September 8, 2025

ಬೆಂಗಳೂರ:-ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ತ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಬೆಂಗಳೂರಿನಲ್ಲಿ ಮಂಗಳವಾರ ಭೇಟಿ ಮಾಡಿ ಶುಭಾಶಯ ತಿಳಿಸಿದರು.

ರಾಜ್ಯದ ಜನಪ್ರೀಯ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರ ಹಾದಿಯಲ್ಲಿ ಸಾಗುತ್ತಿರುವ ವಿಜಯೇಂದ್ರ ಅವರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಿಂದೆ ಬಿಜೆಪಿ ಉಪಾಧ್ಯಕ್ಷರಾಗಿ ಮತ್ತು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು, ರಾಜ್ಯಾಧ್ಯಕ್ಷರ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸುತ್ತಿರುವುದಕ್ಕೆ ಸಂತೋಷವಿದೆ. ಯುವಜನತೆ ಒಳಗೊಂಡು ಎಲ್ಲ ವರ್ಗದವರ ನೆಚ್ಚಿನ ನಾಯಕರಾಗಿರುವ ತಮ್ಮ ನೇತೃತ್ವದಲ್ಲಿ ಪಕ್ಷವು ಉತ್ತುಂಗಕ್ಕೆ ತಲುಪಲಿ, ದೇವರು ಆಯುಷ್ಯ, ಆರೋಗ್ಯ, ಸುಖ, ಸಮೃದ್ಧಿಯನ್ನು ನೀಡಲಿ ಎಂದು ಶುಭ ಕೋರಿದರು.

ಇದೇ ವೇಳೆ ಔರಾದ(ಬಿ) ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಬಿಜೆಪಿ ಸದಸ್ಯತ್ವ ಅಭಿಯಾನವು ಔರಾದ(ಬಿ) ಕ್ಷೇತ್ರದಲ್ಲಿ ಯಶಸ್ವಿಯಾಗಿ ನಡೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರ ನೋಂದಣಿಯಾಗಿದೆ. ಉಸ್ತುವಾರಿ ವಹಿಸಿದ ನಂತರ ಭಾಲ್ಕಿ ಮತ್ತು ಬೀದರ ಉತ್ತರ ಕ್ಷೇತ್ರದಲ್ಲಿಯೂ ಸುಧಾರಣೆ ಕಾಣಿಸಿದೆ ಎಂದು ಶಾಸಕರ ಕೆಲಸಕ್ಕೆ ರಾಜ್ಯಾಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಜಿಯವರ ಮನ್‌ ಕಿ ಬಾತ್‌ ಕಾರ್ಯಕ್ರಮದ ವೀಕ್ಷಣೆಯೂ ಔರಾದ ಕ್ಷೇತ್ರ ಮುಂಚೂಣಿಯಲ್ಲಿದೆ. ಪಕ್ಷ ಎಲ್ಲ ಕಾರ್ಯಚಟುವಟಿಕೆಗಳು ಅಚ್ಚುಕಟ್ಟಾಗಿ ನಡೆಸಲಾಗುತಿದೆ. ಕೆಲಸಗಳು ಹೀಗೆಯೇ ಮುಂದುವರೆಯಲಿ ಎಂದು ತಿಳಿಸಿದರು.

ಬಳಿಕ ಶಾಸಕರು ಮಾತನಾಡಿ, ವಿಜಯೇಂದ್ರ ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಪಕ್ಷ ಬಲವರ್ದನೆ ಕಂಡಿದೆ. ಬಿಜೆಪಿ ಯುವ ಕಾರ್ಯಕರ್ತರ ದೊಡ್ಡ ಪಡೆಯನ್ನು ಹೊಂದಿರುವ ಅಪರೂಪದ ಪಕ್ಷ. ಇವರು ರಾಜ್ಯಾಧ್ಯಕ್ಷರಾದ ನಂತರ ಯುವಕರ ಉತ್ಸಾಹ ಇಮ್ಮಡಿಗೊಂಡಿದೆ. ಅಧಿಕಾರ ವಹಿಸಿಕೊಂಡ ನಂತರ ಇಡೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ ಎಂದು ರಾಜ್ಯಾಧ್ಯಕ್ಷರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಾಜ್ಯಾಧ್ಯಕ್ಷರ ಬೆಳವಣಿಗೆಯನ್ನು ಸಹಿಸದೆ ಕೆಲವೆಡೆ ಇಲ್ಲಸಲ್ಲದ ಅಪಪ್ರಚಾರಗಳು ನಡೆಸಲಾಗುತ್ತಿದೆ. ಇಡೀ ಪಕ್ಷ ತಮ್ಮೊಂದಿಗಿದೆ. ನಾನು ನಿಮ್ಮೊಂದಿಗಿದ್ದೇನೆ. ಪಕ್ಷವನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿರುವ ನೀವು ಯಾವುದೇ ಅಳುಕಿಲ್ಲದೇ ಮುನ್ನುಗ್ಗಿ. ನಿಮ್ಮ ನೇತೃತ್ವದಲ್ಲಿ ರಾಜ್ಯದಲ್ಲಿ ಪಕ್ಷ ಸಾಕಷ್ಟು ಶಕ್ತಿಶಾಲಿಯಾಗುತ್ತಿದೆ. ಮುಂಬರುವ ಉಪಚುನಾವಣೆಯಲ್ಲೂ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771