September 9, 2025

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{"transform":1},"is_sticker":false,"edited_since_last_sticker_save":true,"containsFTESticker":false}

ಔರಾದ:-ರಾಜ್ಯದ ಹಲವೆಡೆ ರೈತರಿಗೆ ವಕ್ಸ್ ಮಂಡಳಿ ಯಿಂದ ರೈತರಿ ಹಾಗೂ ಗ್ರಾಮದವರಿಗೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಸಚಿವರು ಹಾಲಿ ಶಾಸಕರು ಪ್ರಭು ಚವ್ಹಾಣ ಇವರ ನೇತೃತ್ವದಲ್ಲಿ
ಕಾರ್ಯಕರ್ತರು, ರೈತರು ಸೇರಿದಂತೆ ಸಾವಿರಾರು ಜನರೊಂದಿಗೆ ಪಟ್ಟಣದ ಎಪಿಎಂಸಿ ಬಳಿ ಆರಂಭವಾದ ಮೆರವಣಿಗೆ ಕನ್ನಡಾಂಬೆ ವೃತ್ತ, ಬಸವೇಶ್ವರ ವೃತ್ತ ಸೇರಿದಂತೆ ಪ್ರಮುಖ ರಸ್ತೆಗಳ ಮುಲಕ ತಾಲ್ಲೂಕು ಆಡಳಿತ ಸೌಧದ ವರೆಗೆ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಶಾಸಕರಾದ ಪ್ರಭು ಚವ್ಹಾಣ ಅವರು ಮಾತನಾಡಿ, ರೈತರಲ್ಲಿ ಆತಂಕ ಸೃಷ್ಟಿಸಿರುವ ವಕ್ಫ್ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ಷಮೆ ಯಾಚಿಸಬೇಕು ಮತ್ತು ಸ್ಪಷ್ಟನೆ ಕೊಡಬೇಕು. ಇನ್ನು ಮುಂದೆ ಯಾವುದೇ ವಕ್ಫ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಇದಕ್ಕೆ ಸಂಬAಧಿಸಿದ ಗೇಜಟ್ ನೋಟಿಫಿಕೆಶನ್ ಹಿಂಪಡೆಯಬೇಕು. ಕೇಂದ್ರ ಸರ್ಕಾರ ತರುತ್ತಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕೆಂದು ಒತ್ತಾಯಿಸಿದರು.
ಶಾಂತಿ, ಸಾಮರಸ್ಯದ ನಾಡಾದ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಶಾಂತಿ ಸೃಷ್ಟಿಸಿದೆ. ರೈತರು ಮತ್ತು ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಯಾವಾಗ ಯಾರ ಜಮೀನು ಹೋಗುತ್ತದೋ ಎನ್ನುವ ಭಯ ರೈತರನ್ನು ಕಾಡುತ್ತಿದೆ. ಧಾರ್ಮಿಕ ಕೇಂದ್ರಗಳು ಮತ್ತು ಪ್ರವಾಸಿ ತಾಣಗಳು, ಆಸ್ಪತ್ರೆಗಳನ್ನು ಬಿಡದೇ ಎಲ್ಲ ಆಸ್ತಿಗಳನ್ನು ವಕ್ಫ್ ಹೆಸರಿಗೆ ಮಾಡಲಾಗುತ್ತಿದೆ. ಸರ್ಕಾರ ಯಾವಾಗ ಬೇಕಾದರೂ ಯಾರ ಜಮೀನನ್ನು ವಕ್ಫ್ ಹೆಸರಿಗೆ ಮಾಡಬಹುದು. ಹಾಗಾಗಿ ರೈತರು ಕೂಡ ಎಚ್ಚರಿಕೆ ವಹಿಸಬೇಕು. ತಮ್ಮ ಪಹಣಿಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಂದರಲ್ಲೇ ರೈತರ 1,500 ಎಕರೆ ಜಮೀನು ವಕ್ಫ್ ಆಸ್ತಿಯೆಂದು ಘೋಷಿಸಲಾಗಿದೆ. ಬೀದರ ಜಿಲ್ಲೆಯಲ್ಲಿಯೂ ಸಾವಿರಾರು ಎಕರೆ ಜಮೀನು ವಕ್ಫ್ ಬೋರ್ಡ್ ಹೆಸರಿಗೆ ಸೇರಿಸಲಾಗಿದೆ. ಔರಾದ ತಾಲ್ಲೂಕಿನ ಎಕಂಬಾ ಹೋಬಳಿಯಲ್ಲಿರುವ ಜಮಾಲಪೂರ ಗ್ರಾಮದಲ್ಲಿ ಮುಸ್ಲಿಮ್ ಮನೆಗಳೇ ಇಲ್ಲ. ಆದರೂ ಅಲ್ಲಿನ ಸರ್ವೇ ನಂ.23ರಲ್ಲಿ ಸುಮಾರು 4 ಎಕರೆ ಭೂಮಿಯನ್ನು ವಕ್ಫ್ ಆಸ್ತಿಯೆಂದು ತಿದ್ದುಪಡಿ ಮಾಡಲಾಗಿದೆ. ಇಂತಹ ಅಕ್ರಮ ಮತ್ತು ಅನ್ಯಾಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದರು.

