
Oplus_131072
ಶಹಾಪುರ; ಚರಬಸವೇಶ್ವರ ಗದ್ದುಗೆಯಲ್ಲಿನ ನಾಗರಕೆರೆ ಮಳೆಗೆ ಭರ್ತಿಯಾಗಿ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು. ಬಸವಮಾರ್ಗ ಮನೆಯಂತೂ ಸಂಪೂರ್ಣ ಜಲಾವೃತಗೊಂಡಿದ್ದು ಗುರುವಾರ ನಗರಸಭೆ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಧಾರಕಾರ ಮಳೆ ಬಂದಾಗ ಇದೇ ಗತಿಯಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಎಚ್ಚೆತ್ತು ಕೊಳ್ಳದೇ ಇರುವುದು ಅವರು ತೋರುವ ನಿಷ್ಕಾಳಜಿಗೆ ಕೈಗನ್ನಡಿಯಾಗಿದೆ.
ಕೆರೆಯ ಕೋಡಿ ಪೂರ್ಣ ನಿರ್ಮಾಣ ಮಾಡದಿದ್ದಕ್ಕೆ ಅನಾಹುತಕ್ಕೆ ಕಾರಣವಾಗಿದೆ ಎಂದು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಪ್ರತಿ ಬಾರಿ ಮಳೆ ಬಂದಾಗ ಜಲಾವೃತಗೊಳ್ಳುವುದು ಸಮಾನ್ಯವಾಗಿದ್ದು. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾದ ಅಧಿಕಾರಿಗಳು ದಿವ್ಯ ನಿರ್ಲಕ್ಷö್ಯ ತೋರುತ್ತಿದ್ದು. ಜನತೆ ಸಮಸ್ಯೆ ಅನುಭವಿಸುವಂತಾಗಿದೆ. ಇದೀಗ ಮಳೆ ಆರ್ಭಟಕ್ಕೆ ಮೂರು ಕುಟುಂಬಗಳ ೫ ಲಕ್ಷö್ಯ ರೂ. ವೆಚ್ಚದ ದವಸ ಧಾನ್ಯಗಳು, ಸಾವಿರಾರು ಪುಸ್ತಕಗಳು, ನೀರಿನಲ್ಲಿ ಮುಳುಗಿ ಅಪಾರ ಪ್ರಮಾಣ ಹಾನಿಯುಂಟಾಗಿದ್ದು. ಪರಿಹಾರ ಒದಗಿಸಬೇಕಿದೆ ಎನ್ನುವುದು ಕುಟುಂಬಸ್ಥರ ಆಗ್ರಹವಾಗಿದೆ.
1)ಸುಮಾರು ವರ್ಷಗಳ ಹಿಂದೆ ನಮ್ಮ ತಂದೆಯವರು ಚರಂಡಿ ನಿರ್ಮಾಣ ಮಾಡಬಾರದು ಎಂದು ಹೇಳಿದ್ದಕ್ಕೆ ಅದೇ ನೆಪವಾಗಿಟ್ಟುಕೊಂಡು ಈ ವರೆಗೂ ಚರಂಡಿ ನಿರ್ಮಾಣ ಕಾರ್ಯ ಮಾಡಿಲ್ಲಾ. ಮಳೆ ಹಾನಿಯ ಕುರಿತು ಮುನ್ನಚ್ಚರಿಕೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದ್ದರು ಸಹ ಯಾವುದೇ ಕ್ರಮ ಕೈಗೊಂಡಿಲ್ಲಾ. ಪ್ರತಿ ಬಾರಿಯೂ ಮಳೆ ಬಂದಾಗ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗುತ್ತಿದೆ. ಪ್ರತಿ ಬಾರಿಯೂ ಇದೇ ಅವಸ್ಥೆಯಾಗಿದ್ದು ಪರಿಹಾರ ಒದಗಿಸಿ ಕೊಡಬೇಕು.
ವಿಜಯಕುಮಾರ ಸತ್ಯಂಪೇಟೆ.
2)ನಗರಸಭೆ ಪೌರಾಯುಕ್ತ ರಮೇಶ ಬಡಿಗೇರ ಹಾಗೂ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿ ಚರಂಡಿ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
3)ಮಳೆಗೆ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಇದಕ್ಕೆಲ್ಲಾ ಯಾರು ಹೊಣೆ. ಇಷ್ಠೆಲ್ಲಾ ಸಂಭವಿಸಿದರೂ ಕ್ಷೇತ್ರದ ಶಾಸಕರು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಈ ಬಗ್ಗೆ ಮುಂಜಾಗ್ರತೆ ವಹಿಸಿದ್ದರೆ ಅಪಾಯ ತಪ್ಪಿಸಬಹುದಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆಯೂ ಅನಾಹುತ ಸಂಭವಿಸಿತ್ತು. ಆವಾಗಲೂ ಕೂಡ ಯಾರು ಸ್ಪಂದನೆ ನೀಡಲಿಲ್ಲಾ. ಕನಿಷ್ಠ ಮಾನವೀಯತೆಯನ್ನು ಮೆರೆಯಲಿಲ್ಲಾ. ಇದೀಗ ನಮ್ಮ ಪಾಡು ಯಾರ ಮುಂದೆ ಹೇಳಿಬೇಕು ಎಂದು ಹಾನಿಗೊಳಗಾದ ಮನೆ ಮಾಲೀಕ ವಿಜಯಕುಮಾರ ಸತ್ಯಂಪೇಟೆ ಕಣ್ಣಿರಿಟ್ಟರು.