
ಔರಾದ:-ಆಡು ಮುಟ್ಟದ ಸೋಪ್ಪಿಲ್ಲ ಧರ್ಮಸ್ಥಳ ಯೋಜನೆ ಮಾಡದ ಕಾರ್ಯಗಳಿಲ್ಲ ಅನ್ನುವ ಹಾಗೆ ೨೦೧೬ರಿಂದ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆ ವತಿಯಿಂದ ಅನೇಕ ಸಮಾಜೋದ್ದಾರಕ ಚಟುವಟಿಕೆಗಳು ನಿರಂತರವಾಗಿ ಜನರ ಕಲ್ಯಾಣಕ್ಕಾಗಿ ಜರುಗುತ್ತಿರುವುದು ಉತ್ತಮ ಸಂಗತಿಯಾಗಿದೆ ಎಂದು ಮುಖಂಡ ರಾಮಶೆಟ್ಟಿ ಪನ್ನಾಳೆ ನುಡಿದರು.
ತಾಲೂಕಿನ ಸಂತಪುರ ಭಾರತ್ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಎಸ್ ಕೆ ಡಿ ಆರ್ ಡಿ ಪಿ ವತಿಯಿಂದ ಏರ್ಪಡಿಸಿದ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮಕ್ಕೆ ಜ್ಯೋತಿ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಮಾತನಾಡಿದ ಅವರು,
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಸೌಲಭ್ಯಗಳನ್ನು ಗ್ರಾಮೀಣ ಭಾಗದ ಮಹಿಳೆಯರ ಮನೆಗೆ ತಲುಪಿಸಿ ಅವರ ಸರ್ವಾಂಗೀಣ ಶ್ರಯಸ್ಸಿಗೆ ಶ್ರಮಿಸಿ, ಮಹಿಳೆಯರು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ. ಅಡುಗೆ ಮನೆಗೆ ಸೀಮೀತವಾದ ಮಹಿಳೆಯರನ್ನು ಜಾಗೃತಿಗೊಳಿಸಿ, ಸಮಾಜದಲ್ಲಿ ಮಹಿಳೆಯರ ಪಾತ್ರ ಎಷ್ಟು ಮುಖ್ಯವಾಗಿದೆ ಎಂದು ತೋರಿಸಿಕೊಟ್ಟಿರುವ ಕೀರ್ತಿ ಧರ್ಮಸ್ಥಳ ಯೋಜನೆ ಸಲ್ಲುತ್ತದೆ.
ಯೋಜನೆಯಿಂದ ತಾಲೂಕಿನಲ್ಲಿ ಕೆರೆ ನಿರ್ಮಾಣ, ದೇವಾಲಯಗಳ ಪುನರುಜ್ಜೀವನ, ಅತಿಥಿ ಶಿಕ್ಷಕರು ನೀಡುವುದು, ಶಿಷ್ಯವೇತನ, ಕ್ಷೀರಕ್ರಾಂತಿ, ವಾತ್ಸಲ್ಯ ಮನೆ ನಿರ್ಮಾಣ, ನಿರ್ಗತಿಕರಿಗೆ ಮಾಸಾಶನ ಸೇರಿದಂತೆ ಹತ್ತು ಹಲವಾರು ಯೋಜನೆಗಳಿಂದ ಜನರ ಮನಗೆಲ್ಲುವ ಕಾರ್ಯ ಈ ಯೋಜನೆ ಮಾಡುತ್ತಿದೆ. ಎಲ್ಲರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣಕುಮಾರ್ ಮಾತನಾಡಿ, ಒಕ್ಕೂಟ ಪದಾಧಿಕಾರಿಗಳಿಗೆ ಯಾವುದೇ ತೊಂದರೆಗಳಿದ್ದರೇ ನೇರವಾಗಿ ಸಂಬ್ಬಂಧಪಟ್ಟ ಯೋಜನೆಯ ಅಧಿಕಾರಿಗಳನ್ನು ತಿಳಿಸಿ, ಯಾವುದಕ್ಕೂ ಹೆದರುವ ಅವಶ್ಯಕತೆಯಿಲ್ಲ. ಒಕ್ಕೂಟದವರು ಉತ್ತಮವಾಗಿ ಕೆಲಸಕಾರ್ಯಗಳು ನಿರ್ವಹಿಸಬೇಕು. ಎಲ್ಲ ಪದಾಧಿಕಾರಿಗಳ ಜವಾಬ್ದಾರಿ ಅತಿ ಮುಖ್ಯವಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಸಬಲರಾಗಿಸುವುದೇ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಬೀದರ್ ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಪ್ರೀಯಾಂಕಾ ಅವರು ಮಾತನಾಡಿ, ಯಾವುದೇ ಅಡಮಾನ, ಆಸ್ತಿ ಶ್ಯೂರೀಟಿ ಇಲ್ಲದೇ ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ಧಿ ಮತ್ತು ಗುಡಿ ಕೈಗಾರಿಕೆ, ಹೈನುಗಾರಿಕೆ ಇನ್ನಿತರ ಚಟುವಟಿಕೆಗಳ ಉತ್ತೇಜನ ಮತ್ತು ಅವರ ಸ್ವಾವಲಂಭಿ ಬದುಕಿಗಾಗಿ ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಂತು ಕುಟುಂಬದ ನಿರ್ವಹಣೆ ಮಾಡುವ ಸಲುವಾಗಿ ಸಾಲ ನೀಡುತ್ತಿದೆ. ಎಲ್ಲರು ಸಾಲದಿಂದ ಉತ್ತಮ ಕಾರ್ಯಗಳು ಮಾಡಬೇಕು. ಅದರಿಂದ ಆದಾಯ ದ್ವೀಗುಣಗೊಳಿಸಿಕೊಂಡು ಯೋಜನೆಯ ಕೀರ್ತಿ ತರಬೇಕು ಎಂದರು.
ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಡಾ. ಶಾಲಿವಾನ್ ಉದಗಿರೆ ಮಾತನಾಡಿ, ಪೂಜ್ಯ ಶ್ರೀ ವಿರೇಂದ್ರ ಹೆಗ್ಗಡೆಯವರು ಹುಟ್ಟುಹಾಕಿದ ಗ್ರಾಮ ಅಭಿವೃದ್ಧಿ ಯೋಜನೆ ನಮ್ಮ ಭಾಗದವರ ಪಾಲಿಗೆ ಬೆಳಕಾಗಿ ಬಂದು ಉತ್ತಮ ಬದುಕು ನಿರ್ಮಿಸಿಕೊಳ್ಳಲು ಸಹಕಾರಿಯಾಗಿದೆ. ಯೋಜನೆಯ ಎಲ್ಲ ಕಾರ್ಯಕ್ರಮಗಳು ಪಾರದರ್ಶಕವಾಗಿರುವ ಕಾರಣ ಎಲ್ಲರು ಈ ಯೋಜನೆಯ ಸದುಪಯೋಗಪಡೆದುಕೊಳ್ಳಬಹುದು ಎಂದರು.
ಔರಾದ್ ಸ್ಟೇಟ್ ಬ್ಯಾಂಕ್ ಇಂಡಿಯಾದ ವ್ಯವಸ್ಥಾಪಕ ಮಹಮದ್ ಅಮೀರ್ ದೀಯಾ , ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಮಲ್ಲಪ್ಪ ಗೌಡಾ ಮಾತನಾಡಿದರು.
ಎಲ್ ಇ ಡಿ ಪರದೆಯ ಮೂಲಕ ಯೋಜನೆಯ ಮಾಹಿತಿಯಿರುವ ಕಾರ್ಯಕ್ರಮ ಬಿತ್ತರಿಸಲಾಯಿತು.
೬೧ ಗ್ರಾಮಗಳ ೪೦೦ಕ್ಕೂ ಹೆಚ್ಚಿನ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮದ ಉಪಯೋಗಪಡೆದರು.
ಸಭಾಂಗಣದ ಮುಂಭಾಗದಲ್ಲಿ ಹಾಕಲಾಗಿದ ಸಿಎಸ್‌ಸಿ ಡಿಜಿಟಲ್ ಸೇವಾ ಕೇಂದ್ರಗಳ ಮಾಹಿತಿ ನೀಡುವ ಪ್ರತೇಕ್ಷಿತಾ ಪೆಂಡಾಲ್ ಎಲ್ಲರ ಗಮನ ಸೆಳೆಯಿತು.
ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಗೌಡಾ, ಸಂತಪುರ ಎಸ್ ಬಿ ಐ ವ್ಯವಸ್ಥಾಪಕ ಸುರೇಶ, ಸುನೀಲ್, ಉಮೇಶ, ವಿಲಾಸ್ ಪೂಜಾರಿ, ಮಲ್ಲಿಕಾರ್ಜುನ, ಲೋಕೇಶ, ಬೀರಪ್ಪ, ಮಹಾದೇವ, ಬಸವರಾಜ್, ನಿತೀಷ, ಸಂಗೀತಾ, ಸುಪ್ರೀಯಾ, ನಾಜ್‌ಮೀನ್, ಜ್ಯೋತಿ, ಕಾರ್ತಿಕ್, ಪವನ್, ಯೋಜನಾಧಿಕಾರಿ ರಾಘವೇಂದ್ರ ಗೌಡಾ ಸ್ವಾಗತಿಸಿದರು. ಅನೀಲ್ ದಾವಣಿ ನಿರೂಪಣೆ ಮಾಡಿದರು.