
ಬೀದರ:-ನಾವು ಹಣ ಗಳಿಸಿ ಎಷ್ಟೆ ಶ್ರೀಮಂತರಾಗಬಹುದು ಆದರೆ ಬಹೀರ್ದೆಸೆಗೆ ಹೊರಗಡೆ ಹೋಗದೆ ಮನೆಯಲ್ಲಿಯೇ ಶೌಚಾಲಯ ನಿರ್ಮಾಣ ಮಾಡಿಕೊಂಡು ಜನರು ಬಳಕೆ ಮಾಡುವಂತೆ ಮಾಡಿದಲ್ಲಿ ಹೆಣ್ಣುಮಕ್ಕಳ ಘನತೆ ಹೆಚ್ಚಳ. ಮಾಡಿದಂತಾಗುತ್ತದೆ ಎಂದು ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ್ ಹೇಳಿದರು.
ಅವರು ಗುರುವಾರ ಅಳಿಯಾಬಾದನಲ್ಲಿ ಬೀದಿ ನಾಟಕ ಪ್ರದರ್ಶನದ ಮೂಲಕ ಶೌಚಾಲಯ ನಿರ್ಮಾಣ ಹಾಗೂ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಣ್ಣು ಮಕ್ಕಳ ಗೌರವ ಕಾಪಾಡಲು ಎಲ್ಲರು ತಮ್ಮ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿಕೊಂಡು ಅದರ ಬಳಕೆ ಮಾಡಬೇಕು ಎಂದರು.
ತಾಲೂಕಾ ಪಂಚಾಯತ್ ತರಬೇತಿ ವ್ಯವಸ್ಥಾಪಕ ಸುನೀಲ್ ಕಂಟೆ ಮಾತನಾಡಿ, ಬಹೀರ್ದೇಸೆ ಮುಕ್ತ ಗ್ರಾಮದ ಸಂಕಲ್ಪದೊಂದಿಗೆ ನಮ್ಮ ಶೌಚಾಲಯ ನಮ್ಮ ಗೌರವ ಅಭಿಯಾನವನ್ನು ಮಾಡಲಾಗುತ್ತಿದೆ