
ಔರಾದ:-ಮಾಜಿ ಮಂತ್ರಿ ಹಾಲಿ ಶಾಸಕರ ಪ್ರಭು ಚವ್ಹಾಣ ಅವರು ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತಿç ಅವರ ಭಾವಚಿತ್ರಗಳಿಗೆ ಪೂಜೆ, ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿ
‘ಸ್ವಚ್ಛತೆಯೇ ಸೇವೆ’ ಅಭಿಯಾನದಡಿ ಶಾಸಕರು ಅ.2ರಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಿದರು. ಕೈಯಲ್ಲಿ ಪೊರಕೆ ಹಿಡಿದು ಬಸ್ ನಿಲ್ದಾಣದ ಆವರಣವನ್ನು ಶುಚಿಗೊಳಿಸಿದರು. ಎಪಿಎಂಸಿ ಅಧ್ಯಕ್ಷರಾದ ಧೊಂಡಿಬಾ ನರೋಟೆ, ತಹಸೀಲ್ದಾರರಾದ ಮಲಶೆಟ್ಟಿ ಚಿದ್ರೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸ್ವಾಮಿದಾಸ ಹಾಗೂ ಮತ್ತಿತರೆ ಮುಖಂಡರು ಸಾಥ್ ನೀಡಿದರು.
ತಾಲ್ಲೂಕು ಕೇಂದ್ರವಾಗಿರುವ ಔರಾದ(ಬಿ) ಬಸ್ ನಿಲ್ದಾಣದಿಂದ ಪ್ರತಿದಿನ ಸಾವಿರಾರು ಜನ ಪ್ರಯಾಣಿಸುತ್ತಾರೆ. ಹಾಗಾಗಿ ಬಸ್‌ನಿಲ್ದಾಣ ಸದಾ ಶುಚಿಯಾಗಿಡಬೇಕು. ಎಲ್ಲ್ಲಂದರಲ್ಲಿ ಕಲ ಹಾಕದ ರೀತಿಯಲ್ಲಿ ವ್ಯವಸ್ಥೆ ಮಾಡಬೇಕು. ಪ್ರತಿದಿನ ಸ್ವಚ್ಛತಾ ಕಾರ್ಯ ನಡೆಸಬೇಕೆಂದು ಡಿಪೋ ವ್ಯವಸ್ಥಾಪಕರಿಗೆ ಸೂಚಿಸಿದರು. ಇದೇ ವೇಳೆ ಪ್ರತಿದಿನ ಸಂಜೆ ವೇಳೆ ಬೀದರ್-ಔರಾದ್ ನಡುವೆ ಸಂಚರಿಸುವ ಬಸ್‌ಗಳನ್ನು ಕಡಿತಗೊಳಿಸಿದ್ದು, ಜನತೆ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆಂದು ಸಾರ್ವಜನಿಕರಿಗೆ ದೂರು ನೀಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಕೂಡಲೇ ಸಮಸ್ಯೆ ಇತ್ಯರ್ಥಪಡಿಸಬೇಕೆಂದು ಸ್ಥಳದಲ್ಲಿದ್ದ ಡಿಪೋ ವ್ಯವಸ್ಥಾಪಕರಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಸಂಜು ಮುರ್ಕೆ, ಸಂಜು ವಡೆಯರ್, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ಸುಜಿತ ರಾಠೋಡ್, ಸಂಜು ವಡೆಯರ್, ಕೇರಬಾ ಪವಾರ್, ಸಂದೀಪ ಪಾಟೀಲ, ಸಿದ್ರಾಮಪ್ಪ ನಿಡೋದಾ, ಅಶೋಕ ಅಲ್ಮಾಜೆ, ಬಾಬು ಪವಾರ್, ಉದಯ ಸೋಲಾಪೂರೆ, ಬಾಲಾಜಿ ವಾಗಮಾರೆ, ಬಂಟಿ ರಾಂಪೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.