
ಔರಾದ ತಾಲ್ಲೂಕಾ ಪಂಚಾಯತ ಕಛೆರಿಯಲ್ಲಿ ನಡೆದ ಕಾರ್ಮಿಕ ಇಲಾಖೆ / ತಾಲೂಕ ಕಾನೂನು ಸೇವಾ ಸಮಿತಿ / ಕಾನೂನು ತಾಲೂಕ ನ್ಯಾಯವಾದಿಗಳ ಸಂಘ /ಜಿಲ್ಲಾ ಬಾಲಕಾರ್ಮಿಕರ ಸೊಸೈಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಉದ್ಯೋಗ ದಾತರಿಗೆ, ಉದ್ಯೋಗದಾತರ ಸಂಘಟನೆಗಳಿಗೆ ಮತ್ತು ಸಂಘಟಿತ ಅಸಂಘಟಿತ ಕಾರ್ಮಿಕರಿಗೆ ಅನುಷ್ಠಾನಗೊಳುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳು ಮತ್ತು ಯೋಜನೆಗಳ ಕುರಿತು ತಾಲೂಕು ಮಟ್ಟದ ಕಾರ್ಯಗಾರ ಹಾಗೂ ಅಧ್ಯಕ್ಷರು ತಾಲೂಕಾ ಕಾನೂನು ಸೇವಾ ಸಮಿತಿ ಔರಾದ್ ರವರು ಉದ್ಘಾಟಿಸಿ, ಹಾಜಿ ಹುಸೇನ್ ಸಾಬ್ ಯಾದವಾಡ ಹಿರಿಯ ಸಿವಿಲ್ ನ್ಯಾಯಧೀಶರು ಉದ್ಘಾಟನೆ ನೆವರಿಸಿ ಮಾತನಾಡಿದ್ದರು.
ಕಾನೂನು ಬಗ್ಗೆ ಅರೀತಿಕೊಂಡು ಕಾನೂನು ಪಾಲನೆಯನ್ನು ನಾವೆಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಮತ್ತು ಕಾನೂನಿಗೆ ಗೌರವ ಕೊಡಬೇಕು ಎಂದು ತಿಳಸಿದ್ದರು.
ಕಾರ್ಯಗಾರದಲ್ಲಿ ಬಾಲಾಜಿ ಕಂಬಾರ ಕಾರ್ಯದರ್ಶಿಗಳು ನ್ಯಾಯವಾದಿಗಳ ಸಂಘ ಔರಾದ ರವರು ತಮ್ಮ ಉಪನ್ಯಾಸದಲ್ಲಿ
ಸಹ ಕಾರ್ಮಿಕ ಇಲಾಖೆಯಿಂದ ಅನುಷ್ಠಾನಗೊಳ್ಳುತ್ತಿರುವ ವಿವಿಧ ಕಾಯ್ದೆಗಳ ಕುರಿತು ಮಾಹಿತಿಯನ್ನು ತಿಳಿಸಿ ಸಂಬಂಧಪಟ್ಟ ಮಾಲೀಕ ವರ್ಗ ಹಾಗೂ ಕಾರ್ಮಿಕ ವರ್ಗದವರು ಕಾಯ್ದೆನುವೆಯ ಯೋಜನೆಗಳ ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಕಾರ್ಮಿಕ ಅಧುಕಾರಿಗಳು ಮಹೇಶ್ ಲಕ್ಷ್ಮಣ ಕುಳಲಿ ಕಾರ್ಮಿಕ ಉಪ ವಿಭಾಗ ಬೀದರ್ ರವರು ಕಾರ್ಮಿಕ ಇಲಾಖೆಯಲ್ಲಿ ಬರುವ ಸೇವಾ ಸೌಲಭ್ಯಗಳು ವಿವಿಧ ಯೋಜನೆಗಳು / ಇಲಾಖೆಯ ಕಾಯ್ದೆಗಳಾದ
* ಉಪಧಾನ ಪಾವತಿ ಕಾಯ್ದೆ 1972.
* ಅಂಗಡಿ ಮತ್ತು ವಾಣಿಜ್ಯ ಕಾಯ್ದೆ 1961
* ಕೈಗಾರಿಕಾ ವಿವಾದ ಕಾಯ್ದೆ 1948.
