
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಔರಾದ:-ತನ್ನ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಿಗೆ ಒಳ್ಳೆಯ ಕಾರ್ಯಗಳು ಮಾಡಿ ಸರ್ಕಾರದ ಅಧಿಕಾರಿಗಳ ಗಮನ ಸೆಳದಂತ ಪಂಚಾಯಿತಿ ಆಗಿದೆ. ಈ ವರ್ಷದ ತಾಲೂಕು ಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ.ಗಾಂಧಿ ಪುರಸ್ಕಾರದ ಜೊತೆಗೆ ಪಂಚಾಯಿತಿ ಮಟ್ಟದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಮಾಡಲು ಸಹಕಾರಿ ಆಗುವಂತೆ 5 ಲಕ್ಷ ನಗದು ಬಹುಮಾನ ಮತ್ತಷ್ಟು ಅಭಿವೃದ್ಧಿಗೆ ಅನುಕೂಲವಾಗಲಿದೆ.
ತೋರಣಾ ಗ್ರಾಮ ಪಂಚಾಯಿತಿಯು ಕಮಲನಗರ ತಾಲ್ಲೂಕಿನ 18 ಗ್ರಾಮ ಪಂಚಾಯತಿಯಲ್ಲಿ ಉತ್ತಮ ಮಟ್ಟದ ಕಾಮಗಾರಿಗಳು ಕುಡಿಯುವ ನೀರಿನ ವ್ಯವಸ್ಥೆ ನರೇಗಾ ಯೋಜನೆಯಲ್ಲಿ ಜನರಿಗೆ ಉತ್ತಮವಾಗಿ ಮಾನವ ದಿನಗಳು ಸೃಜನೆ ಹೆಚ್ಚು ಮಾಡಿರುವುದು. ಜನರ ಸಮಸ್ಯೆಯನ್ನು ಅಧಿಕಾರಿಗಳು ಬಗೆಹರಿಸಿದ್ದಕ್ಕಾಗಿ ಸರಕಾರ ಕಾರ್ಯಗಳಿಗೆ ಮೆಚ್ಚಿ ಗಾಂಧಿ ಗ್ರಾಮ ಪುರಸ್ಕಾರ ನೀಡಲಾಗಿದೆ. ಗ್ರಾಮಗಳಿಗೆ ರಸ್ತೆ ನಿರ್ಮಾಣ ಆಗಲಿ ಒಳಚರಂಡಿ ನಿರ್ಮಾಣ ಸಾರ್ವಜನಿಕರಿಗೆ ಮಹಾತ್ಮ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ದನಗಳ ಸೆಡ್ ಗಳು ನಿರ್ಮಾಣ ದನಗಳ ಕುಡಿಯುವ ನೀರಿನ ತೊಟ್ಟಿ ನಮ್ಮ ಹೊಲ ನಮ್ಮ ರಸ್ತೆ , ವೈಯಕ್ತಿಕ ಬಾವಿಗಳು,ತೋಟಗಾರಿಕೆಗೆ ಬೆಳೆಗಳ ಅಭಿವೃದ್ಧಿ ಶಾಲಾ ಶೌಚಾಲಯ ಎಲ್ಲಾ ಗ್ರಾಮಗಳಾಗಿ ಉದ್ಯೋಗ ನೀಡುವುದರಿಂದ ಹಾಗೂ ಸಾರ್ವಜನಿಕರ ಸಮಸ್ಯೆಗಳು ಕೂಡಲೇ ಸ್ಪಂದಿಸಿ ಪರಿಹಾರ ನೀಡಿದ್ದಕ್ಕಾಗಿ ಈ ಪುರಸ್ಕಾರ ದೊರೆತಿದೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಲ್ಲೇಶ್ ತಿಳಿಸಿದ್ದಾರೆ.
———————–
ಮೊದಲ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಬಂದಿರುವುದು ಹೆಮ್ಮೆಯ ವಿಷಯ. ಕಮಲನಗರ ತಾಲ್ಲೂಕಿನಲ್ಲಿ ನಮ್ಮ ಪಂಚಾಯತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದದ್ದು ಸಂತಸ ತಂದಿದೆ.
— ಸುನೀಲ ಶಿಗರೆ ಅಧ್ಯಕ್ಷ ಗ್ರಾಪಂ ತೋರಣಾ.
೨)ಬಾಕ್ಸ್ ಮ್ಯಾಟರ್
————————–
ನಾವು ನಮ್ಮ ಗ್ರಾಮ ಪಂಚಾಯತಿಯಲ್ಲಿ ಜನಪರ ಕೆಲಸಗಳು,ಬೇಗ ಸ್ಪಂದನೆಯಿಂದ ಸಾರ್ವಜನಿಕರು,ಗ್ರಾಮದ ಹಿರಿಯರು,ಮುಖಂಡರ ಹಾಗೂ ಗ್ರಾಪಂ ಅಧ್ಯಕ್ಷರ ಸದಸ್ಯರ ಸಹಕಾರದಿಂದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಆಗಿದ್ದು ಸಂತೋಷವಾಗಿದೆ.
— ಮಲೇಶ.ಎಂ.ಪಿಡಿಒ ತೋರಣಾ.
—————————
ಕಮಲನಗರ ತಾಲ್ಲೂಕಿನ. 18 ಗ್ರಾಮ ಪಂಚಾಯತಿಯ ಪೈಕಿ ತೋರಣಾ ಗ್ರಾಮ ಪಂಚಾಯತಿಗೆ ಗಾಂಧಿ ಗ್ರಾಮ ಪುರಸ್ಕಾರ ಸಿಕ್ಕಿರುವುದು ನಮ್ಮ ತಾಲೂಕಿಗೆ ಒಂದು ಗೌರವವಾಗಿದೆ.
— ಮಾಣಿಕರಾವ ಪಾಟೀಲ ಕಾರ್ಯನಿರ್ವಾಹಕ ಅಧಿಕಾರಿ ಕಮಲನಗರ.