September 7, 2025

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}

ಬೀದರ:- ರಾಜ್ಯದ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿಯಲ್ಲಿ ಪಶು ಸಂಗೋಪನಾ ಹಾಗೂ ಮೀನುಗಾರಿಕೆ ವಲಯಗಳು ಪ್ರಮುಖ ಪಾತ್ರ ವಹಿಸುತ್ತವೆ, ಯುವ ಪದವೀಧರರು ತಾಂತ್ರಿಕ ಪ್ರಾವೀಣ್ಯ ಹೊಂದಿ ಪಶು ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಪಶು ಸಂಗೋಪನೆ ಮತ್ತು ರೇಷ್ಮೆ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಹೇಳಿದರು.
ಅವರು ಮಂಗಳವಾರ ಕಮಠಾಣ ರಸ್ತೆಯ ನಂದಿನಗರ ಆವರಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕರ್ನಾಟಕ ಸರ್ಕಾರವು “ಪಶು ಭಾಗ್ಯ”, “ಕ್ಷೀರ ಭಾಗ್ಯ”, “ಮೀನು ಸಿರಿ” ಮುಂತಾದ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಈ ಯೋಜನೆಗಳ ಯಶಸ್ಸಿಗೆ ನಿಮ್ಮಂತಹ ಯುವ ವೃತ್ತಿಪರರ ಸಹಕಾರ ಅತ್ಯಗತ್ಯ. ಕರ್ನಾಟಕದ ಪಶುಸಂಗೋಪನಾ ವಲಯವು ವಿಶಾಲವಾಗಿದೆ. ಜಿನೋಟಿಕ್ ರೋಗಗಳ ನಿಯಂತ್ರಣ, ಪಶುಗಳ ಆರೋಗ್ಯ ರಕ್ಷಣೆ ಮತ್ತು ಮೀನುಗಾರಿಕೆ ವಲಯದ ಸುಸ್ಥಿರ ಅಭಿವೃದ್ಧಿ ನಮ್ಮ ಆದ್ಯತೆಗಳಾಗಿದ್ದು, ಜಿನೋಟಿಕ್ ರೋಗಗಳಿಂದಾಗಿ ಕರ್ನಾಟಕವು ಪ್ರತಿ ವರ್ಷ ಗಮನಾರ್ಹ ಆರ್ಥಿಕ ನಷ್ಟವನ್ನು ಅನುಭವಿಸುತ್ತದೆ. “ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ”ದ ಯಶಸ್ಸಿಗೆ ನಿಮ್ಮ ಪಾತ್ರ ಪ್ರಮುಖವಾಗಿದೆ. ಈ ಸವಾಲುಗಳನ್ನು ಎದುರಿಸಲು ನಿಮ್ಮಂತಹ ಯುವ ವೃತ್ತಿಪರರ ಅಗತ್ಯವಿದೆ ಕರ್ನಾಟಕ ಸರ್ಕಾರವು ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಯಶಸ್ಸಿಗೆ ನಿಮ್ಮಂತಹ ಯುವ ವೃತ್ತಿಪರರ ಸಹಕಾರ ಅತ್ಯಗತ್ಯವಿದೆ ಎಂದರು.
ಈ ವಿಶ್ವವಿದ್ಯಾಲಯವು ಕರ್ನಾಟಕದ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ಕ್ಷೇತ್ರದಲ್ಲಿ ಅತ್ಯುತ್ತಮ ಶಿಕ್ಷಣವನ್ನು ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಕರ್ನಾಟಕದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ವಲಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಜ್ಯದಲ್ಲಿ ಸುಮಾರು 2.9 ಕೋಟಿ ಜಾನುವಾರುಗಳಿವೆ ಮತ್ತು ಮೀನುಗಾರಿಕಾ ವಲಯವು ಸುಮಾರು 1.6 ಮಿಲಿಯನ್ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿದೆ. ನಮ್ಮ ರಾಜ್ಯದ ಆರ್ಥಿಕತೆಗೆ ಈ ವಲಯಗಳು ಬೆನ್ನೆಲುಬಾಗಿವೆ. ಈ ವಲಯಗಳ ಅಭಿವೃದ್ಧಿಗೆ ನುರಿತ ವೃತ್ತಿಪರರ ಅಗತ್ಯವಿದೆ. ಈ ವಿಶ್ವವಿದ್ಯಾಲಯವು ಅಂತಹ ಅಗತ್ಯವನ್ನು ಪೂರೈಸುವಲ್ಲಿ ಮಹತ್ವದ ಕೊಡುಗೆ ನೀಡುತ್ತಿದೆಂದರು.
