
ಬೀದರ್: ಬೆಳಗು ಸಾಂಸ್ಕೃತಿಕ ಹಾಗೂ ಸಾಮಾಜಿಕ ಟ್ರಸ್ಟ್ ವತಿಯಿಂದ ಭಾನುವಾರ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಆಯೋಜಿಸಿದ್ದ ಬೆಳಗು ಸಂಗೀತ ಸಂಜೆ-೨೦೨೪ ಕಾರ್ಯಕ್ರಮ ಸಂಗೀತಾಸಕ್ತರ ಮನ ತಣಿಸುವಲ್ಲಿ ಯಶಸ್ವಿಯಾಯಿತು. ಸತತ ಮೂರು ಗಂಟೆ ಕಲಾವಿದರು ಹರಿಸಿದ ಗಾನಲಹರಿಗೆ ರಂಗಮAದಿರದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಫುಲ್ ಫಿದಾ ಆಗಿ ತಲೆದೂಗಿದರು.
ಕಲಾವಿದರಾದ ವೀರ ಸಮರ್ಥ, ಗುರುದೇವ, ಮಹೇಶ್ವರಿ ಪಾಂಚಾಳ, ಆಬೀದ್ ಅಲಿ ಖಾನ್, ಅರುಣ ಕಾರ್ನಾಡ್, ಪ್ರಿಯಂಕಾ ಗುರುದೇವ, ನಾಗಶೆಟ್ಟಿ ಲಕೋಟಿ, ಡಾ.ವಿ.ವಿ.ನಾಗರಾಜ್, ಮಲ್ಲಿಕಾರ್ಜುನ ಶೀಲವಂತ, ರವಿ ಮೂಲಗೆ, ಅನೀಲ ಮಜಗೆ ಅವರು ಹಾಡಿದ ಮಸ್ತ್ ಹಾಡುಗಳು ಸಭಿಕರಿಗೆ ರಂಜಿಸಿದವು. ಸೊಲ್ಲಾಪುರದ ಜಬ್ಬಾರ್, ಧನಂಜಯ್ ನೇತೃತ್ವದ ನೇರ ವಾದ್ಯಮೇಳ ಝೇಂಕಾರ(ಲೈವ್ ಕನ್ಸರ್ಟ್) ಸಂಗೀತ ಸಂಜೆಗೆ ಮತ್ತಷ್ಟು ರಂಗೇರಿಸಿತು. ಚಪ್ಪಾಳೆ ತಟ್ಟುವ ಮೂಲಕ ಕೇಳುಗರು ಗಾಯಕರಿಗೆ ಪ್ರೋತ್ಸಾಹಿಸಿದರು.
ಕಿಶೋರ್‌ಕುಮಾರ್, ಮಹ್ಮದ್ ರಫಿ, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮುಕೇಶ್, ಮನ್ನಾಡೆ, ಡಾ.ರಾಜಕುಮಾರ, ಲತಾ ಮಂಗೇಶ್ಕರ್ ಮುಂತಾದವರ ಎವರ್‌ಗ್ರೀನ್ ಹಾಡುಗಳನ್ನು ಸ್ಥಳೀಯ ಕಲಾವಿದರು ಸುಮಧುರವಾಗಿ ಹಾಡಿದರು. ಹಾಡುಗಳಿಗೆ ಜಬರ್‌ದಸ್ತ್ ವಾದ್ಯ ಮೇಳದ ಝೇಂಕಾರ ಪ್ರೇಕ್ಷಕರಿಗೆ ಜೋಶ್ ತುಂಬಿ ಚಪ್ಪಾಳೆ, ಶಿಳ್ಳೆ ಹೊಡೆಸುವಂತೆ ಮಾಡಿತು. ಕೆಲವರು ಎದ್ದು ಸ್ಟೆಪ್ ಹಾಕಿ ಸಂಭ್ರಮಿಸಿರುವುದು ವಿಶೇಷವಾಗಿತ್ತು.
ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ, ಸಂಗೀತ ಪ್ರೇಮಿ ಆನಂದರಾಜ ಮಾಣಿಕಪ್ರಭು ಉದ್ಘಾಟಿಸಿದರು. ಹಿರಿಯ ಉದ್ಯಮಿ ಗುರುನಾಥ ಕೊಳ್ಳುರ್ ಅಧ್ಯಕ್ಷತೆ ವಹಿಸಿದ್ದರು. ತಾದಲಾಪುರ ದತ್ತಾನಂದ ಸಂಸ್ಥಾನದ ಪೀಠಾಧಿಪತಿಗಳಾದ ಖ್ಯಾತ ಶಾಸ್ತಿçÃಯ ಸಂಗೀತ ಕಲಾವಿದ ಶ್ರೀ ವೈಕುಂಠದತ್ತ ಮಹಾರಾಜರಿಗೆ ವಿಶೇಷ ಸನ್ಮಾನ ನೀಡಿ ಅಭಿನಂದಿಸಲಾಯಿತು.
