
ವಡಗೇರಾ : ಪ್ರತಿವರ್ಷದಂತೆ ಈ ವರ್ಷವೂ ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಪ್ರಸಿದ್ಧ ಕ್ಷೇತ್ರವಾದ ಗೋನಾಲ ಗ್ರಾಮದ ಆದಿಶಕ್ತಿ ಶ್ರೀ ದುರ್ಗಾದೇವಿಯ ಜಾತ್ರೆಯು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಫೆ.5.ರಂದು ಬೆಳಿಗ್ಗೆ 4. ಗಂಟೆಗೆ ಕೈಯಿಂದ ಪಾಯಸ ತಿರುಸುವ ಪವಾಡ ಕಾರ್ಯಕ್ರಮ ನಂತರ ಬೆಳಗ್ಗೆ 9:00 ಗಂಟೆಯಿಂದ ಮಧ್ಯಾಹ್ನ 1. ಗಂಟೆಯವರೆಗೆ ಮಕ್ಕಳ ಜವಳಾ ಕಾರ್ಯ ನಡೆದವು ನಂತರ ಸಾಯಂಕಾಲ 5:30ಕ್ಕೆ ಶ್ರೀ ದುರ್ಗಾ ದೇವಿಯ ಮಹಾ ರಥೋತ್ಸವ ಅತ್ಯಂತ ಸಡಗರ ಸಂಭ್ರಮದಿಂದ ಜರಗಿತು. ರಥಕ್ಕೆ ಫಲ ಪುಷ್ಪೂ ಹೂವು ಹಣ್ಣುಗಳಿಂದ ಅಲಂಕರಿಸಲಾಗಿತ್ತು. ರಥೋತ್ಸವಕ್ಕೆ ಭಕ್ತರು ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ರಥೋತ್ಸವದ ನಂತರ ಜೋಗುತಿ ಕುಣಿತ ರಾತ್ರಿ ಭಜನಾ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿತ್ತು. ಈ ಜಾತ್ರಾ ಮಹೋತ್ಸವಕ್ಕೆ ಕರ್ನಾಟಕ ಸೇರಿದಂತೆ ಆಂಧ್ರ ,ತೆಲಂಗಾಣ, ಮಹಾರಾಷ್ಟ್ರ ,ಗುಜರಾತ್, ಹಾಗೂ ಇನ್ನಿತರ ಪ್ರದೇಶಗಳಿಂದ ಭಕ್ತರು ಮತ್ತು ಜನಪ್ರತಿನಿಧಿಗಳು ವಿವಿಧ ಪಕ್ಷದ ರಾಜಕೀಯ ಮುಖಂಡರು ಸುತ್ತಮುತ್ತಲು ಗ್ರಾಮದ ಭಕ್ತಾದಿಗಳು ಭಾಗವಹಿಸಿದ್ದರು. ಜಾತ್ರೆಯಲ್ಲಿ ಬೆಂಡು ಬೇತಾಸು ಮಂಡಾಳು ಜಿಲೇಬಿ ಬಜಿ ಖರಿದಿ ವ್ಯಾಪಾರ ಜೋರಾಗಿತ್ತು ಮಕ್ಕಳು ಜೋಕಾಲಿ ತೊಟ್ಟಿಲಿನಲ್ಲಿ ಕುಳಿತು ಸಂಭ್ರಮಿಸಿದರು. ಪರಸ್ಥಳದಿಂದ ಬಂದಂತ ಭಕ್ತರಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಯಾದಗಿರಿ ಸಿಪಿಐ ಸುನಿಲ್ ಮೂಲಿಮನಿ ಮಾರ್ಗದರ್ಶನದ ಮೇರೆಗೆ ವಡಗೇರಾ ಪೊಲೀಸ್ ಠಾಣೆಯ ಪಿಎಸ್ಐ ಮೈಬುಬ ಅಲಿ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಅಚ್ಚುಕಟ್ಟಾಗಿ ನಿರ್ವಹಿಸಿದರು