
ಬೀದರ:- ನಮ್ಮ ನಾಡಲ್ಲಿ ಹಬ್ಬ ಹರಿದಿನಗಳಲ್ಲಿ ಮಹಿಳಾ ಸಮುದಾಯಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಡುವುದರ ಮೂಲಕ ನಮ್ಮ ನೆಲದ ಸಂಸ್ಕೃತಿಯನ್ನು ಶ್ರೀಮಂತವಾಗಿಸುವುದರ ಜೊತೆಗೆ ನಾರಿಶಕ್ತಿಯು ದೇಶ ಶಕ್ತಿಯಾಗಿದೆ ಎಂದು ಬೀದರ ದಕ್ಷಿಣ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದರು.
ಅವರು ಶಿವಾಜಿ ನಗರ ಗೆಳೆಯರ ಬಳಗ ಹಾಗೂ ಜೈ ಭವಾನಿ ರಂಗಭೂಮಿ ಕಲಾವಿದರ ಸಂಘ ಚಿಟ್ಟಾ ಬೀದರ ಇವರ ಸಂಯುಕ್ತಾಶ್ರಯದಲ್ಲಿ ಬೀದರ ನಗರದ ಶಿವಾಜಿ ನಗರದಲ್ಲಿ ಹಮ್ಮಿಕೊಂಡಿದ್ದ ದಸರಾ ಮಹೋತ್ಸವ ನಿಮಿತ್ಯ ಕಲ್ಯಾಣ ಕರ್ನಾಟಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೂಮಿ ತಾಯಿ, ಬಾರತಾಂಭೆ, ಕನ್ನಡಾಂಬೆ, ಗಂಗಾಮಾತೆ ಕಾವೇರಿ ಮಾತೆ, ಗೋದಾವರಿ ಮಾತೆ, ಅನ್ನದಾತೆ ಗೌರವದ ಪರಂಪರೆ ನಮ್ಮ ನೆಲದ ಪರಂಪರೆಯಾಗಿದೆ. ದಸರಾ ಒಂದು ಸಾಂಸ್ಕೃತಿಕ ಸಂಗೀತ ವೈಭವಾಗಿದೆ ಎಲ್ಲರನ್ನು ಕರೆದು ಕಲಿಸುವ ಪಾಠವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಹಿಳಾ ತಂಡದಿAದ ಕೋಲಾಟ ನೃತ್ಯ ಪ್ರದರ್ಶನ ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಈ ಕಾರ್ಯಕ್ರಮದಲ್ಲಿ ಸಂಜುಕುಮಾರ ಪಾಟೀಲ, ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ, ಪೀರಪ್ಪ ಯರನಳ್ಳಿ, ಸಂತೋಷ ಜೋಳದಪ್ಪಗೆ, ಪಾಂಡುರAಗ ಸಾಧು ಘಾಟ್ ಬಕ್ಕಗೊಂಡ, ವಿದ್ಯಾವೀರ ನಿರ್ಣಕರ, ಅಶೋಕ ದೂಮಲ್, ಬಾಜೀರಾವ ಪಾಟೀಲ, ವಿಜಯಕುಮಾರ ಪಾಟೀಲ, ಲೋಕಶೆಟ್ಟಿ ವಿಜಯಕುಮಾರ ಶಿವಾಜಿ ಕಾವಳೆ, ಬಿಕೆ ಚೌದ್ರಿ ಚೇತನ ಭಾವಿ ವೀರಶೆಟ್ಟಿ ದೇಶಮುಖ ಸಂಗಪ್ಪ ಚಮಕಿ, ವೀರಶೆಟ್ಟಿ ಚಿಮಕೊಡೆ, ಶರಣು ಗೌಳಿ, ಜೈಭವಾನಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಶೇಷಪ್ಪಾ ಚಿಟ್ಟಾ, ಅರ್ಚನಾ ಎಸ್.ಸ್ವಾಮಿ ಚಿಟ್ಟಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಸಾಹಿತಿ ಡಾ.ಸುಬ್ಬಣ್ಣ ಕರಕನಳ್ಳಿ ಮಾಡಿದರು.