
module:1facing:0; ?hw-remosaic: 0; ?touch: (0.3788889, 0.3788889); ?modeInfo: ; ?sceneMode: Night; ?cct_value: 0; ?AI_Scene: (-1, -1); ?aec_lux: 0.0; ?hist255: 0.0; ?hist252~255: 0.0; ?hist0~15: 0.0; ?module:1facing:0; hw-remosaic: 0; touch: (0.3788889, 0.3788889); modeInfo: ; sceneMode: Night; cct_value: 0; AI_Scene: (-1, -1); aec_lux: 0.0; hist255: 0.0; hist252~255: 0.0; hist0~15: 0.0;
ಔರಾದ:-ಮಹಿಳೆಯರು ತಮ್ಮ ಜತೆಗೆ ಮಕ್ಕಳನ್ನು ಆರೋಗ್ಯವಂತರನ್ನಾಗಿಸುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಂತಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಮಾಲಪ್ಪ ಡಿಕೆ ಹೇಳಿದರು.
ತಾಲೂಕಿನ ವಡಗಾಂವ(ದೇ)ದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ ಪೋಷಣಾ ಅಭಿಯಾನ ಮಾಸಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಅಪೌಷ್ಠಿಕತೆ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರಕಾರ ಆಯೋಜಿಸಿರುವ ರಾಷ್ಟಿçÃಯ ಪೋಷಣಾ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮವಾಗಿದ್ದು, ಕಿಶೋರಿ ಬಾಲಕಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸಲು ಈ ಯೋಜನೆ ರೂಪಿಸಲಾಗಿದೆ. ಯೋಜನೆಯಡಿದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ಮಹಿಳೆಯರು ತಾವು ಮತ್ತು ಮಕ್ಕಳ ಆರೋಗ್ಯದ ಕಾಳಜಿಗೆ ಮುಂದಾಗಬೇಕು ಎಂದರು.
ಆಪ್ತಸಮಾಲೋಚಕಿ ಪುಷ್ಪಾಂಜಲಿ ಪಾಟೀಲ್ ಮಾತನಾಡಿ, ಎಚ್‌ಐವಿ/ಏಡ್ಸ್ ವೈರಸ್ ಬರುವ ಲಕ್ಷಣಗಳು, ಅದರಿಂದ ಆಗುವ ಪರಿಣಾಮಗಳು, ವೈರಸ್ ಇರುವ ರೋಗಿಗಳ ಜೊತೆಗೆ ನಾಗರಿಕರು ನಡೆದುಕೊಳ್ಳುವ ರೀತಿಗಳ ಬಗ್ಗೆ ಸಮಗೃ ಮಾಹಿತಿ ನೀಡಿದರು.
ಸ್ಥಳೀಯ ಸರಕಾರಿ ಆಸ್ಪತ್ರೆಯ ವೈಧ್ಯ ಡಾ. ಸಿದ್ದರಡ್ಡಿ ಬಿರಾದರ್, ಬಿ ಎಚ್ ಇಒ ಮಹಾಂತಬಾಯಿ ಮಾತನಾಡಿದರು.
ಇದಕ್ಕೂ ಮುನ್ನ ಗ್ರಾಪಂ ಅಧ್ಯಕ್ಷ ರಾಜಕುಮಾರ್ ಹೇಡೆ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಹಣ್ಣು-ಹಂಪಲು ನೀಡಿ ಅರಿಶೀಣ ಕುಂಕುಮ ಹಚ್ಚಿ ಸೀಮಂತ ಮತ್ತು ಅನ್ನಪ್ರಾಸನ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ವಡಗಾಂವ ವಲಯದ ಸುಮಾರು ೫೮ಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೇಯರು ಹಾಜರಿದ್ದರು. ಸಿಡಿಪಿಒ ಇಮಾಲಪ್ಪ ಡಿಕೆ, ಡಾ. ತಸ್ಲೀಮ್, ಗ್ರಾಪಂ ಅಧ್ಯಕ್ಷ ರಾಜಕುಮಾರ್ ಹೇಡೆ, ಪಿಡಿಒ ಸುಭಾಷ ಭುಯ್ಯಾ, ಖಾದರ್ ಖಾನ್, ಆನಂದ, ಅಂಬಿಕಾ, ಶ್ರುತಿ, ಮಹಾಂತಾಬಾಯಿ, ಲಕ್ಷಿö್ಮ ದಂಡೆ, ಸುಲೋಚನಾ, ಮನೋರಂಜನಿ, ಶಾರದಾ, ರೇಣುಕಾ, ಸವಿತಾ, ಕನ್ಯಾಕುಮಾರಿ, ರಬೇಕಾ, ಸಚ್ಚಿದಾನಂದ, ಸತೀಷ, ದೇವೇಂದ್ರ, ಇತರರಿದ್ದರು. ವಲಯ ಮೇಲ್ವಿಚಾರಕಿ ಶೋಭಾ ರಾಠೋಡ್ ಸ್ವಾಗತಿಸಿ ನಿರೂಪಣೆ ಮಾಡಿದರು.