ಒಂದು ರಾಷ್ಟ್ರದ ಶ್ರೇಷ್ಠತೆ ಮತ್ತು ಅದರ ನೈತಿಕ ಪ್ರಗತಿಯನ್ನು ಅದರ ಪ್ರಾಣಿಗಳನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಮೂಲಕ ನಿರ್ಣಯಿಸಬಹುದು.” ಎಂಬ ಮಹಾತ್ಮಗಾಂಧಿಯವರ ಈ ಮಾತುಗಳು ಈ ಸಂದರ್ಭದಲ್ಲಿ ಪ್ರಸ್ತುತವೆನಿಸುತ್ತದೆ. ನಮ್ಮ ಸಮಾಜದ ರಚನೆ, ನಾವು ಬಯಸುವ ರೂಪಾಂತರ-ಬಡತನ, ನಿರುದ್ಯೋಗ ಮತ್ತು ಹಸಿವಿನ ನಿರ್ಮೂಲನೆ-ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿಯ ಮೇಲೆ ಅವಲಂಬಿತವಾಗಿದೆ. ಈ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ಪದವೀಧರರಾಗಿ ವಿಶಿಷ್ಟ ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದೀರಿ ಹಾಗೂ ಪಶುವೈದ್ಯಕೀಯ, ಹೈನು ಮತ್ತು ಮೀನುಗಾರಿಕೆ ವಿಜ್ಞಾನಗಳಲ್ಲಿ ಪರಿಣತಿಯನ್ನು ಹೊಂದಿದ್ದೀರಿ, ಮತ್ತು ನಮ್ಮ ರಾಷ್ಟ್ರಕ್ಕೆ ಅಗತ್ಯವಾದ ಬದಲಾವಣೆಯನ್ನು ತರಲು ಈ ಜ್ಞಾನವನ್ನು ಬಳಸಿಕೊಳ್ಳಬೇಕೆಂದರು.
ಪುಣೆ ಐ.ಸಿ.ಎಮ್.ಆರ್- ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ನಿರ್ದೇಶಕರಾದ ಡಾ.ನವೀನಕುಮಾರ ಅವರು ಮಾತನಾಡಿ, ಪಶು ವೈದ್ಯರು ಸಾರ್ವಜನಿಕ ಹಾಗೂ ಪಶುವೈದ್ಯಕೀಯ ಎರಡು ಆರೋಗ್ಯ ಕಾಪಾಡುವಲ್ಲಿ ಮಹತ್ವ ಪಾತ್ರ ವಹಿಸುತ್ತಾರೆ. ದೇಶದ ಹಾಲು ಹಾಗೂ ಮಾಂಸ ಉತ್ಪಾದನೆಯಲ್ಲಿ ಸಾಮಥ್ಯ ತೋರಿಸಿದ್ದಾರೆ. ಅದಲ್ಲದೇ ಸಂಶೋಧನೆ ಮಾಡುವ ಮೂಲಕ ಹಲವಾರು ರೋಗಗಳನ್ನು ನಿರ್ಮೂಲನೆ ಮಾಡಿದ್ದಾರೆ. ಗ್ರಾಮೀಣ ಅಬಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಬೇಕೆಂದು ಕರೆ ನೀಡಿದರು.
