
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಕಮಲನಗರ :-ತಾಲೂಕಿನ ದಾಬಕಾ ಗ್ರಾಮ ಪಂಚಾಯಿತಿಯಲ್ಲಿ ದಸರಾ ಹಬ್ಬದ ನಿಮಿತ್ಯ ಸಂಜೀವಿನಿ ಮಾಸಿಕ ಸಂತೆಮೇಳ ಮಾಡಲಾಯಿತು.
ಝಾನ್ಸರಾಣಿಲಕ್ಷ್ಮಿಬಾಯಿ ಸಂಜೀವಿನಿ ಮಹಿಳಾ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಅಧ್ಯಕ್ಷರು ಚಂದ್ರಕಲಾ ರವರು ಲಕ್ಷ್ಮಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿದರು
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಕು.ಕವಿತಾ ಬಿರಾದಾರವರು ಕಾರ್ಯಕ್ರಮನುದ್ದೆಶಿಸಿ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸಂಜೀವಿನಿ ಮಾಸಿಕ ಸಂತೆಮೇಳವನ್ನು ವಿಶೇಷವಾಗಿ ಸ್ವ ಸಹಾಯ ಸಂಘದ ಮಹಿಳೆಯರು ಮನೆಯಲ್ಲಿ ಉತ್ಪಾದಿಸುವ ಚಟುವಟಿಕೆಗಳನ್ನು ಮಾರಾಟ ಮಾಡಲು ಸಂತೆ ಮೇಳವನ್ನು ಬಹಳಷ್ಟು ಉಪಯುಕ್ತವಾಗಿದೆ ಇನ್ನೂ ಹೆಚ್ಚಿನ ಉತ್ಪಾದನೆಗೊಸ್ಕರ ತಮ್ಮೆಲ್ಲರಿಗೂ ತರಬೇತಿ ನೀಡಲಾಗುವುದು ಹಾಗೂ ಮತ್ತು ಒಕ್ಕೂಟದಲ್ಲಿ ಸಮುದಾಯ ಬಂಡವಾಳ ನಿಧಿ ತೆಗೆದು ಕೊಂಡು ಉತ್ಪಾದನೆ ಮಾಡಿ ಆರ್ಥಿಕ ಅಭಿವೃದ್ಧಿ ಹೊಂದಲು ತಿಳಿಸಿದರು.
ಸೋನಾಳ ಗ್ರಾಮ ಪಂಚಾಯಿತಿಯಲ್ಲಿ ಲಕ್ಷ್ಮಿ ರವರು ಸಮುದಾಯದ ಬಂಡವಾಳ ನಿಧಿ ತೆಗೆದು ಕೊಂಡು ಶೇಂಗಾ ಬೆಲ್ಲದ ಚಿಕ್ಕಿ ತಯಾರು ಮಾಡಿ ಶಾಲೆಗಳಿಗೆ ಪೂರೈಸಿ ತಿಂಗಳಿಗೆ 6000 ರಿಂದ 7000 ಸಾವಿರದವರೆಗೆ ಆದಾಯ ಮಾಡಿ ಕೊಳ್ಳುತ್ತಿದ್ದೆ ನೆಂದು ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಆನಂದಿಸಿದರು
ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗಪ್ಪ ಕಂಬಾರಿ ಕಾರ್ಯಕ್ರಮ ನಿರೂಪಿಸಿದರು ಸಂಗೀತಾ MBK ರವರು ಸ್ವಾಗತಿಸಿದರು.ಸದರಿ ಕಾರ್ಯಕ್ರಮದಲ್ಲಿ ಸಂತೋಷ ಚಾಮುಂಡೇಶ್ವರೆ, ನೀತಿ ಆಯೋಗದ ತಾಲೂಕು ಸಂಯೋಜಕರಾದ ಅಮರ ಕೊಟೆ, ಪಂಚಾಯತ್ ರಾಜ್ ರಾಜುಗಾಂಧಿ ಸಂಯೋಜಕರಾದ ಸಂಪತ ಗ್ರಾಮ ಪಂಚಾಯತ ಸದಸ್ಯರು, ಒಕ್ಕೂಟ ಪದಾಧಿಕಾರಿಗಳು ಸಿಬ್ಬಂದಿಗಳಾದ ಶೀಲಾದೇವಿ, ಭಾಗ್ಯಶ್ರೀ,ಶಕುಂತಲಾ,ಯಶೋಧಾ ಮತ್ತು MBK LCRP ಕೃಷಿ ಸಖಿ ಪಶು ಸಖಿ ಸ್ವ ಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು ಸದರಿ ಸಂತೆ ಮೇಳದಲ್ಲಿ 24 ಜನ ಉತ್ಪಾದನೆ ಚಟುವಟಿಕೆಗಳು ತೆಗೆದು ಕೊಂಡು ಭಾಗವಹಿಸಿದರು