
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಔರಾದ : ಬಿಜೆಪಿ ತನ್ನ ಸಂಘಟನಾ ರಚನೆಯನ್ನು ಬಲಪಡಿಸುವ ಉದ್ದೇಶದಿಂದ ಸೆಪ್ಟೆಂಬರ್ 2 ರಿಂದ ದೇಶಾದ್ಯಂತ ಸದಾಸ್ಯತ ಅಭಿಯಾನ ನಡೆಸಿಸುತ್ತಿದೆ ಈ ನಿಟ್ಟಿನಲ್ಲಿ ಯುವಮೋರ್ಚಾ ಕಾರ್ಯಕರ್ತರು ಸಕ್ರಿಯರಾಗಿ ತೊಡಗಿಸಿಕೊಳ್ಳಬೆಕೆಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ರೆಡ್ಡಿ ಹೇಳಿದರು.
ಔರಾದ ಪಟ್ಟಣದ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಮೋರ್ಚಾ ಜಿಲ್ಲಾ ಪ್ರಭಾರಿ ಗುರುನಾಥ ರಾಜಗೀರಾ ಮಾತನಾಡಿ
ಪ್ರತಿ ಆರು ವರ್ಷಗಳಿಗೊಮ್ಮೆ ಬಿಜೆಪಿಯು ಸದಸ್ಯತ್ವ ಅಭಿಯಾನದ ಸಮಯದಲ್ಲಿ, ಅಸ್ತಿತ್ವದಲ್ಲಿರುವ ಸದಸ್ಯರನ್ನು ನವೀಕರಿಸುವುದರ ಜೊತೆಗೆ ಹೊಸ ಸದಸ್ಯರನ್ನು ಮಾಡುತ್ತದೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದಕ್ಕೆ ಚಾಲನೆ ನೀಡಿದ್ದು ಔರಾದ ಕ್ಷೇತ್ರದಲ್ಲಿ ಶಾಸಕರಾದ ಪ್ರಭು ಚವ್ಹಾಣ ಅವರ ನೇತೃತ್ವದಲ್ಲಿ ಪಕ್ಷವು ಬಹಳ ಸಕ್ರಿಯವಾಗಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದು ಯುವಮೋರ್ಚಾದ ಎಲ್ಲ ಕಾರ್ಯಕರ್ತರು ಕೂಡ ಸದಸ್ಯತಾ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೇಶ ಸ್ವಾಮಿ ಮಾತನಾಡಿ ಸದಸ್ಯತ್ವ ಅಭಿಯಾನವನ್ನು ಕೇವಲ ಸಂಖ್ಯಾತ್ಮಕ ದೃಷ್ಟಿಯಿಂದಲ್ಲದೆನೆ ಕೌಟುಂಬಿಕ ಮತ್ತು ಸೈದ್ಧಾಂತಿಕ ಅಭಿಯಾನವೆಂದು ಪರಿಗಣಿಸಿ ಸಕ್ರೀಯರಾಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೈತಮೋರ್ಚಾ ಅದ್ಯಕ್ಷ ಶಿವರಾಜ ಅಲ್ಮಾಜಿ, ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಸವಾರಜ ಹಳ್ಳೆ, ಕಾರ್ಯದರ್ಶಿ ಶರದ ಧನಗೆ ಪ್ರಮುಖರಾದ ಆನಂದ ದ್ಯಾಡೆ, ಸಂದೀಪ ಪಾಟೀಲ, ಸುನೀಲ ಸುಸಲಾದೆ, ಗಣೇಶ ಭಾಲ್ಕೆ, ಪ್ರಶಾಂತ ದೇಶಮುಖ, ಅಂಬದಾಸ ನೇಳಗೆ, ಅಶೋಕ ಶೆಂಬೆಳ್ಳಿ, ಸೇರಿದಂತೆ ಇತರರಿದ್ದರು.