July 20, 2025

ಬೀದರ:- ಮಾರ್ಚ್ 21 ರಿಂದ ಜರುಗಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆ ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಸಧ್ಯದ ಶೈಕ್ಷಣಿಕ ಚಟುವಟಿಕೆಯನ್ನು ವೀಕ್ಷಿಸಲು ಬೀದರ ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ ಅವರು ಇಂದು ನಗರದ ನೌಬಾದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ ಮಕ್ಕಳ ಅಭ್ಯಾಸ ಕ್ರಮವನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಗಣಿತ ವಿಷಯ ಕುರಿತು ಸಂವಾದ ನಡೆಸಿ ಈವರೆಗೆ ಕಲಿತಾ ಗಣಿತ ಪ್ರಶ್ನೆಗಳನ್ನು ಬಿಡಿಸುವಂತೆ ಹೇಳಿದಾಗ ವಿದ್ಯಾರ್ಥಿಗಳು ಒಂದೇರಡು ಪ್ರಶ್ನೆಗಳನ್ನು ಸರಾಗವಾಗಿ ಬಿಡಿಸಿದರು. ನಂತರ ಗಣಿತ ಪಠ್ಯ ಕ್ರಮದ ಒಂದೇರಡು ಪಾಠಗಳನ್ನು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಬೋಧಿಸಿದರು. ವಿದ್ಯಾರ್ಥಿಗಳಿಗೆ ಇನ್ನು ಹೆಚ್ಚಿನ ತರಬೇತಿಯನ್ನು ಹಾಗೂ ನಿರಂತರ ಪರೀಕ್ಷೆಯನ್ನು ವಾರಕ್ಕೊಮ್ಮೆ ಕೈಗೊಳ್ಳುವಂತೆ ಬೀದರ ತಾಲ್ಲೂಕಾ ಬಿಇಓ ಡಾ.ಬಿ.ಆರ್.ದೊಡ್ಡೆ ಇವರಿಗೆ ಸೂಚಿಸಿದರು.
ಈಗಾಗಲೇ ಡಿಸೆಂಬರ ತಿಂಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಪಠ್ಯಕ್ರಮ ಪೂರ್ಣಗೊಂಡಿದ್ದು, ಉಳಿದ ಮೂರು ತಿಂಗಳಲ್ಲಿ ಪಠ್ಯಕ್ರಮ ಪುನರಾವರ್ತನೆ ಹಾಗೂ ಪಾಸಿಂಗ್ ಪ್ಯಾಕೇಜ್ ನಿಟ್ಟಿನಲ್ಲಿ ವಿಶೇಷ ತರಗತಿಗಳನ್ನು ನಿರಂತರವಾಗಿ ಬೋಧಿಸಲಾಗುತ್ತಿದೆ. ಸಧ್ಯ ಬೀದರನಲ್ಲಿ ಸುಮಾರು 8 ಸಾವಿರ ವಿದ್ಯಾರ್ಥಿಳು ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯಲಿದ್ದಾರೆ ಎಂದು ಬೀದರ ತಾಲ್ಲೂಕಾ ಬಿಇಓ ಡಾ.ಬಿ.ಆರ್.ದೊಡ್ಡೆ ಅವರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
*****

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771