
ಔರಾದ:-ಯುವ ವಿದ್ಯಾರ್ಥಿಗಳು ಹಾಗೂ ಜನತೆ ಪಾಶ್ಚಾತ್ಯ ಸಂಸ್ಕೃತಿಗಳಿಗೆ ಮಾರಿ ಹೋಗುತ್ತಿದ್ದಾರೆ. ಭಾರತೀಯರು ಭಾರತೀಯ ಸಂಸ್ಕೃತಿಯನ್ನು ತಾತ್ವಿಕ ವಿಚಾರಗಳನ್ನು ಮೈಗೂಡಿಸಿಕೊಂಡು ನಮ್ಮ ಸಂಸ್ಕೃತಿ ರಕ್ಷಿಸಬೇಕು ಎಂದು ಔರಾದ ತಾಲೂಕಾ ಜನಪದ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸಂಜೀವಕುಮಾರ ಜುಮ್ಮಾ ಹೇಳಿದರು.
ಸಂತಪುರ್ ಅನುಭವ ಮಂಟಪ ಶಿಕ್ಷಣ ಸಮುಚ್ಚಯದ ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜು ಸಹಕಾರದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ್ ಮಶಾಸನ ಪಡೆಯುವ ಹಿರಿಯ ಕಲಾವಿದರಿಂದ ಶುಕ್ರವಾರ ತಿಂಗಳಿಗೊಂದು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಹಾಡುಗಳನ್ನು ಕಟ್ಟುವುದು ಮತ್ತು ಜೀವನದಲ್ಲಿ ಬದುಕುವ ಮೌಲ್ಯಗಳು ಭಾರತೀಯರು ಪ್ರತಿಯೊಬ್ಬ ಪ್ರಜೆಗಳು ವಿನೂತನ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾದ ಪ್ರಾಂಶುಪಾಲ ಗುರ್ಪ್ರೀತ್ ಕೌರ್, ನವೀಲಕುಮಾರ ಉತ್ಕಾರ್ ಉಪನ್ಯಾಸಕರಾದ ಶಿವಪುತ್ರ ಧರಣಿ, ಸುಧಾ ಕೌಟಿಗೆ, ವನದೇವಿ ಎಕ್ಕಳೆ, ಮೀರಾತಾಯಿ ಕಾಂಬಳೆ, ಪ್ರಿಯಾಂಕಾ ಗುನ್ನಳ್ಳಿಕರ್, ಅಶ್ವಿನಿ ಹಿಂದೊಡ್ಡಿ, ನಿರ್ಮಲಾ ಜಮಾದಾರ,ವನದೇವಿ ಎಕ್ಕಳೆ ಹಾಗೂ ಹಿರಿಯ ಕಲಾವಿದರಾದ ತಿರುಪತಿ ಪಂಚಾಳ, ಶರಣಯ್ಯ ಸ್ವಾಮಿ, ರಾಮ್ ಶೆಟ್ಟಿ ಬಂಬಳಗೆ, ಗುಂಡಪ್ಪ ಜೊನ್ನೆಕೇರಿ, ಭೋಜ ರೆಡ್ಡಿ ಚಿಂತಾಕೆ, ಚೆನ್ನಪ್ಪ ಕೋರೆ, ಶಿವಾನಂದ್ ಪಾಟೀಲ್, ಬಾಬುರಾವ್ ದೇಸಾಯಿ, ಸಂಗಪ್ಪ ದೆಗಲವಾಡೆ, ರಘುನಾಥ್ ಕೋಳಿ, ವಿಠಲರಾವ ಪಾಂಚಾಳ ಇದ್ದರು.
ಮಶಾಸನ ಪಡೆಯುವ ಕಲಾವಿದರು ಜನಪದ ಹಾಡುಗಳು ಹಾಗೂ ಇನ್ನಿತರ ಭಾರತೀಯ ಸಂಸ್ಕೃತಿಕ ಹಾಡುಗಳನ್ನು ಹಾಡಿ ವಿದ್ಯಾರ್ಥಿಗಳಿಗೆ ಉಲ್ಲಾಸ ಗೊಳಿಸಿದರು.