
ಬೀದರ್: ‘ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ತುಂಬಾ ಅನುಕೂಲಕರವಾಗಿದೆ ‘ ಎಂದು ಸರ್ಕಾರಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭುಲಿಂಗ ತುಗಾಂವೆ ಅಭಿಪ್ರಾಯಪಟ್ಟರು.
ಇಲ್ಲಿಯ ಹಾರೂರಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಶನಿವಾರ ಆಯೋಜಿಸಿದ್ದ ಹಳ್ಳದಕೇರಿ ಕ್ಲಸ್ಟರ್ ಮಟ್ಟದ
ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ ಕಲೋತ್ಸವದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಪ್ರಜ್ಞೆ, ಜಾಗೃತಿ, ಭಾವೈಕ್ಯ ಬೆಳೆಯುತ್ತದೆ’ ಎಂದರು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶೋಕ ದಿಡಗೆ, ಸಿಆರ್ ಪಿ ಹಾಗೂ ಸಿಆರ್ ಪಿ ಇದ್ದರು.
*ನಗರದ ಹಾರೂರಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಸಂಭ್ರಮಕ್ಕೆ ಮಳೆ ತೋಡಕಾಯಿತು.
ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ
ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಜೋರಾಗಿ ಮಳೆ ಬಂತು. ನಂತರ ವೇದಿಕೆಯಲ್ಲಾ ಒದ್ದೆಯಾಗಿ ಆವರಣದಲ್ಲಿ ನೀರು ನಿಂತು ಎಲ್ಲೆಡೆ ಕೆಸರುಮಯವಾಯಿತು. ಬಣ್ಣ ಬಣ್ಣಗಳಿಂದ ಕೂಡಿದ ಹೊಸ ಬಟ್ಟೆಗಳನ್ನು ತೊಟ್ಟ ಮಕ್ಕಳಿಗೂ ಇರುಸುಮುರುಸು ಉಂಟಾಯಿತು.
ತಮ್ಮ ಮಕ್ಕಳ ಪ್ರತಿಭೆಯನ್ನು ಕಣ್ತುಂಬಿಕೋಳ್ಳಲು ಬಂದ ಪಾಲಕರಿಗೆ ತೀವ್ರ ನಿರಾಸೆಯಾಯಿತು. ನಂತರ ಶಾಲಾ ಕೊಠಡಿಯಲ್ಲಿ ಮಕ್ಕಳ ಕಾರ್ಯಕ್ರಮ ನಡೆದವು. ಆದರೂ ಕೂಡ ಸಂಭ್ರಮ ಕಣ್ಮರೆಯಾಗಿತ್ತು ‘ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶೋಕ ದಿಡಗೆ ಬೇಸರ ವ್ಯಕ್ತಪಡಿಸಿದರು.