
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಔರಾದ:-ಕಮಲನಗರ ತಾಲೂಕಿನ ಠಾಣಾಕುಶನೂರನಲ್ಲಿ ದಸರಾ ಹಬ್ಬದ ನಿಮಿತ್ಯ ಸಂಜೀವಿನಿ ಮಾಸಿಕ ಸಂತೆಮೇಳ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಾಣಿಕರಾವ ಪಾಟಿಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರು ಹೆಚ್ಚಿನ ಮಟ್ಟದ ಉತ್ಪಾದನೆ ಮಾಡುವ ಮೂಲಕ ತಾವೆಲ್ಲರೂ ಅಭಿವೃದ್ಧಿಯಾಗಬೇಕು ಮತ್ತು ವಿಶ್ವ ಕರ್ಮ ಯೋಜನೆ ಕುರಿತು ಮಾಹಿತಿ ನೀಡಿದರು ತಮಗೆ ಬ್ಯಾಂಕಿನ ಬಗ್ಗೆ ಇತರೆ ಎನೆ ಸಮಸ್ಯೆ ಇದ್ದರೂ ನಮಗೆ ತಿಳಿಸಿ ಎಂದು ಎಲ್ಲರಿಗೂ ಪ್ರೋತ್ಸಾಹಿಸಿ ಮಾರ್ಗದರ್ಶನ ನೀಡಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಪ್ರಭುದೇವ ರವರು ಕಾರ್ಯಕ್ರಮನುದ್ದೆಶಿಸಿ ಮಾತನಾಡಿ PMJJBY PMSBY APY ಬಗ್ಗೆ ಮತ್ತು ಸ್ವ ಸಹಾಯ ಸಂಘದ ಮಹಿಳೆಯರಿಗೆ ಸಾಲವನ್ನು ನೀಡಲಾಗುವುದು ಎಂದು ತಿಳಿಸಿದರು.
ಗಿರೀಶ್ ವಡಿಯಾರ್ ರವರು ಸಂತೆಮೇಳದಲ್ಲಿ ಹೆಚ್ಚು ಹೆಚ್ಚು ಉತ್ಪನ್ನಗಳ ಮಾರಾಟ ಮಾಡಬೇಕು ಎಂದು ತಿಳಿಸಿದ್ದಾರೆ.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಕು ಕವಿತಾ ಬಿರಾದಾರವರು ಕಾರ್ಯಕ್ರಮದ ಪ್ರಾಸ್ತಾವಿಕವಾಗಿ ಮಾತನಾಡಿದರು ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆಯಡಿಯಲ್ಲಿ ಸ್ವ ಸಹಾಯ ಸಂಘದ ಮಹಿಳೆಯರು ಉತ್ಪಾದಿಸುವ ಚಟುವಟಿಕೆಗಳ ಮಾರಾಟ ಮಾಡಲು ಸರ್ಕಾರ ಈ ಸಂಜೀವಿನಿ ಮಾಸಿಕ ಸಂತೆಮೇಳದಲ್ಲಿ ಮಾರಾಟ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಕಲ್ಪಿಸಿ ಕೊಟ್ಟಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ತಾಲೂಕು ವ್ಯವಸ್ಥಾಪಕರು ನಾಗಪ್ಪ ಕಂಬಾರಿ ಕಾರ್ಯಕ್ರಮ ನಿರೂಪಿಸಿದರು ಲಲಿತಾ MBK ರವರು ಸ್ವಾಗತಿಸಿದರು ಕಾರ್ಯಕ್ರಮದಲ್ಲಿ LCRP MBK ಕೃಷಿ ಸಖಿ ಪಶು ಸಖಿ ಸ್ವ ಸಹಾಯ ಸಂಘದ ಮಹಿಳೆಯರು, ಕೇಶವರಾವ್ ರಾಜೇಂದ್ರ ಭಾಗವಹಿಸಿದರು.