
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
ಬೀದರ್:- ಜಿಲ್ಲಾ ಎಸ್ ಕೆ ಡಿ ಆರ್ ಡಿಪಿ ಕಚೇರಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರ ಸಭೆಯನ್ನು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ವೀರುಪಾಕ್ಷ ಗಾದಗಿ ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.
ಪ್ರತಿ ಮೂರು ತಿಂಗಳಿಗೊಮ್ಮ ಜಿಲ್ಲಾ ಕೇಂದ್ರದಲ್ಲಿ ಜರುಗುವ ಸಭೆಗಳಲ್ಲಿ ಕಡ್ಡಾಯವಾಗಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಭಾಗವಹಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಹಾಗು ಈ ಸಭೆಯಲ್ಲಿನ ಕೆಲಸಕಾರ್ಯಗಳ ಬಗ್ಗೆ ಮಾಹಿತಿ ಅರಿತು ತಮ್ಮ ಅನಿಸಿಕೆಗಳನ್ನು ತಿಳಿಸಬೇಕು ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೀದರ್ ಜಿಲ್ಲಾ ಅಧ್ಯಕ್ಷ ವೀರುಪಾಕ್ಷ ಗಾದಗಿ ಹೇಳಿದರು,
ಜಿಲ್ಲಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್ ಕೆ ಡಿ ಆರ್ ಡಿಪಿ) ಕಚೇರಿಯಲ್ಲಿ ಮಂಗಳವಾರ ಜರುಗಿದ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಧ್ಯಪಾನ ಮುಕ್ತ ಶಿಬಿರಗಳಂತಹ ಜನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ವ್ಯಸನಮುಕ್ತ ಸಮಾಜ ಕಟ್ಟಲು ಪರಿಶ್ರಮಿಸಬೇಕು. ಜನ ಜಾಗೃತಿ ವೇದಿಕೆ ಉತ್ತಮ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಪ್ರವೀಣ ಕುಮಾರ್ ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಸ್ವಾಸ್ತ ಸಂಕಲ್ಪ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗುವ ಕುರಿತು ತಾಲುಕು ಜನ ಜಾಗೃತಿ ವೇದಿಕೆ ಸದಸ್ಯರು ಮತ್ತು ಎಸ್ ಕೆ ಡಿ ಆರ ಡಿ ಪಿ ತಾಲೂಕು ಯೋಜನಾಧಿಕಾರಿಗಳು ಕುಳಿತುಕೊಂಡು ಪೂರ್ವಭಾವಿ ಸಭೆಗಳನ್ನು ಆಯೋಜಿಸಿ,
ಕಾರ್ಯಕ್ರಮಗಳು ಜನರ ಹೃದಯಗಳಿಗೆ ಮುಟ್ಟುವ ಹಾಗೆ ಯೋಜನೆ ರೂಪಿಸಬೇಕು ಎಂದರು.
ಇದೆ ವೇಳೆ ಎಲ್ಲ ತಾಲೂಕುಗಳ ಯೋಜನಾಧಿಕಾರಿಗಳು ಜನಜಾಗೃತಿ ವೇದಿಕೆ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು.
ನಂತರ ಸಭೆಯಲ್ಲಿ ಇದೇ ಜನವರಿ ೧೦ರಂದು ಧರ್ಮಸ್ಥಳದಲ್ಲಿ ಜರುಗುವ ಸಮಾವೇಶ, ವೇದಿಕೆಗೆ ಹೆಚ್ಚುವರಿ ಸದಸ್ಯರ ಸೇರ್ಪಡೆ ಬಗ್ಗೆ ಚಿಂತನ –ಮಥನ, ವೇದಿಕೆ ಸದಸ್ಯರ ಸಲಹೆ ಸೂಚನೆಗಳ ಪರಾಮರ್ಶೆ, ಸೇರಿದಂತೆ ಇನ್ನಿತರ ಹತ್ತು ಹಲವಾರು ಜನಪರ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಜರುಗಿತು.
ಉಪಾಧ್ಯಕ್ಷ ಶೀವು ಲೋಖಂಡೆ, ಸೋಮನಾಥಪ್ಪ ಅಷ್ಟೂರೆ, ರಾಜಕುಮಾರ್ ಪಸರೆ, ಸಂತೋಷ ಪಾಟೀಲ್, ಮಲ್ಲಪ್ಪ ಗೌಡಾ, ಮಡಿವಾಳಪ್ಪ, ಬಸವರಾಜ್ ಅಷ್ಟಗಿ, ಸಂಗಮೇಶ ಜವಾದಿ, ಮಂಗಳಾ ಭಾಗವತ್, ಪ್ರತಿಭಾ ಚಾಮಾ, ಗುರುನ್ನಾಥ ರಾಜಗೀರಾ, ಸಂತೋಷ ಚಿಟಗುಪ್ಪ, ಬಸವರಾಜ್ ಬಶೆಟ್ಟಿ, ಸೇರಿದಂತೆ ಬೀದರ್ ಜಿಲ್ಲಾ ಎಸ್ ಕೆ ಡಿ ಆರ್ ಡಿಪಿ ಯೋಜನೆ ಎಲ್ಲ ತಾಲೂಕಿನ ಯೋಜನಾಧಿಕಾರಿಗಳು ಸೇರಿದಂತೆ ಇತರರಿದ್ದರು. ಧರ್ಮೇಂದ್ರ ಸ್ವಾಗತಿಸಿದರು. ಯೋಜನಾಧಿಕಾರಿ ಸಂಜಯ್ ನಾಯ್ಕ ನಿರೂಪಣೆ ಮಾಡಿದರು.