
ಶಹಾಪುರ:- ನಗರದ ಬಸವೇಶ್ವರ ವೃತ್ತ ದಲ್ಲಿನ ಬಸವೇಶ್ವರ ಪುತಳಿಯ ಪಕ್ಕದಲ್ಲಿ ಯೇ ಬಾರ್ ಸ್ಥಾಪನೆ ಮಾಡಿದ್ದಾರೆ. ಸಾರ್ವಜನಿಕ ಹಿತದೃಷ್ಟಿಯಿಂದ ಬಾರ್ ಪರವಾನಗಿ ರದ್ದು ಪಡಿಸಬೇಕೆಂದು ಅಗ್ರಹಿಸಿ ಶಹಾಪುರ ತಾಲ್ಲೂಕು ಹಿತ ರಕ್ಷಣೆ ಸಮಿತಿ ವತಿಯಿಂದ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶರಣ ಬಸಪ್ಪಗೌಡ ದರ್ಶನಪುರ ಅವರು ಸಹ ಪ್ರತಿಭಟನೆ ತೆರಳಿ ಮನವಿ ಪತ್ರ ಸ್ವೀಕರಿಸಿದರು. ಹಿರಿಯ ಮುಖಂಡ ಚೆನ್ನಪ್ಪ ಆನೆಗುಂದಿ ಮಾತನಾಡಿ ಹೆಚ್ಚು ಜನ ದಟ್ಟನೆ ಸ್ಥಳವಾಗಿದ್ದು, ಬೀದರ್ ಶ್ರೀರಂಗಪಟ್ಟಣಕ್ಕೆ ಹೊಂದಿಕೊಂಡು ನಗರದ ಹನುಮಾನ್ ದೇವಸ್ಥಾನಕ್ಕೆ ತೆರಳುವ ಪ್ರಮುಖ ರಸ್ತೆಯಾಗಿದೆ ಪುತ್ತಳಿಯ ಸುತ್ತಲೂ ಅಂಗಡಿ ಮುಂಗಟ್ಟು ಗಳಿದ್ದು ಸಾಕಷ್ಟು ಜನರು ಬರುತ್ತಾರೆ. ಅಲ್ಲದೆ ಮಹಿಳೆಯರು ತರಕಾರಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಖರೀದಿಸಲು ಇದೆ ರಸ್ತೆ ಅವಲಂಬಿಸಿದ್ದಾರೆ. ಮಹಿಳೆಯರ ರಕ್ಷಣೆ ಈತದೃಷ್ಟಿಯಿಂದ ಪರವಾನಿಗೆ ರದ್ದು ಪಡಿಸಬೇಕೆಂದು ಮನವಿ ಸಲ್ಲಿಸಿದರು.