
ಔರಾದ:-ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ೨೦೨೫-೨೬ ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಇಲಾಖೆ ಸಿದ್ಧ ಪಡಿಸಿದ ವೇಳಾಪಟ್ಟಿಯಂತೆ ಪೂರ್ಣಗೊಳಿಸಿ ಇಲಾಖೆಗೆ ಸಲ್ಲಿಸಬೇಕು ಎಂದು ತಾಲ್ಲೂಕು ಪಂಚಾಯತನ ಸಹಾಯಕ ನಿರ್ದೇಶಕರಾದ ಶಿವಕುಮಾರ ಘಾಟೆ ಹೇಳಿದರು.
ತಾಲ್ಲೂಕಿನ ಧೂಪತಮಹಾಗಾಂವ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಂಗಳವಾರ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ ಅವರ ಆದೇಶದಂತೆ ಹಮ್ಮಿಕೊಂಡು ಉದ್ಯೋಗ ಖಾತರಿ ನಡಿಗೆ ಸಬಲತೆಯೆಡಗೆ ಎಂಬ ಅಭಿಯಾನದ ಅಡಿಯಲ್ಲಿ ವಿಶೇಷ ಗ್ರಾಮಸಭೆ ನಡೆಸಲಾಯಿತು. ಕಾಮಗಾರಿ ಬೇಡಿಕೆ ಪಡೆದುಕೊಳ್ಳುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಉದ್ಯೋಗ ಖಾತರಿ ಯೋಜನೆಯಲ್ಲಿ ಗಂಡು-ಹೆಣ್ಣಿಗೆ ಸಮಾನ ಕೂಲಿ ಪ್ರತಿದಿನಕ್ಕೆ 349 ರೂ. ದೊರೆಯುತ್ತದೆ. ಗ್ರಾಮೀಣ ಪ್ರದೇಶದ ಜನರಿಗೆ 100 ದಿನಗಳ ಕೆಲಸ ಖಾತರಿ, ಯೋಜನೆಯಡಿ ದೊರೆಯುವ ವಯಕ್ತಿಕ ಸೌಲಭ್ಯ, ಅರ್ಹತೆಗಳು ಸೇರಿದಂತೆ ನರೇಗಾ ಯೋಜನೆ ಸಂಪೂರ್ಣ ಮಾಹಿತಿ ನೀಡಿದರು. ಈ ಯೋಜನೆಗಳು ಜನರಿಗಾಗಿ ಇರುವಂತಹ ಯೋಜನೆಗಳು ಇವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಿ ನರೇಗಾ ಯೋಜನೆಯಡಿ ರೈತರು ತಮ್ಮ ಮೊಬೈಲ್ ನಲ್ಲೆ ಸ್ಕ್ಯಾನ್ ಮಾಡಿ ಕಾಮಗಾರಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಕಾಮಗಾರಿಗಳಾದ ಬಚ್ಚಲುಗುಂಡಿ, ದನದ ಕೊಟ್ಟಿಗೆ, ಕೋಳಿ, ಕುರಿ ಶೆಡ್, ತೋಟಗಾರಿಕೆ, ರೇಷ್ಮೆ, ಕೃಷಿಗೆ ಸಂಬಂಧಪಟ್ಟಂತಹ ಕಾಮಗಾರಿಗಳಿಗೂ ಕೂಡ ಅರ್ಜಿ ಸಲ್ಲಿಸಬಹುದು. ಜೊತೆಗೆ ಮನರೇಗಾ ಏಕೀಕೃತ ಸಹಾಯವಾಣಿ 827750600 ಬಗ್ಗೆ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಅನಿತಾ ರಾಠೋಡ, ಅಧ್ಯಕ್ಷರಾದ ಲಕ್ಷ್ಮಿಬಾಯಿ ವಗ್ಗೆ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಹಣಮಂತ ಮೇತ್ರೆ, ಸದಸ್ಯರಾದ ಬಸವರಾಜ ಮಡಿವಾಳ, ಟಿಸಿ ಆನಂದ, ಗ್ರಾಮದ ಮುಖ್ಯಸ್ಥರಾದ ವಿನೋದ ಪವಾರ, ಗುಂಡಪ್ಪ ಪಾಟೀಲ, ಕಲ್ಲಪ್ಪಾ ವಗ್ಗೆ, ಕಾರ್ಯದರ್ಶಿ ಚಂದ್ರಕಾಂತ ಸ್ವಾಮಿ, ಬಿಲ್ ಕಲೆಕ್ಟರ್ ಮಹೇಶ ಪವಾರ ಗ್ರಾ.ಪಂ.ನ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.