ವಕ್ಷ ಬೋರ್ಡ್ ಬೋರ್ಡ್ ರೈತರ ಭೂಮಿ ಸ್ವಾಧೀನಪಡಿಸಿ ಕೊಳ್ಳಲು ಹುನ್ನಾರ ನಡೆಸಿದೆ. ರಾಜ್ಯ
ಸರ್ಕಾರ ವಕ್ಸ್ ಬೋರ್ಡ್ ಪರವಾಗಿ ಮೃದು ಧೋರಣೆ ಅನುಸರಿಸುತ್ತಿದೆ. ವಕ್ಸ್ ಹೆಸರಿನಲ್ಲಿ ತುಷ್ಟಿಕರಣ ನೀತಿ ಅನುಸರಿಸುತ್ತಿದೆ ,ಕೂಡಲೇ ರೈತರಿಗೆ ನೀಡಿರುವ ನೋಟೀಸ್ ವಾಪಸ್ ಪಡೆದು ರೈತರ ಜಮಿನಿನ ಪಾನಿಯಲ್ಲಿ ವಕ್ಷ ಬೋರ್ಡ್ ಬೋರ್ಡ್ ಹೇಸರು ತೆಗುದು ಹಾಕಬೇಕು,ರೈತರ
ಹಿತ ಕಾಪಾ ಡಬೇಕು ಎಂದು ಪ್ರಭು ಚವ್ಹಾಣ ಆರೋಪಿಸಿದರು.

1.ಜಮೀರ್ ಅಹಮ್ಮದ್ ಅವರ ನ್ನು ಸಚಿವ ಸ್ಥಾನದಿ೦ದ ಕೂಡಲೇ ಉಚ್ಚಾಟಿಸಬೇಕು.

2.ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಹಾಗೂ ಸ್ಪಷ್ಟನೆ ನೀಡಬೇಕು.

3.ಇನ್ನು ಮುಂದೆ ಯಾವುದೇ ವಕ್ಸ್ ಅದಾಲತ್ ನಡೆಸದಂತೆ ಸರ್ಕಾರಿ ಆದೇಶವನ್ನು ಹೊರಡಿಸಬೇಕು ಹಾಗೂ ಇದಕ್ಕೆ ಸಂಬಂಧಿಸಿದ ಗೆಜಟ್ ನೋಟಿಫಿಕೆಶನ್ ಅನ್ನು ಹಿಂಪಡೆಯಬೇಕು.

4.ಕೇಂದ್ರ ಸರ್ಕಾರವು ತರುತ್ತಿರುವ ವಕ್ಸ್ ತಿದ್ದುಪಡಿ ಕಾಯ್ದೆಗೆ ರಾಜ್ಯ ಸರ್ಕಾರವು ಮುಂದಿನ ಅಧಿವೇಶನದಲ್ಲಿ ಒಮ್ಮತದಿಂದ ನಿರ್ಣಯವನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು. ಎಂಬ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ, ಮುಖಂಡರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ಝಾಕೀರ್ ಶೇಖ್, ಶಿವಾಜಿರಾವ ಪಾಟೀಲ ಮುಂಗನಾಳ, ರಮೇಶ ಉಪಾಸೆ, ರಂಗರಾವ ಜಾಧವ, ಬಸವರಾಜ ಪಾಟೀಲ ಕಮಲನಗರ, ಸಚಿನ ರಾಠೋಡ್, ಪ್ರದೀಪ ಪವಾರ್, ವೈಜಿನಾಥ ಗುಡ್ಡಾ, ಈರಾರೆಡ್ಡಿ, ಗೋವಿಂದರೆಡ್ಡಿ ಕಸಬೆ, ಸಂತೋಷ ಪೋಕಲವಾರ, ದಯಾನಂದ ಘುಳೆ, ಕೇರಬಾ ಪವಾರ, ಸಂಜು ವಡೆಯಾರ್, ಅಶೋಕ ಅಲ್ಮಾಜೆ, ಗೀತಾ ಗೌಡಾ, ಶಿವಕುಮಾರ ಪಾಂಚಾಳ, ಗಣೇಶ ಕಾರೆಗಾವೆ, ವಿಜಯಕುಮಾರ ದೇಶಮುಖ, ದೇವಾನಂದ ಪಾಟೀಲ, ಅಶೋಕ ಮೇತ್ರೆ, ಶ್ರೀಮಂತ ಪಾಟೀಲ, ನಾಗಶೆಟ್ಟಿ ಗಾದಗೆ, ಮಾದಪ್ಪ ಮಿಠಾರೆ, ರಾಜೇಂದ್ರ ಮಾಳೆ, ರಾಜೇಂದ್ರ ಶಿಂಧೆ, ಯೋಗೇಶ ಪಾಟೀಲ, ಧನಾಜಿ ಜಾಧವ, ಬಂಟಿ ರಾಂಪೂರೆ, ಶ್ರೀನಿವಾಸ ಖೂಬಾ, ಯಾದು ಮೇತ್ರೆ, ಸಚಿನ ಬಿರಾದಾರ, ರಾಜಕುಮಾರ ಸೋರಳಿ, ರವೀಂದ್ರ ರೆಡ್ಡಿ, ಪ್ರಕಾಶ ಜೀರ್ಗೆ, ಉದಯ ಸೋಲಾಪೂರೆ, ಸಂಜು ಮುರ್ಕೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771