
{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}
ಔರಾದ: ಕಾಶಿಪೀಠದ ಜಗದ್ಗುರು ಡಾ. ಚಂದ್ರ ಶೇಖರಶಿವಾಚಾರ್ಯ ಭಗವತ್ಪಾದರು ಸ್ವಾಮಿಜಿ ಡಿ.೧೦ರಂದು ಔರಾದ ಪಟ್ಟಣಕ್ಕೆ ಆಗಮಿಸಲ್ಲಿದ್ದಾರೆಂದು ದತ್ತ ಸಾಹಿ ಶನೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಶಂಕರಲಿಂಗ ಶಿವಾಚಾರ್ಯ ಸ್ವಾಮಿಜಿ ತಿಳಿಸಿದ್ದಾರೆ.
ಅಧುನಿಕ ಯುಗದಲ್ಲಿ ಮಕ್ಕಳು ಪಾಲಕರಿಂದ ಕೆಲಸ ಸೇರಿದಂತೆ ಬೇರೆ ಕಡೆಗೆ ಪಾಲಕರಿಂದ ದೂರು ಇರುವ ಹಿನ್ನಲೆಯಲ್ಲಿ ೧,೧೧೧ ಜನ ತಂದೆ- ತಾಯಿಯರ ಪಾದಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ತಂದೆ-ತಾಯಿಗಳು ದೇವರ ಸ್ವರೂಪಿಗಳಾಗಿದ್ದು ಅಂತರನ್ನು ಧರ್ಮದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸನಾತನ ಸಂಸ್ಕೃತಿಯನ್ನು ಶ್ರೀಮಂತಗೋಳಿಸುವ ಉದೇಶದಿಂದ ಪಾದ ಪೂಜೆ ಕಾರ್ಯಕ್ರಮ ಹಮ್ಮಿಕೊಳಗಳಲಾಗಿದೆ. ಈ ಕಾರ್ಯಕ್ರಮ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಥಮ ಹಾಗೂ ಅದ್ದೂರಿ ಕಾರ್ಯಕ್ರಮ ಆಚರಣೆ ಮಾಡಲಾಗುತ್ತದೆ ಎಂದರು.
ಡಿ.೧೦ ರಂದು ಬೆಳಗ್ಗೆ ೭ ಗಂಟೆಗೆ ಶ್ರೀಗಳ ಆಗಮನವಾಗಲಿದ್ದು, ಶ್ರೀಗಳಿಗೆ ಅದ್ದೂರಿಯಾಗಿ ಸ್ವಾಗತದೊಂದಿಗೆ ಬರಮಾಡಿಕೊಂಡು ಪಟ್ಟಣದ ಅಮರೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ಅಲ್ಲಿಂದ ಮುಖ್ಯ ರಸ್ತೆಯ ಮೂಲಕ ಭವ್ಯ ಮೆರವಣಿಗೆಯ ಮೂಲಕ ಕನ್ನಡಾಂಬೆಯ ಮಾರ್ಗವಾಗಿ ದತ್ತಾತ್ರೇಯ ದೇವಸ್ಥಾನದವರೆಗೆ ಕರೆತರಲಾಗುತ್ತದೆ ಎಂದರು.
ದೇವರ ದರ್ಶನದ ನಂತರ ಶ್ರೀಗಳ ಪಾದಪೂಜೆ ನೆರವೇರಿಸಲಾಗುವುದು. ನಂತರ ತಂದೆ-ತಾಯಿಯರ ಪಾದಪೂಜೆ, ಶ್ರೀಗಳು ಅನುಗೃಹ ಆಶೀರ್ವಚನ ನೀಡಲಿದ್ದಾರೆ ಎಂದರು.
ಕಾಶಿಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಾಗವತ್ಪಾದರ ಅವರ ಮೆರವಣಿ ಗೆಯಲ್ಲಿ ತಾಲೂಕಿನ ಸಹಸ್ರಾರು ಭಕ್ತರು ಭಾಗವಹಿ ಸಬೇಕು ಎಂದರು. ಈಗಾಗಲೇ ಈ ಕಾರ್ಯಕ್ರಮದ ಬಗ್ಗೆ ಪ್ರಚಾರ ಆರಂಭಿಸಲಾಗಿದೆ. ಪ್ರಪಂಚದಲ್ಲಿ ಮೊದಲ ದೇವರೆಂದರೆ ತಂದೆ-ತಾಯಿ. ಆದ್ದರಿಂದ ವೇದದಲ್ಲಿ ಮಾತೃ ದೇವೋ ಭವ ಪಿತೃ ದೇವೋ ಭವ ಎಂದು ಹೇಳಲಾಗಿದೆ ಎಂದರು.
ಕಾಶಿ ಜಗದ್ಗುರುಗಳ ಸಾನಿಧ್ಯದಲ್ಲಿ ಇಂತಹ ಕಾರ್ಯಕ್ರಮ ಪಟ್ಟಣದಲ್ಲಿ ನಡೆಯುತ್ತಿರುವುದು ಐತಿಹಾಸಿಕವಾಗಿದೆ. ಆದ್ದರಿಂದ ಎಲ್ಲರೂ ಸೇರಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕಿದೆ ಎಂದರು. ಪ್ರತಿ ವರ್ಷದಂತೆ ೭ ದಿನದ ಹರಿನಾಮ ಸಪ್ತಾಹ ಜಾರಿ ಯಾಗಲಿದೆ. ಅಲ್ಲದೇ ನಿತ್ಯ ಭಜನೆ, ಕೀರ್ತನೆ ಸೇರಿದಂತೆ
ಜಾತ್ರಾ ಮಹೋತ್ಸವ ನಿಮಿತ್ತ ದೇಶ ಸೇವೆ, ಸಾಮಾಜಿಕ ಸೇವೆ, ಶೈಕ್ಷಣಿಕ, ಕೃಷಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ೫ ಜನರಿಗೆ ಗುರು ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮ ಅದ್ದೂರಿಯಾಗಿ ಆಚರಣೆ ಮಾಡಲು ಇಗಾಲೆ ತಾಲೂಕಿನ ಪ್ರತಿಯೊಂದು ಹಳ್ಳಿ ಹಳ್ಳಿಗೂ ಹೋಗಿ ಕಾರ್ಯಕ್ರಮದ ಪ್ರಚಾರ ಮಾಡಲಾಗುತ್ತಿದೆ ಅಂದು ನಡೆಯುವ ಕಾರ್ಯಕ್ರಮದಲ್ಲಿ ೮ರಿಂದ ೧೦ ಸಾವಿರ ಭಕ್ತರು ಸೇರುವ ಸಾಧ್ಯತೆಯಿದೆ ಭಕ್ತರು ಹೆಚ್ಚಿ ನ ಸಂಕ್ಯೆಯಲ್ಲಿ ಕಾರ್ಯಕ್ರಮಕ್ಕೆ ಬಂದು ಶ್ರೀಗಳ ವಾಣಿಯನ್ನು ಕೇಳಿ ಪುನಿತರಾಗುವಂತೆ ತಿಳಿಸಿದರು.