September 8, 2025

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}

೧೪ ನೇ ವರ್ಷದ ಜಾನಪದ ಜಾಗರಣೆ/ ಸಾಧಕರಿಗೆ ಸನ್ಮಾನ/ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗಿ
ವೀರಕೇಸರಿ ಕಲಾ ಸಾಂಸ್ಕೃತಿಕ,ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯ ಇತರರಿಗೂ ಮಾದರಿ’

ಶಹಾಪುರ; ನಮ್ಮ ನಾಡು ವೈವಿಧ್ಯಮಯವಾದ ಜನಪದ ಕಲೆಗಳಿಂದ ಶ್ರೀಮಂತವಾಗಿದ್ದು, ಇಂಥ ಕಲೆಗಳನ್ನು ನಾವು ಜೀವಂತವಾಗಿರಿಸಿ ಕಲೆಗಳಿಗೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿರುವ ವೀರಕೇಸರಿ ಕಲಾ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯ ಇತರರಿಗೂ ಮಾದರಿ ಎಂದು ನಮ್ಮ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ ಹೇಳಿದರು.
ಭೀಮರಾಯನಗುಡಿಯ ಕಮ್ಯೂನಿಟಿ ಹಾಲ್ ಆವರಣದಲ್ಲಿ ವೀರಕೇಸರಿ ಕಲಾ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ೧೪ ನೇ ವರ್ಷದ ಜಾನಪದ ಜಾಗರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಮಾಡುತ್ತಿರುವ ಪ್ರಯತ್ನಗಳು ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವೀರಕೇಸರಿ ಕಲಾ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ಶಖಾಪುರ ಮಾತನಾಡಿ ಮೀತಿ ಮೀರಿದ ಯಾಂತ್ರೀಕರಣದಿAದಾಗಿ ಪ್ರಸ್ತುತ ಜಾನಪದ ಸೊಬಗು ಕಾಣುವುದು ಅಪರೂಪವಾಗಿದೆ. ಗ್ರಾಮೀಣ ಕಲೆ ಮತ್ತು ಸೊಗಡು ಎಲ್ಲೆಡೆ ಪಸರಿಸಬೇಕಿದೆ ಆ ನಿಟ್ಟಿನಲ್ಲಿ ಪ್ರತಿ ವರ್ಷವು ಜಾನಪದ ಜಾಗರಣೆ ಕಾರ್ಯಕ್ರಮ ಮಾಡುತ್ತಾ ಗ್ರಾಮೀಣ ಭಾಗದಲ್ಲಿರುವ ಕಲೆಯಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಸಂಸ್ಥೆ ಮಾಡಿಕೊಂಡು ಬರುತ್ತಿದೆ ಎಂದರು.
ಪೂಜ್ಯ ರಾಜುಗುರು ಸ್ವಾಮಿಜಿಗಳು ಬ್ರಹ್ಮಶ್ರೀ ಪೀಠ ಹುಬ್ಬಳ್ಳಿ, ಪೂಜ್ಯ ಮಲ್ಲಿಕಾರ್ಜುನ ಮುತ್ಯಾ, ಪರಶುರಾಮ ಮುತ್ಯಾ ದಿವ್ಯ ಸಾನಿಧ್ಯ ವಹಿಸಿ ಕೊಂಡಿದ್ದರು.
ಈ ಸಂದರ್ಭದಲ್ಲಿ ಯಾದಗಿರಿ ನಗರಸಭೆ ಅಧ್ಯಕ್ಷೆ ಲಲಿತ ಅನಪೂರ, ಮೋನಪ್ಪ ಶಿರವಾಳ, ಮಹಾರಾಜ ದಿಗ್ಗಿ, ರಾಯಪ್ಪ ಸಾಲಿಮನಿ, ನಾಗರಾಜ ಜಾಕನಹಳ್ಳಿ, ಉಮೇಶಗೌಡ, ಅಮರೇಶ ಬಿಲ್ಲವ, ಶ್ರೀದೇವಿ ಕಟ್ಟಿಮನಿ, ಶಶಿಪಾಲರೆಡ್ಡಿ, ಅಂಬ್ರೇಶ ದೊರನಹಳ್ಳಿ ವಿಶ್ವನಾಥರೆಡ್ಡಿ ದೇಸಾಯಿ, ಸದ್ಧಂ ಪಟೇಲ್, ಮಹಾದೇವ ದೇಸಾಯಿ, ಈರಪ್ಪ ನಾಯಕ್ ಸೇರಿದಂತೆ ಇತರರು ವೇದಿಕೆ ಮೇಲಿದ್ದರು. ಸಿದ್ದು ಪಟ್ಟೇದಾರ ಸ್ವಾಗತಿಸಿದರು, ತಿಪ್ಪಣ್ಣ ತಳವಾರ್ ನಿರೂಪಿಸಿದರು, ಬಸವರಾಜ ಗಂಗಾನೂರ್ ವಂದಿಸಿದರು.
