
ಔರಾದ:-ಮಹಾತ್ಮ ಗಾಂಧೀ ಜಯಂತಿಯ ನಿಮಿತ್ತ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಅ.2ರಂದು ಸಂತಪೂರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ಇದೇ ವೇಳೆ ರೋಗಿಗಳ ಆರೋಗ್ಯ ವಿಚಾರಿಸಿ, ವೈದ್ಯರು ಹೇಗೆ ಕೆಲಸ ಮಾಡುತ್ತಿದ್ದಾರೆ?, ಚಿಕಿತ್ಸೆ ಸರಿಯಾಗಿ ನೀಡುತ್ತಿದ್ದಾರೆಯೇ ? ಔಷಧೋಪಚಾರ ಹೇಗಿದೆ ಎಂದು ರೋಗಿಗಳಿಂದ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.
ಸಂತಪೂರ ಆಸ್ಪತ್ರೆಯ ಬಗ್ಗೆ ಉತ್ತಮ ಅಭಿಪ್ರಾಯಗಳಿವೆ. ವೈದ್ಯರು ಹೀಗೆಯೇ ಕೆಲಸ ಮುಂದುವರೆಸಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಬಡ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅವರಿಗೆ ಯಾವುದೇ ರೀತಿಯ ತೊಂದರೆಯಾಗಬಾರದೆAದು ಒಳ್ಳೆಯ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಇದರ ಸದ್ಬಳಕೆಯಾಗಬೇಕು. ರೋಗಿಗಳಿಗೆ ತಕ್ಷಣ ಸ್ಪಂದನೆ ನೀಡಬೇಕು. ಎಂದು ಆಸ್ಪತೆಯ ವೈದ್ಯರು ಮತ್ತು ಸಿಬ್ಬಂದಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶ್ರೀಮಂತ ಪಾಟೀಲ, ಶಿವಾಜಿರಾವ ಕಾಳೆ, ನೀಲೇಶ ರಕ್ಷಾಳೆ, ಖಂಡೋಬಾ ಕಂಗಟೆ, ಸಾಗರ ಪಾಟೀಲ ಕೊಳ್ಳುರ್, ರಾಜಕುಮಾರ ಸೋರಾಳೆ, ಶಿವಕುಮಾರ ಪಾಂಚಾಳ, ಮಂಜು ಸ್ವಾಮಿ, ಉದಯ ಸೋಲಪೂರೆ, ದೇವರಾಜ ಮೇತ್ರೆ, ಬಾಲಾಜಿ ವಾಗಮಾರೆ, ಬಂಟಿ ರಾಂಪೂರೆ, ಬಜರಂಗ ಪಾಂಡ್ರೆ, ಬಾಲಾಜಿ ಠಾಕೂರ್, ಶಿವಲಿಂಗ ಚಿಟ್ಟಾ, ಬಾಬುರಾವ ಎಕಲಾರ ಸೇರಿದಂತೆ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.