
ಬೀದರ:- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದ್ದು ಅದು ಬೀದರ ಜಿಲ್ಲೆಗೆ ಅಕ್ಟೋಬರ್. 12 ಮತ್ತು 13 ರಂದು ಬರುತ್ತಿರುವುದರಿಂದ ಎಲ್ಲರೂ ಸೇರಿ ವಿಜೃಂಭಣೆಯಿAದ ಸ್ವಾಗತಿಸೋಣ ಎಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.
ಅವರು ಶುಕ್ರವಾರ ಸಂಜೆ ಬೀದರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಬೀದರ ಜಿಲ್ಲೆಯಲ್ಲಿ ಅಕ್ಟೋಬರ. 12 ಮತ್ತು 13 ರಂದು ಸಂಚರಿಸುವ ಪ್ರಯುಕ್ತ ಪೂರ್ವಭಾವಿಯಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಮತ್ತು ಇತರೆ ಸಂಘ-ಸAಸ್ಥೆಗಳ ಪದಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.
ಅಕ್ಟೋಬರ್. 12 ರಂದು ಬೀದರ ಗಡಿ ಗ್ರಾಮ ಹಳ್ಳಿಖೇಡ (ಕೆ) ಬೆಳಿಗ್ಗೆ 9.30 ಗಂಟೆಗೆ ಬರುತ್ತದೆ. ಅಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಗಳು ಹಾಗೂ ವಿವಿಧ ಸಂಘ-ಸAಸ್ಥೆಯವರು ಎಲ್ಲರೂ ಸೇರಿ ವಿಜೃಂಭಣೆಯಿAದ ಸ್ವಾಗತಿಸಿಕೊಳ್ಳಬೇಕು. ಈ ರಥಯಾತ್ರೆ ಹುಮನಾಬಾದನಲ್ಲಿ ಬೆಳಿಗ್ಗೆ 11 ಗಂಟೆಗಳವರೆಗೆ ಸಂಚರಿಸಲಿದೆ. ನಂತರ ಬೀದರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಇದು ಸಂಚರಿಸಲಿದೆ ತಮ್ಮ-ತಮ್ಮ ತಾಲ್ಲೂಕಿಗೆ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಬಂದಾಗ ಎಲ್ಲರೂ ಸೇರಿ ಸ್ವಾಗತಿಸುವ ಮೂಲಕ ಆಯಾ ತಾಲೂಕಿನ ಮುಖ್ಯ ಬೀದಿಗಳಲ್ಲಿ ಸಂಚರಿಸುವAತೆ ನೋಡಿಕೊಳ್ಳಬೇಕು.
ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶಿಲ್ದಾರರು ತಮ್ಮ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳು, ಕನ್ನಡ ಪರ ಸಂಘಟನೆಗಳ ಮುಖಂಡರು. ವಿವಿಧ ಸಂಘ-ಸAಸ್ಥೆಗಳು, ಸಾಹಿತಿಗಳು, ಚಿಂತಕರು, ಕಲಾವಿದರು ಒಳಗೊಂಡAತೆ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳ ಸಭೆ ಕರೆದು ಈ ಕುರಿತು ಎಲ್ಲರಿಗೂ ಮಾಹಿತಿ ನೀಡಬೇಕು.
ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ತಾಲೂಕಿನಲ್ಲಿ ಸ್ವಾಗತಿಸುವ ಸಮಯದಲ್ಲಿ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು. ವಿವಿಧ ಶಾಲಾ-ಕಾಲೇಜುಗಳ ವಿಧ್ಯಾರ್ಥಿಗಳು ಈ ರಥಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮವಹಿಸಬೇಕು. ಆಯಾ ತಾಲ್ಲೂಕಿನಲ್ಲಿ ನಿಗದಿಪಡಿಸಿದ ಸಮಯದಲ್ಲಿ ಸಂಚರಿಸಿ ಬೀಳ್ಕೊಡಬೇಕು. ಯಾವುದೇ ಟ್ರಾಫಿಕ್ ಸಮಸ್ಯೆಯಾಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಮತ್ತು ಈ ಕುರಿತು ಒಂದು ದಿನ ಮುಂಚಿತವಾಗಿ ಎಲ್ಲರಿಗೂ ಮಾಹಿತಿ ನೀಡಬೇಕೆಂದು ಹೇಳಿದರು.
ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ಮಾತನಾಡಿ, ಬೀದರ ಜಿಲ್ಲೆಗೆ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಪ್ರಥಮ ಬಾರಿಗೆ ಬರುತ್ತಿದೆ. ಎಲ್ಲಾ ಕನ್ನಡ ಪರ ಸಂಘಟನೆಗಳು ಸೇರಿದಂತೆ ಎಲ್ಲರೂ ಸೇರಿ ಅದ್ದೂರಿಯಾಗಿ ಸ್ವಾಗತಿಸುವ ಮೂಲಕ ಬೀದರ ಗೌರವ ಹೆಚ್ಚಿಸೋಣ ಮತ್ತು ಈ ಜ್ಯೋತಿ ರಥಯಾತ್ರೆ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ನಿಗದಿಪಡಿಸಿದ ಸಮಯದಲ್ಲಿ ಸಂಚರಿಸುವAತೆ ನೋಡಿಕೊಳ್ಳೊಣ ಎಂದು ಹೇಳಿದರು.
ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಬೀದರ ಜಿಲ್ಲೆಯಲ್ಲಿ ಸಂಚರಿಸಲಿರುವ ದಿನಾಂಕ ಮತ್ತು ಸಮಯದ ವಿವರ: ಅಕ್ಟೋಬರ್. 12 ರಂದು ಬೆಳಿಗ್ಗೆ 9:30 ಗಂಟೆಗೆ ಬೀದರ ಗಡಿ ಗ್ರಾಮವಾದ ಹಳ್ಳಿಖೇಡ (ಕೆ) ಯಲ್ಲಿ ಈ ರಥಯಾತ್ರೆಗೆ ಸ್ವಾಗತಿಸಿದ ನಂತರ ಹುಮನಾಬಾದ ನಗರದ ಪ್ರಮುಖ ವೃತ್ತಗಳಲ್ಲಿ ಬೆಳಿಗ್ಗೆ 11 ಗಂಟೆಗಳವರೆಗೆ ಸಂಚರಿಸಲಿದೆ. ಬಸವಕಲ್ಯಾಣದಲ್ಲಿ ಮಧ್ಯಾಹ್ನ 12 ರಿಂದ 1:30 ರವರೆಗೆ, ಹುಲಸೂರ ಮಧ್ಯಾಹ್ನ 2 ರಿಂದ 3 ಗಂಟೆಗಳರೆಗೆ, ಭಾಲ್ಕಿ ಸಂಜೆ 4 ರಿಂದ 5 ಗಂಟೆಗಳವರೆಗೆ, ಕಮಲನಗರ ಸಂಜೆ 5:30 ರಿಂದ 6:30 ರವರೆಗೆ ಈ ಎಲ್ಲಾ ತಾಲ್ಲೂಕುಗಳಲ್ಲಿ ಸಂಚರಿಸಿದ ನಂತರ ಅಂದು ರಾತ್ರಿ ಔರಾದ ತಾಲೂಕಿನಲ್ಲಿ ರಾತ್ರಿ ತಂಗಲಿದೆ.
ಅಕ್ಟೋಬರ್. 13 ರಂದು ಬೆಳಿಗ್ಗೆ 11: 30 ರವರೆಗೆ ಔರಾದನಲ್ಲಿ ಸಂಚರಿಸಿ ಬೀದರ ನಗರಕ್ಕೆ ಮಧ್ಯಾಹ್ನ 12 ಗಂಟೆಗೆ ಆಗಮಿಸಿ ಸಂಚರಿಸಲಿದೆ. ನಂತರ ಚಿಟಗುಪ್ಪಾಗೆ ಮಧ್ಯಾಹ್ನ 3 ರಿಂದ 4 ಗಂಟೆಗೆ ಆಗಮಿಸಿ ಸಂಚರಿಸಲಿದೆ ಅಲ್ಲಿಂದ ಬೀದರ ಗಡಿಯಿಂದ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆಗೆ ಯಾದಗಿರಿ ಜಿಲ್ಲೆಗೆ ಬೀಳ್ಕೊಡಲಾಗುತ್ತದೆ.
ಈ ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಚಂದ್ರಕಾAತ ಪೂಜಾರ, ಬೀದರ ತಹಶಿಲ್ದಾರ ದಿಲಶಾದ ಮಹತ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಚಂದ್ರಕಾAತ ಶಾಬಾದಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕರಾದ ಶ್ರೀಧರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಶಿಂಧೆ, ಸಾಹಿತಿಗಳಾದ ಎಂ.ಎಸ್. ಮನೋಹರ, ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾದ ವಿಜಯಕುಮಾರ್ ಸೋನಾರೆ, ಶಿವಶಂಕರ ಟೋಕರೆ, ವಿರೂಪಾಕ್ಷ ಗಾದಗಿ, ಜಿಲ್ಲೆಯ ಎಲ್ಲಾ ತಾಲೂಕಿನ ತಹಶಿಲ್ದಾರರು, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.