
Oplus_131072
ಶಹಾಪುರ; ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತಾಲೂಕ ವೀರಶೈವ ಲಿಂಗಾಯತ ಸಮಾಜದ ವಸತಿ ನಿಲಯ ಹಾಗೂ ಕಲ್ಯಾಣ ಮಂಟಪಕ್ಕೆ ಸರ್ಕಾರ ದಿಂದ ನಿವೇಶನಕ್ಕಾಗಿ ೧೨ ಲಕ್ಷö್ಯ ರೂ.ಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ನಗರದ ಐಡಿಎಸ್‌ಎಂಟಿ ಲೇಜೌಟ್‌ನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ ಸಿ.ಎ ಸೈಟ್ ೩ ಸಾವಿರ ಚದರು ಮೀಟರ್ ಅಳತೆಯ ನಿವೇಶನಕ್ಕಾಗಿ ೯೯ ಲಕ್ಷö್ಯ ರೂ. ನಿಗದಿಪಡಿಸಲಾಗಿತ್ತು. ಸಮಾಜದ ವತಿಯಿಂದ ನಿವೇಶನದ ಮೌಲ್ಯ ಕಡಿಮೆ ಮಾಡಿಸಲು ಸಚಿವರಿಗೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಸಚಿವರು ಸಂಪುಟ ಸಭೆಯಲ್ಲಿ ಚರ್ಚಿಸಿ ನಿವೇಶನದ ಮೌಲ್ಯ ಕಡಿತಗೊಳಿಸಿ ೧೨ ಲಕ್ಷö್ಯ ರೂ. ಗೆ ಕಡಿಮೆ ಮಾಡಿ ಒದಗಿಸಲು ಕಾರಣಿಭೂತರಾದ ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರಿಗೆ ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಪರವಾಗಿ ಧನ್ಯವಾದ ತಿಳಿಸಿದ್ದಾರೆ.