
ಬೀದರ ದಿಂದ ಔರಾದಗೆ ಪ್ರಯಾಣಿಸುತ್ತಿದ್ದ ಬಸ್ ತಾಲೂಕಿನ ಕಪಿಕೆರಿ ಗ್ರಾಮದ ಬಳಿ ಎಂಜಿನ್ ನಲ್ಲಿ ಹೋಗೆ ಕಾಣಿಸಿಕೊಂಡ ತಕ್ಷಣ ಚಾಲಕನ ಮುಂಜಾಗ್ರತೆ ಯಿಂದ 25 ಪ್ರಯಾಣಿಕರನ್ನು ತಕ್ಷಣ ಬಸ್ಸಿನಿಂದ ಕೆಳಗಡೆ ಇಳಿಸಿ ಯಾವುದೇ ಅನಾಹುತ ಆಗಿಲ್ಲ. ಘಟಕ ವ್ಯವಸ್ಥಾಪಕರು ರಾಜೇಂದ್ರ ತಿಳಿಸಿದ್ದರು.
ಈ ಬಸ್ ಔರಾದ ಡಿಪೋಗೆ ಸೇರಿದ ವಾಹನ kA38- 1033.ಸಂಖ್ಯೆ ಇರುತ್ತದೆ, ಬಸ್ಸಿನಲ್ಲಿ 25 ಪ್ರಯಾಣಿಕರು ಇದ್ದರು ಇವರಿಗೆ ಯಾವುದೇ ಅನಾಹುತ ಆಗಿಲ್ಲ.
ತಕ್ಷಣ ಸ್ಥಳಕೆ ಆಗಮಿಸಿದ ಅಗ್ನಿಶಾಮಕ ತಂಡ ಬಂದು ಅಗ್ನಿಯನ್ನು ನಂದಿಸಿದ್ದರು ಸ್ಥಳಕ್ಜೆ ಔರಾದ್ ಸಿಪಿಐ,ಹಾಗೂ ಸಂತಪುರ ಪಿಎಸ್ ಐ,ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದರು.