
ಬೀದರ:- ಸಕ್ಷಮ ಪ್ರಾಧಿಕಾರಿಯ ನೇಮಕವಾಗುವವರೆಗೆ ಹಾಗೂ ಅಧಿಕೃತವಾಗಿ ಕ್ಲೇಮ್ ಅರ್ಜಿಗಳನ್ನು ಅಹ್ವಾನಿಸುವ ಕುರಿತು ಅಧಿಸೂಚನೆ ಹೊರಡಿಸುವವರೆಗೆ ತಾತ್ಕಾಲಿಕವಾಗಿ ಸಂಘ ಸಂಸ್ಥೆಗಳಿAದಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಅರ್ಜಿಗಳನ್ನು ಸ್ವೀಕರಿಸುವುದನ್ನು ಸ್ಥಗಿತಗೊಳಿಸಲಾಗಿದೆ.
ವಿವಿಧ ಕಂಪನಿಗಳು ಸಾರ್ವಜನಿಕರಿಗೆ ದುಡ್ಡನ್ನು ತೆಗೆದುಕೊಂಡು ವಂಚನೆ ಮಾಡಿರುವ ಕುರಿತಾಗಿ ಕಳೆದ ಸುಮಾರು ಒಂದು ತಿಂಗಳಿನಿAದ ಕೂಡ ಸಾಕಷ್ಟು ಜಿಲ್ಲಾಧಿಕಾರಿಗಳ ಕಛೇರಿಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದರು. ಈ ಮಧ್ಯ ಅರ್ಜಿಗಳನ್ನು ಸಲ್ಲಿಸುವುದರಲ್ಲಿ ಕೆಲ ಸಂಘ ಸಂಸ್ಥೆಗಳು ಪುನಃ ಹಣವನ್ನು ವಾಪಸ್ಸು ಕೊಡಿಸುವುದಾಗಿ ಆಮೀಶ ಒಡ್ಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪುನಃ ವಂಚನೆ ಮಾಡುತ್ತಿರುವುದಾಗಿ ಸಕ್ಷಮ ಪ್ರಾಧಿಕಾರಿಗಳು ಅಂಥವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಂಡು
ಅಧಿಕೃತವಾಗಿ ಬಡ್ಸ್ ಕಾಯ್ದೆ ಹಾಗೂ ಕೆ.ಪಿ.ಐ.ಡಿ. ಕಾನೂನಿನ ಪ್ರಕಾರ ಯಾವುದೇ ಅರ್ಜಿಗಳನ್ನು ಸ್ವೀಕರಿಸಬೇಕಾದರೆ ಸಕ್ಷಮ ಪ್ರಾಧಿಕಾರ ನೇಮಕಾತಿಯಾಗಬೇಕು ಮತ್ತು ನೇಮಕಾತಿಯಾದ ನಂತರ ಸಕ್ಷಮ ಪ್ರಾಧಿಕಾರ ಅಧಿಕೃತವಾದಂತಹ ಅಧಿಸೂಚನೆಯನ್ನು ಹೊರಡಿಸಬೇಕು ಹಾಗೂ ಅರ್ಜಿಯ ನಮೂನೆಯನ್ನು ಸಕ್ಷಮ ಪ್ರಾಧಿಕಾರವೆ ನಿಗದಿಪಡಿಸಬೇಕಾಗಿರುತ್ತದೆ. ಈ ಕುರಿತು ವಿಶೇಷಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ಇವರು ದಿನಾಂಕ:28-08-2024 ರಂದು ಸುತ್ತೋಲೆಯನ್ನು ಸಹ ಹೊರಡಿಸಿರುತ್ತಾರೆ.
ಕಾರಣ ಹಣ ಕಳೆದುಕೊಂಡು ವಂಚನೆಗೊಳಗಾದ ಸಾರ್ವಜನಿಕರು ಆಂತಕಕ್ಕೊಳಗಾಗದೆ ಯಾವುದೇ ಸಂಘ ಸಂಸ್ಥೆಗಳು ಹಣ ವಾಪಸ್ಸು ಕೊಡಿಸುವುದಾಗಿ ಆಮೀಷ ಒಡ್ಡಿದಲ್ಲಿ ಅಂತಹ ಆಮೀಷಗಳಿಗೆ ಯಾರು ಒಳಗಾಗದೆ ಹಾಗೂ ಅರ್ಜಿಗಳಿಗಾಗಿ ತಮ್ಮ ಹಣವನ್ನು ಕಳೆದುಕೊಳ್ಳಬಾರದು ಎಂದು ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.