
ಶಹಾಪುರ; ನಗರದ ವಾರ್ಡ್ ನಂ ೩೧ ಕ್ಕೆ ತೆರಳುವ ಕನಕನಗರ ಬಡವಣೆಯಲ್ಲಿ ನೂತನ ಹೈಮಾಸ್ಟ್ ಅಳವಡಿಸಿದ್ದು ನಗರಸಭೆ ಸದಸ್ಯ ಬಸವರಾಜ ಚೆನ್ನೂರ ಉದ್ಘಾಟಿಸಿದರು.
ಶಾಲಾ-ಕಾಲೇಜು, ಬಸ್ ನಿಲ್ದಾಣ, ಟ್ಯೂಷನ್ ತರಗತಿ, ಕೋರ್ಟ್ಗೆ ಹೋಗುವ ರಸ್ತೆ ಇದಾಗಿದ್ದು, ಜನ ವಾಹನ ಸಂಚಾರ, ಜನದಟ್ಟನೆ ಇರಲಿದೆ. ಬೆಳಕಿನ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತೊಂದರೆ ಆಗುತಿತ್ತು ಇದರಿಂದ ಹೈಮಾಸ್ಟ್ ಅಳವಡಿಸಿದ್ದು ಜನರಿಗೆ ಅನುಕೂಲವಾಗಲಿದೆ ಎಂದರು. ಬಡವಣೆಯಲ್ಲಿ ಕಳ್ಳತನದಂತಹ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೇ ಈ ಹಿಂದೆ ಬಡವಣೆ ಜನತೆ ಮತ್ತು ಕುರುಬ ಸಮಾಜದ ವತಿಯಿಂದ ನಗರಸಭೆಯ ಪೌರಯುಕ್ತರಿಗೆ ಮನವಿ ಪತ್ರ ಸಹ ಸಲ್ಲಿಸಲಾಗಿತ್ತು, ಇದರ ಬೆನ್ನಲ್ಲೇ ನೂತನ ಹೈಮಾಸ್ಟ್ ದೀಪಗಳನ್ನು ಅಳವಡಿಸಿದ್ದು ಕನಕ ಬಡವಣೆ ಮತ್ತು ಬಸವೇಶ್ವರ ಬಡವಣೆಯ ಜನತೆ ವತಿಯಿಂದ ವಾರ್ಡ್ ಸದಸ್ಯ ಬಸವರಾಜ ಚೆನ್ನೂರ ಅವರನ್ನು ಸನ್ಮಾನಿಸಿ ಧನ್ಯವಾದ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಶಿವಶರಣ ಇಟಗಿ ಮಾತನಾಡಿ ಈ ಭಾಗದಲ್ಲಿ ನಿತ್ಯ ಹೆಚ್ಚು ಜನದಟ್ಟಣೆ ಇರಲಿದ್ದು ಈ ಬಗ್ಗೆ ಸಚಿವರ ಗಮನಕ್ಕೆ ತಂದು ನಗರಸಭೆ ವತಿಯಿಂದ ವಾರದೊಳಗೆ ಬಡವಣೆ ಜನತೆಯ ಹಿತದೃಷ್ಠಿಯಿಂದ ಸಿಸಿ ಕ್ಯಾಮರ ಅಳವಡಿಸಿ ಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕುರುಬ ಸಮಾಜದ ತಾಲೂಕ ಅಧ್ಯಕ್ಷ ಯಲ್ಲಪ್ಪ ನರಿ, ಮಲ್ಲಣ್ಣ ಉಳ್ಳಂಡಗೇರ, ಮಹೇಶ ಮಡಿವಾಳಕರ್, ಜಗನಾಥರೆಡ್ಡಿ, ಅಲ್ಲ ಪಟೇಲ್ ಮಕ್ತಾಪುರ, ಅಯ್ಯಣ್ಣ ಇನಾಂದಾರ, ಶಿಕ್ಷಕರಾದ ಅರುಣ, ನಿಂಗಣ್ಣ ಬೇವಿನಹಳ್ಳಿ, ದೇವಿಂದ್ರಪ್ಪ ನಾಶಿ, ರವಿಕುಮಾರ ಹೊಟ್ಟಿ, ಶೇಖರಗೌಡ, ಅಶೋಕ ದಿನ್ನಿ ಸೇರಿದಂತೆ ಬಡವಣೆಯ ಜನತೆ ಇದ್ದರು.