ ಬಗೆಯ ಹೂಗಳಿಂದ ಅಲಂಕರಿಸಲಾಯಿತು. ಪುರೋಹಿತರ ನೇತೃತ್ವದಲ್ಲಿ ನಾನಾ ಪೂಜಾ ವಿಧಿವಿಧಾನಗಳು ಜರುಗಿ, ಲಕ್ಷ್ಮಿ ಪೂಜೆ ಜರುಗಿದ ನಂತರ ಪ್ರಸಾದ ವ್ಯವಸ್ಥೆ ಮಾಡಲಾಯಿತು.
ಜನ ಜಾಗೃತಿ ವೇದಿಕೆಯ ಸದಸ್ಯ ಮಲ್ಲಪ್ಪ ಗೌಡಾ, ಕಲ್ಪನಾ ಪಾಟೀಲ್, ಬೀರಪ್ಪ, ಸಂಗೀತಾ, ಆದೇಶ, ಉಮೇಶ ಗೌಡಾ, ಪೂಜಾ, ಅನುಸೂಯಾ, ಸಚೀನ್, ಅಂಕುಶ, ಮಹಾದೇವ್, ನೆಹರು, ಇದ್ದರು