
ಔರಾದ:-ಪೌರ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸುವ ಮೂಲಕ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಮಹಾತ್ಮ ಗಾಂಧಿ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿದರು.
ಬೆಳಗ್ಗೆ ಔರಾದ(ಬಿ) ಪಟ್ಟಣದ ಶಾಸಕರ ಕಛೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತಿç ಅವರ ಭಾವಚಿತ್ರಗಳಿಗೆ ಪೂಜೆ, ಮಾಲಾರ್ಪಣೆ ಸಲ್ಲಿಸಿ ಗೌರವ ಸಮರ್ಪಿಸಿದ ಶಾಸಕರು ಬಳಿಕ ಪಟ್ಟಣದ ಬಟ್ಟೆ ಅಂಗಡಿಗೆ ತೆರಳಿ ಔರಾದ(ಬಿ) ಪಟ್ಟಣದಲ್ಲಿ ಪ್ರತಿದಿನ ಸ್ವಚ್ಛತೆಯ ಕೆಲಸ ಮಾಡುವ ಸುಮಾರು 50 ಜನ ಪೌರ ಕಾರ್ಮಿಕರಿಗೆ ಹೊಸ ಬಟ್ಟೆಗಳನ್ನು ಕೊಡಿಸಿದರು. ಮುಂದಿನ ದಿನಗಳಲ್ಲಿ ಪ್ರತಿ ವರ್ಷ ಪೌರ ಕಾರ್ಮಿಕರಿಗೆ ಬಟ್ಟೆ ವಿತರಿಸಲಾಗುವುದೆಂದು ಹೆಳಿದರು.
ನಂತರ ತಾವೂ ಕೂಡ ಖಾದಿ ಬಟ್ಟೆಗಳನ್ನು ಖರೀದಿಸಿದರಲ್ಲದೇ ಪ್ರಮುಖರು ಮತ್ತು ಆತ್ಮೀಯರಿಗೆ ಖಾದಿ ಬಟ್ಟೆಗಳನ್ನು ಕೊಡಿಸುವ ಮೂಲಕ ಖಾದಿ ಬಟ್ಟೆಗಳ ಬಳಕೆಗೆ ಪ್ರೇರಣೆ ನೀಡಿದರು. ಸ್ವಾತಂತ್ರö್ಯ ಹೋರಾಟದ ಸಂದರ್ಭದಲ್ಲಿ ಜನರಲ್ಲಿ ಏಕತೆ ಮತ್ತು ಒಗ್ಗಟ್ಟನ್ನು ತರಲು ಗಾಂಧೀಜಿಯವರು ಖಾದಿ ಬಟ್ಟೆಯ ಬಳಕೆಗೆ ಕರೆ ನೀಡಿದ್ದರು. ಸ್ವಾವಲಂಬನೆಯ ಸಂಕೇತವಾಗಿರುವ ಖಾದಿ ಬಟ್ಟೆಗಳ ಬಳಕೆಯ ಬಗ್ಗೆ ಜನರಲ್ಲಿ ಉತ್ತೇಜನ ನೀಡಬೇಕು. ಈ ದಿಶೆಯಲ್ಲಿ ಪರಿಶ್ರಮ ವಹಿಸುತ್ತಿದ್ದೇನೆ ಎಂದರು.
ಔರಾದ(ಬಿ) ಪಟ್ಟಣವನ್ನು ಸ್ವಚ್ಛ ಮತ್ತು ಸುಂದರವಾಗಿಸುವ ಸಂಕಲ್ಪ ಹೊಂದಿದ್ದು, ಅದಕ್ಕಾಗಿ ನಿರಂತರ ಕೆಲಸ ಮಾಡುತ್ತಿದ್ದೇನೆ. ಪೌರ ಕಾರ್ಮಿಕರು ಈ ಕೆಲಸಕ್ಕೆ ಸಹಕರಿಸಬೇಕು. ಪಟ್ಟಣದ ಎಲ್ಲ ವಾರ್ಡ್ಗಳಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ವಚ್ಛತೆಯ ಕಾರ್ಯವಾಗಬೇಕು. ಎಲ್ಲರೂ ಸ್ವಚ್ಛತೆಯ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಪೌರ ಕಾರ್ಮಿಕರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಶಿವಾಜಿರಾವ ಪಾಟೀಲ ಮುಂಗನಾಳ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಸಂಜು ಮುರ್ಕೆ, ಸಂಜು ವಡೆಯರ್, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ಸುಜಿತ ರಾಠೋಡ್, ಸಂಜು ವಡೆಯರ್, ಕೇರಬಾ ಪವಾರ್, ಸಂದೀಪ ಪಾಟೀಲ, ಸಿದ್ರಾಮಪ್ಪ ನಿಡೋದಾ, ಅಶೋಕ ಅಲ್ಮಾಜೆ, ಬಾಬು ಪವಾರ್, ಉದಯ ಸೋಲಾಪೂರೆ, ಬಾಲಾಜಿ ವಾಗಮಾರೆ, ಬಂಟಿ ರಾಂಪೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.