July 20, 2025

ಔರದ:ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯದಲ್ಲಿ ರಾಜ್ಯದ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರು.

ಗುರುವಾರ ತಾಲೂಕಿನ ಪಟ್ಟಣದ ತಹಶಿಲ್ ಅಂಗಳದಲ್ಲಿ ತಾಲೂಕಿನ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಂದ ತಮ್ಮ ವಿವಿಧ ಬೇಡಿಕೆ ಈಡೇರಿಸಬೇಕೆಂದು ಸೇವೆ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡರು.

ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆ:-

“ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಛೇರಿ,
‘ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ,
“ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್ (12ಜಿಬಿ/256ಜಿಬಿ), ಸಿಯುಜಿ ಸಿಮ್ ಮತ್ತು ಡೇಟಾ,
“ಗೂಗಲ್ ಕ್ರೋಮ್ ಬುಕ್/ ಲ್ಯಾಪ್ ಟಾಪ್
ಪ್ರಿಂಟರ್ ಮತ್ತು ಸ್ಕ್ಯಾನ‌ರ್ ವದಗಿಸಬೇಕು,

“ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯುವ ಬೇಕು,

“ಕೆ.ಸಿ.ಎಸ್.ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸೂಕ್ತ ಆದೇಶ ನೀಡುಬೇಕು,

“ಕರ್ನಾಟಕ ಉಚ್ಚನ್ಯಾಯಾಲಯದ ರಿಟ್ ಪಿಟಿಷನ್ ಸಂಖ್ಯೆ: 329/23 ರ
ಅಂತಿಮ ತೀರ್ಪಿಗೆ ಒಳಪಡಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರ.ದ.ಸ/ರಾ.ನಿ ಹುದ್ದೆಗಳಿಗೆ ತಕ್ಷಣವೇ ಪದೊನ್ನತಿ ನೀಡಲು ಕ್ರಮ ಕೈಗೊಳಬೇಕು,
“ಅಂತರ್ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಯ ಚಾಲನೆ ನೀಡಬೇಕು,
“ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡುವ ಬೇಕು,
“ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್ ನಿಯಮ 16ಎ ರ ಉಪಖಂಡ(2)ನ್ನು ಮರುಸ್ಥಾಪಿಸುವ ಬೇಕು,

ಕೆಲವು ವಿಶೇಷ ಚೇತನ, ತೀವ್ರ ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ಪ್ರಕರಣಗಳ ನಿಯೋಜನೆಗಳನ್ನು ಕೌನ್ಸಿಲಿಂಗ್ ಮೂಲಕ ನಿಯೋಜನೆ ಆದೇಶಗಳನ್ನು ಮಾಡುವ ಬೇಕು.

ಹೀಗೆ ನಮಗಾಗುತ್ತಿರು ತೊಂದರೆಗಳನ್ನು ಸರಕಾರ ಪರಿಶಿಲಿಸಿ ನಮಗೆ ಸಿಗಬೇಕಾಗಿರುವ ಅನೇಕ ಸೌಲಭ್ಯ ಈಡೆರಿಸಬೇಕೆಂದು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡು ತಹಶಿಲ್ದಾರರಿಗೆ ಮನವಿ ಪತ್ರ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಿನ ಗ್ರಾಮ ಆಡಳಿತ ಅಧಿಕಾರಿ ಸಂಘದ ಅಧ್ಯಕ್ಷರಾದ ನಾಮದೇವ ಮೆಟರೆ, ಮಲ್ಲಿಕಾರ್ಜುನ ಆಲೂರೆ, ವಿಜಯಕುಮಾರ, ಶಿವಕುಮಾರ ಸಚೀನ ಬೈಸೆ, ನರ್ಸಿಮ್ಮಾ, ಅನ್ವಾರ ಖಾನ,ಬಾಬು ಮೆಟರೆ, ಸುಭಾಷ ಚೌಹಣ್, ಹೀಗೆ ಅನೇಕರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771