ಚಿನ್ನದ ಪದಕ ಪಡೆದವರ ವಿವರ: 2022-23ನೇ ಸಾಲಿನ ಬ್ಯಾಚುಲರ್ ಆಫ್ ವೆಟರ್ನರಿ ಸೈನ್ಸ್ ಅಂಡ್ ಅನಿಮಲ್ ಹಸ್ಬೆಂಡ್ರಿ (ಬಿವಿಎಸ್‌ಸಿ ಅಂಡ್ ಎಎಚ್) ಸ್ನಾತಕ ಪದವಿಯಲ್ಲಿ ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ, ಜೆ.ಪಿ. ನಗರದ ನಿವಾಸಿ ಆದಿತ್ಯ ಚಿದಾನಂದ ಈಶ್ವರಲ ಅವರು 9 ಚಿನ್ನದ ಪದಕಗಳಿಗೆ ಭಾಜನರಾದರು. ಆದಿತ್ಯ ಅವರ ಸಹಪಾಠಿ ರವೀನಾ ಅವರು 15 ಚಿನ್ನದ ಪದಕಗಳ ಸಾಧನೆ ಮಾಡಿದರು. ಚಿತ್ರದುರ್ಗದ ರವೀನಾ ಅವರು ಗೈರು ಹಾಜರಾಗಿದ್ದರು.
ಚಿತ್ರದರ್ಗದ ಚಳ್ಳಕೆರೆಯ ಚಿಕ್ಕೇನಹಳ್ಳಿ ಗ್ರಾಮದರಾದ ದಕ್ಷೀತ್ ಪಿ.ಎಲ್. ಅವರು ಎಂವಿಎಸ್‌ಸಿ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿದರು. ಇವರು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 2022-23ನೇ ಸಾಲಿನಲ್ಲಿ ಈ ಸಾಧನೆ ಮಾಡಿದರು.
ಸ್ನಾತಕ ಪದವಿಯಲ್ಲಿ 16 ವಿದ್ಯಾರ್ಥಿಗಳಿಗೆ 53 ಚಿನ್ನದ ಪದಕಗಳು, ಸ್ನಾತಕೋತ್ತರ ಪದವಿಯಲ್ಲಿ 21 ವಿದ್ಯಾರ್ಥಿಗಳಿಗೆ 34 ಚಿನ್ನದ ಪದಕಗಳು, ಡಾಕ್ಟರೇಟ್ ಪದವಿ ಪೂರೈಸಿದ ಏಳು ವಿದ್ಯಾರ್ಥಿಗಳಿಗೆ ತಲಾ ಒಂದು ಚಿನ್ನದ ಪದಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಎರಡು ಚಿನ್ನದ ಪದಕ ಸೇರಿದಂತೆ ಒಟ್ಟು 96 ಚಿನ್ನದ ಪದಕಗಳನ್ನು ನೀಡಲಾಯಿತು. ಒಟ್ಟು 634 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. 419 ಸ್ನಾತಕ ಪದವೀಧರರು, 187 ಸ್ನಾತಕೋತ್ತರ ಹಾಗೂ 28 ಡಾಕ್ಟರೇಟ್ ಪದವೀಧರರು ಸೇರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಪಶುವೈದ್ಯಕೀಯ ಹಾಗೂ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಳಾದ ಪ್ರೋ.ಕೆ.ಸಿ.ವೀರಣ್ಣ, ಕುಲಸಚಿವರಾದ ಪಿ.ಟಿ.ರಮೇಶ, ಮುಖ್ಯ ಅತಿಥಿಗಳಾದ ವಿಶ್ವವಿದ್ಯಾಲಯ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಬತಮುರ್ಗೆ ಹಾಗೂ ಇತರೇ ಅಧಿಕಾರಿಗಳು, ಬೋಧಕರು, ಸಿಬ್ಬಂದಿಗಳು ಸೇರಿದಂತೆ ಡಾಕ್ಟರೇಟ್ ಸ್ನಾತಕೋತ್ತರ ಮತ್ತು ಪದವಿಗಳನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771