* 4 ಕಾರ್ಮಿಕ ಕೋಡ್
* ಕನಿಷ್ಠ ವೇತನ ಕಾಯ್ದೆ 1948
* ಮೋಟಾರ್ ವಾಹನ ಕಾಯ್ದೆ
* ಬಾಲ ಕಾರ್ಮಿಕ ವಿರೋಧಿ ಪದ್ಧತಿ ಹೀಗೆ ಕಾರ್ಮಿಕ ಇಲಾಖೆಯ ಕುರಿತು ಮತ್ತು ಅಸಂಘಟಿತ ಸಂಘಟಿತ ಸೇವಾ ಸೌಲಭ್ಯ ಕುರಿತು ಸಹವಿಸ್ತಾರವಾಗಿ ಮಾಹಿತಿಯನ್ನು ವಿವರಿಸಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಬೀದರ್ ಯೋಜನಾ ನಿರ್ದೇಶಕರಾದ ಅರ್ಜುನ್ ಸೀತಾಲ್ಗೆರ ರವರು ಮಾತನಾಡಿ ಬಾಲ ಅವಸ್ಥೆ ಹಾಗು ಕಿಶೋವಸ್ತೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಬಗ್ಗೆ ಸವಿಸ್ತಾರ ಮಾಹಿತಿಯನ್ನು ತಿಳಿಸಿದರು,
ಮಾಣಿಕರಾವ್ ಪಾಟೀಲ್ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಾ ಪಂಚಾಯತ್ ಔರಾದ್ ರವರು ಕಟ್ಟಡ ಕಾರ್ಮಿಕರಿಗೆ ಸಿಗುವಂತ ಸೇವಾ ಸೌಲಭ್ಯ ಪಡೆದುಕೊಳ್ಳಲು ತಿಳಿಸಿದರು, ಮತ್ತು ಅಂಗಡಿ ಮತ್ತು ವಾಣಿಜ್ಯ ಕಾಯ್ದೆ 1961 ರಡಿ ಕಡ್ಡಾಯವಾಗಿ ನೋಂದಣಿ ಮಾಡಲು ತಿಳಿಸಿದರು.
ಸದರಿ ಕಾರ್ಯಕ್ರಮದಲ್ಲಿ ರಾಹುಲ ಕಾರ್ಮಿಕ ನಿರೀಕ್ಷಕರು ಔರಾದ್ ರವರು ವೇತನ ಪಾವತಿ ಕಾಯ್ದೆ 1936 / ಹೆರಿಗೆ ಸೌಲಭ್ಯ ಕಾಯ್ದೆ 1961 / ಕನಿಷ್ಠ ವೇತನ ಕಾಯ್ದೆ 1948 ಕುರಿತು ವಿವರಿಸಿದರು.
ಇಂದು
ಕಾರ್ಯಕ್ರಮದಲ್ಲಿ ಅಧ್ಯಕ್ಷರಾಗಿ ಹಾಗೂ ಕಾರ್ಯಾಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಹೇಶ್, ಲಕ್ಷ್ಮಣ ಕುಳಲಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಬೀದರ ಉಪವಿಭಾಗ, ಬೀದರ ಮಾಣಿಕರಾವ ಪಾಟೀಲ್ ಕಾರ್ಯನಿವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ಔರಾದ ರಾಹುಲ.ಬಿ.ರತ್ನಾಕರ್ ಕಾರ್ಮಿಕ ನಿರೀಕ್ಷಕರು, ಔರಾದ, ಶಿವಾನಂದ ಹುಲೆನ್ನವರ ಸಹಾಯಕ ಸರಕಾರಿ ಅಭಿಯೋಜಕರು,ಅರ್ಜುನ ಸಿತಾಳಗೇರಾ ಪಿ.ಡಿ, ಬಾಲಕಾರ್ಮಿಕ ಯೋಜನಾ ಸೂಸೈಟಿ, ಜಿಲ್ಲಾಧಿಕಾರಿಗಳ ಕಛೇರಿ ಬೀದರ.ಹಾಗೂ ಕಾರ್ಮಿಕ ಪಾಲಗೋಂಡಿದ್ದರು.