ಬೆಳಗು ಟ್ರೆಸ್ಟ್ ಅಧ್ಯಕ್ಷ ಅನೀಲಕುಮಾರ ದೇಶಮುಖ ಪ್ರಾಸ್ತಾವಿಕ ಮಾತನಾಡಿ, ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡಲು ಹಾಗೂ ಗಡಿ ಭಾಗದಲ್ಲಿ ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳು ನಡೆಸುವ ಉದ್ದೇಶದಿಂದ ೨೦೧೭ರಲ್ಲಿ ಸಮಾನ ಮನಸ್ಕ ಸಂಗೀತ ಪ್ರೇಮಿಗಳಿಂದ ಬೆಳಗು ಟ್ರಸ್ಟ್ ಸ್ಥಾಪಿಸಲಾಗಿದೆ. ಈವರೆಗೆ ೧೨ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಲಾಗಿದೆ. ಇನ್ಮುಂದೆ ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ ಬೆಳಗು ಸಂಗೀತ ಸಂಜೆ ವಾರ್ಷಿಕ ಕಾರ್ಯಕ್ರಮ ಮತ್ತು ಎರಡ್ಮೂರು ಇತರೆ ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸಲು ನಿರ್ಧರಿಸಲಾಗಿದೆ ಎಂದರು.
ಟ್ರಸ್ಟ್ ಖಜಾಂಚಿ ಡಾ. ಧೂಳಪ್ಪ ಪಾಟೀಲ್ ಸ್ವಾಗತಿಸಿದರೆ, ಉಪಾಧ್ಯಕ್ಷೆ ಮಂಜುಳಾ ಮೂಲಗೆ, ಮಹ್ಮದ್ ಗೌಸ್ ನಿರೂಪಣೆ ಮಾಡಿದರು. ಟ್ರಸ್ಟಿಗಳಾದ ಸದಾನಂದ ಜೋಶಿ, ಹಾವಶೆಟ್ಟಿ ಪಾಟೀಲ್ ಇತರರಿದ್ದರು. ಸಂಗೀತ ಸಂಜೆ ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು. ಇಡೀ ರಂಗಮAದಿರ ಕಿಕ್ಕಿರಿದು ತುಂಬಿತ್ತು. ಎಲ್ಲರಿಗೂ ಅವರವರ ಜಾಗದಲ್ಲೇ ಪ್ರೋಟಿನ್‌ಯುಕ್ತ ಮೊಳಕೆ ಕಾಳು, ಬಾಳೆಹಣ್ಣು, ಶುದ್ಧ ನೀರಿನ ಬಾಟಲ್‌ವುಳ್ಳ ಕಿಟ್ ನೀಡಲಾಯಿತು.
-:ರಾಗದಿಂದ ರೋಗಗಳ ನಿವಾರಣೆ:-
ಸಂಗೀತದಲ್ಲಿ ಅತ್ಯದ್ಭುತ ಶಕ್ತಿಯಿದೆ. ಇಂದಿನ ಯಾಂತ್ರಿಕ ಜೀವನದಲ್ಲಿ ಮನುಷ್ಯ ಶಾಂತಿ, ಸಮಾಧಾನ, ನೆಮ್ಮದಿ ಪಡೆಯಲು ಸಂಗೀತವೊAದೇ ದಿವ್ಯ ಔಷಧಿಯಾಗಿದೆ ಎಂದು ಸಂಗೀತ ಸಂಜೆ ಉದ್ಘಾಟಿಸಿದ ಮಾಣಿಕನಗರದ ಮಾಣಿಕಪ್ರಭು ಸಂಸ್ಥಾನದ ಕಾರ್ಯದರ್ಶಿ ಆನಂದರಾಜ ಮಾಣಿಕಪ್ರಭು ಹೇಳಿದರು. ಒತ್ತಡದ ಬದುಕು ನಮಗಿಂದ ಅನೇಕ ರೋಗಗಳನ್ನು ತರುತ್ತಿದೆ. ಒತ್ತಡ ನಿವಾರಿಸುವ ಶಕ್ತಿ ಸಂಗೀತಕ್ಕಿದೆ. ನಿತ್ಯ ಅರ್ಧ ತಾಸು ಸಂಗೀತಕ್ಕೆ ಸಮಯ ಕೊಟ್ಟವರ ಅನೇಕ ರೋಗಗಳಿಂದ ಬಚಾವ್ ಆಗಬಹುದು. ರಾಗದಿಂದ ರೋಗಗಳ ನಿವಾರಣೆ ಸಾಧ್ಯ ಎಂದು ಪ್ರತಿಪಾದಿಸಿದರು. ಎಲ್ಲರಿಗೂ ಬೇಗ ಸೆಳೆಯುವ ತಾಕತ್ತು ಸಂಗೀತಕ್ಕಿದೆ. ಸಂಗೀತದಲ್ಲಿ ಆಸಕ್ತಿ ಇಲ್ಲದ ವ್ಯಕ್ತಿ ಪಶುವಿಗೆ ಸಮಾನ ಎಂದು ನಮ್ಮ ಪರಂಪರೆ ಹೇಳುತ್ತದೆ. ಹಲವು ಸಂಗೀತ ಪ್ರೇಮಿಗಳು ಸೇರಿಕೊಂಡು ಬೆಳಗು ಟ್ರಸ್ಟ್ ಕಟ್ಟಿಕೊಂಡು ಸಂಗೀತಕ್ಕೆ ಉತ್ತೇಜನ ನೀಡುವ ಜೊತೆಗೆ ಸ್ಥಳೀಯ ಕಲಾವಿದರಿಗೆ ವೇದಿಕೆ ಒದಗಿಸಿಕೊಡುತ್ತ, ಸಂಗೀತಾಸ್ತಕರಿಗೆ ಸಂಗೀತ ಸಂಜೆ ಮೂಲಕ ಸಂಗೀತದ ರಸದೌತಣ ನೀಡುತ್ತಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮ ನಿರಂತರ ನಡೆಯಲಿ. ಇದಕ್ಕೆ ಎಲ್ಲ ಸಹಾಯ, ಸಹಕಾರ ನೀಡಲಾಗುತ್ತದೆ ಎಂದರು.
ಸಂಗೀತದಲ್ಲಿ ನಾನಾ ಪ್ರಕಾರಗಳಿವೆ. ಆದರೆ ಎಲ್ಲದÀರ ಮೂಲತತ್ವವೇ ಕೇಳುಗರಿಗೆ ನೆಮ್ಮದಿ ನೀಡುವುದಾಗಿದೆ. ಸಪ್ತಸ್ವರಗಳಲ್ಲೇ ಪ್ರತಿಯೊಬ್ಬರ ಸಾರ್ಥಕ ಬದುಕಿನ ಭಾವ ಅಡಗಿದೆ. ಸಂಗೀತ ಮನುಷ್ಯನ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಬೇಕು. ಇಲ್ಲಿ ಬೆಳಗು ಟ್ರಸ್ಟ್ ಮಾಡುತ್ತಿರುವ ಸಾಂಸ್ಕೃತಿಕ ಚಟುವಟಿಕೆಗಳು ಮಾದರಿಯಾಗಿವೆ.
-ವೈಕುಂಠದತ್ತ ಮಹಾರಾಜ
ಹಿರಿಯ ಶಾಸ್ತ್ರಿಯ ಸಂಗೀತಗಾರ
ಶರಣರು, ಸಂತರು ನಡೆದಾಡಿದ ಪುಣ್ಯಭೂಮಿ ಬೀದರ್. ಶ್ರೇಷ್ಠ ಸಾಂಸ್ಕೃತಿಯ ಪರಂಪರೆಯ ವಾರಸುದಾರರು ನಾವಿದ್ದೇವೆ. ಈ ನೆಲದಲ್ಲಿ ಹುಟ್ಟಿದ್ದೇ ನಮ್ಮೆಲ್ಲರ ಸೌಭಾಗ್ಯ. ಸಂಗೀತದಲ್ಲಿ ಜಾದೂ ಇದೆ. ಸಂಗೀತದಲ್ಲಿ ತಲ್ಲೀನರಾದವರ ಮನಸ್ಸು, ರಕ್ತದ ಕಣ-ಕಣವೂ ಉತ್ತೇಜಿತವಾಗಿ ಪ್ರಫುಲ್ಲಗೊಳಿಸುತ್ತದೆ. ಜಿಲ್ಲೆಯಲ್ಲಿ ಸಂಗೀತ ಚಟುವಟಿಕೆ ಇನ್ನೂ ಹೆಚ್ಚಾಗಿ ನಡೆಯಲಿ.
-ಗುರುನಾಥ ಕೊಳ್ಳುರ್
ಹಿರಿಯ ಉದ್ಯಮಿ