
ಕಮಲನಗರ:ಶ್ರಾವಣ ಮಾಸ ನಿಮಿತ್ತ ತಾಲೂಕಿನ ಡಿಗ್ಗಿ ಗ್ರಾಮದ ಶ್ರೀ ಮಡಿವಾಳೇಶ್ವರ ಭಜನೆ ಮಂಡಳಿ ವತಿಯಿಂದ ಕಮಲನಗರ ಹೊರ ವಲಯದಲ್ಲಿ ಇರುವ ಸಂಗಮೇಶ್ವರ ದೇವಾಲಯದಲ್ಲಿ ಸೋಮವಾರ ಒಂದು ದಿನದ ಭಜನೆ ಕಾರ್ಯಕ್ರಮ ನಡೆಯಿತು.
ಸೋಮವಾರ ಬೆಳಗ್ಗೆ 9 ಗಂಟೆಗೆ ಆಟೋ,ಬೈಕ್, ಕಾಲ್ನಡಿಗೆ ಮೂಲಕ ಸಂಗಮೇಶ್ವರ ದೇವಾಲಯಕ್ಕೆ ಬಂದು ಭಕ್ತಿ ಭಾವದಿಂದ ಸುಮಾರು 3 ಗಂಟೆ ಕಾಲ ಭಜನೆ ಮಾಡಿದರು, ಈ ವೇಳೆ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ತೆಂಗಿನಕಾಯಿ ಒಡೆದರು.ಕಮಲನಗರ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಶಿವಕುಮಾರ ಜುಲ್ಪೆ ಬಾಳೆ ಹಣ್ಣು ಪ್ರಸಾದ ಸೇವೆ ನೀಡಿದರು. ನಂತರ ಅನ್ನಾ, ಸಾರು, ಲಡ್ಡು ಪ್ರಸಾದವನ್ನು ಸೇವಿಸಿ ಸಂಜೆ ಮರಳಿ ಡಿಗ್ಗಿ ಗ್ರಾಮಕ್ಕೆ ತೆರಳಿದ್ದರು.
1) ಡಿಗ್ಗಿ ಗ್ರಾಮದ ಮಡಿವಾಳೇಶ್ವರ ದೇವರಿಗೂ ಮಡ್ಡಿ ಸಂಗ ದೇವರಿಗೂ ನಂಟು ಇದೆ, ಹೀಗೆ ನಮ್ಮ ಪೂರ್ವರೂ ನಂಬಿದ್ದರ, ಹಾಗಾಗಿ ನಾವು ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಒಂದು ಸೋಮವಾರ ಸಂಗದೇವರ ಸನ್ನಿದಿಯಲ್ಲಿ ಭಜನೆ ಮಾಡಿ ದೇವರ ಆರಾಧನೆ ಮಾಡುತ್ತೇವೆ.”
-ಮಡಿವಾಳಪ್ಪ ಮುರ್ಕೆ
ಡಿಗ್ಗಿ ಗ್ರಾಮದ ಹಿರಿಯರು.
—
2:”ಕಮಲನಗರ ಹೊರ ವಲಯದಲ್ಲಿ ಇರುವ ಈ ದೇವಸ್ಥಾನ ಸುಮಾರ ಶತಮಾನದ ಪುರಾತನ ದೇವಾಲಯವಾಗಿದೆ. ಮೊದಲು ನಮ್ಮ ತಂದೆ ಈ ದೇವಾಲಯದಲ್ಲಿ ಹಲವು ವರ್ಷದದಿಂದ ಪೂಜೆ ಮಾಡಿದ್ದರು. ಇದ್ದಿಗ ನಾನು ಸುಮಾರು 50 ವರ್ಷದ ದಿಂದ ದೇವಾಲಯದಲ್ಲಿ ಇದ್ದು ದೇವರ ಸೇವೆ ಮಾಡುತ್ತಿದ್ದೇನೆ.”
ಧನಾಜಿ ತಂದೆ ನಿವೃತ್ತಿರಾವ ಕದಂ,
ಸಾಗಮೇಶ್ವರ ದೇವಾಲಯದ ಪೂಜಾರಿ.
ಈ ಕಾರ್ಯಕ್ರಮದಲ್ಲಿ ಮಡಿವಾಳೇಶ್ವರ ದೇವಾಲಯ ಟ್ರಸ್ಟ್’ನ ಅಧ್ಯಕ್ಷ ದೇವೇಂದ್ರ ಪಾಟೀಲ, ಶಿವಕುಮಾರ ರಾಂಪುರೆ, ವಿಜಯಕುಮಾರ ಪಾಟೀಲ, ಸೂರ್ಯಕಾಂತ ಬಿರಾದಾರ, ವೈಜೀನಾಥ ಕುಂಬಾರಗಿರೆ, ಸಂಗಮನಾಥ ಬಿರಾದಾರ,ಮಲ್ಲಿಕಾರ್ಜುನ ರಾಂಪುರೆ, ಮಹಾದಯ್ಯ ಸ್ವಾಮಿ, ಚಂದ್ರಕಾಂತ ಸ್ವಾಮಿ, ತಬಲಾ ವಾದ್ಯಕಾರದ ನಾಗಯ್ಯ ಸ್ವಾಮಿ, ಹಾರ್ಮೋನಿಮ್ ವಾದ್ಯ ಕಾರದ ಯುವರಾಜ ಚಾಂಡೇಶ್ವರೆ, ಕಾಶಿಬಾಯಿ ಪಾಂಚಾಳ, ಯುವಕಾರದ ರಾಜಕುಮಾರ ಕುಂಬಾರಗಿರೆ,ಪರಮೇಶ ರಾಂಪುರೆ,ಸಂಗಮೇಶ ಬನವಾಸೆ, ಮನೋಜ ರಾಂಪುರೆ, ನಾಗರಾಜ ಸ್ವಾಮಿ, ಅಭಿಜಿತ ರಾಂಪುರೆ, ಸಂದೀಪ ಬನವಾಸೆ, ಸೇರಿದಂತೆ ಅಕ್ಕನ ಬಳಗ ಹಾಗೂ ಅಣ್ಣ’ನ ಬಳಗದರು ಸುತ್ತ ಮುತ್ತಲಿನ ಗ್ರಾಮದ ಭಕ್ತರು ಇದ್ದರು.