ಸಾಧಕರಿಗೆ ಸನ್ಮಾನ;
ಮಲ್ಲೇಶ ಬಸಪ್ಪ ಕೊನ್ನಾಳ( ಸಾಹಿತ್ಯ ಸೇವಾ ಕ್ಷೇತ್ರ), ವಿರೇಶ ಕೆಂಭಾವಿ (ಮಾಧ್ಯಮ ಕ್ಷೇತ್ರ), ಲಕ್ಷö್ಮಣ ಗುತ್ತೆದಾರ ಜಾನಪದ, (ಸಾಹಿತ್ಯ ಸೇವಾ ಕ್ಷೇತ್ರ), ಪಿಎಸ್‌ಐ ವೆಂಕಟೇಶ ನಾಯಕ (ಸರ್ಕಾರಿ ಸಾರ್ವಜನಿಕ ಕ್ಷೇತ್ರ), ನಿರ್ಮಲ ಅವಂಟಿ(ಸಾಮಾಜಿಕ ಸೇವಾ ಕ್ಷೇತ್ರ ಮಹಿಳಾ ವಿಭಾಗ), ಶಿವಪುತ್ರ ಜವಳಿ (ಸಾಮಾಜಿಕ ಸೇವಾ ಕ್ಷೇತ್ರ ಪುರುಷ ವಿಭಾಗ) , ಪ್ರಭು ಚಾಮನೂರ( ಕ್ರೀಡಾ ಸೇವಾ ಕ್ಷೇತ್ರ), ಮಲ್ಲಿಕಾರ್ಜುನ ಕಮತಗಿ(ಕಲೆ ಮತ್ತು ಸಾಹಿತ್ಯ ಸೇವಾ ಕ್ಷೇತ್ರ), ಶ್ರೀಮತಿ ವಾಣಿಶ್ರೀ, ಶ್ರೀಮತಿ ಮಲ್ಲಮ್ಮ (ಶೈಕ್ಷಣೀಕ ಸೇವಾ ಕ್ಷೇತ್ರ) ಅವರಿಗೆ ವೀರಕೇಸರಿ ಸೇವಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಕ್ಸ್;
ಜೀ ಕನ್ನಡ ಎಂಟರಟೆನಮೆAಟ ಶೋ ಬೆಂಗಳೂರು, ಕಾಮಿಡಿ ಕಿಲಾಡಿಗಳು ತಂಡ, ಸರಿಗಮಪ ಹಾಗೂ ಕಲರ್ಸ್ ಕನ್ನಡ ಶೋ, ಕನ್ನಡ ಕೋಗಿಲೆ ತಂಡ, ತಕಧಿಮಿತ ತಂಡಗಳಿAದ ರಸಮಂಜರಿ ಕಾರ್ಯಕ್ರಮ ಜರುಗಿದವು. ಸಂಗೀತ ಕಲಾವಿದರಾದ ಬಾಳು ಬೆಳಗುಂದಿ, ಶರಧಿ ಪಾಟೀಲ, ಕಶ್ಯಪ, ಶ್ರವಣಕುಮಾರ, ಕಾಸಿಂ ಅಲಿ ಅವರಿಂದ ಸಂಗೀತ ಕಾರ್ಯಕ್ರಮ ಹಾಗೂ ಅಪ್ಪಣ್ಣ, ಮಿಂಚು, ಉಮೇಶ ಕಿನ್ನಾಳ ಮುಂತಾದ ಕಲಾವಿದರಿಂದ ಕಾಮಿಡಿ, ರಸಮಂಜರಿ ಕಾರ್ಯಕ್ರಮಗಳು ನಡೆದವು.
‘ಬಾಳು’ ನೋಡಲು ಕಿಕ್ಕೀರಿದು ಸೇರಿದ ಜನ;
ಸುಮಾರು ೧೪ ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಜಾನಪದ ಜಾಗರಣೆ ಕಾರ್ಯಕ್ರಮದಲ್ಲಿ ಇದೇ ಮೊದಲ ಭಾರಿಗೆ ನೀರಿಕ್ಷೆಗೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಜನತೆ ಸೇರಿದ್ದರು. ಬಾಳು ಬೆಳಗುಂದಿ ಅವರು ವೇದಿಕೆ ಬರಲು ತಡವಾದರೂ ಸಹ ಜನ ಸಮಯವನ್ನು ಲೆಕ್ಕಿಸದೆಯೇ ಶಾಂತ ರೀತಿಯಲ್ಲೇ ಕುಳಿತಿದ್ದರು. ಬಾಳು ಬೆಳಗುಂದಿ ವೇದಿಕೆಗೆ ಬಂದ ತಕ್ಷಣ ಅಭಿಮಾನಿಗಳು ಬಾಳುನ ಮಾತಿನುದ್ದಕ್ಕೂ ಎದ್ದುನಿಂತು ಶಿಳ್ಳೆ ಚಪ್ಪಾಳೆ ಹೊಡೆದು ಕುಣಿದು ಕುಪ್ಪಳಿಸಿದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771