July 20, 2025

{"remix_data":[],"remix_entry_point":"challenges","source_tags":["local"],"origin":"unknown","total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false}

ಕಮಲನಗರ:- ತಾಲೂಕ ಪಂಚಾಯತ್ ಕಮಲನಗರ ಸಭಾಂಗಣದಲ್ಲಿ ಸೋಮುವಾರ ಕೌಶಲ್ಯಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ಸಂಜೀವಿನಿ -ಕೆ,ಎಸ್, ಎಸ್ ಆರ್, ಎಲ್,ಪಿ, ಎಸ್, ಬೆಂಗಳೂರು ಜಿಲ್ಲಾ ಪಂಚಾಯತ್ ಬೀದರ ಕರ್ನಾಟಕ ಉದ್ಯಮಶೀಲತಾ ಭಿವೃದ್ಧಿ ಕೇಂದ್ರ ಸಿಡಾಕ ಬೀದರವರ ಸಂಯುಕ್ತಾಶ್ರಯದಲ್ಲಿ

ತಾಲೂಕಿನ ಸಂಜೀವಿನಿ ಮಹಿಳಾ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆರು ದಿನಗಳ ಉದ್ಯಮಶೀಲತಾ ಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾದ ಹಣಮಂತರಾಯ ಕೌಟಗೆ ಜ್ಯೋತಿ ಬೆಳಗಿಸುವ ಮೂಲಕ ತರಬೇತಿಗೆ ಚಾಲನೆ ನೀಡಿ ಮಾತನಾಡಿದ್ದರು.

ಸ್ವ ಸಹಾಯ ಸಂಘದ ಮಹಿಳೆಯರಿಗೆ ಆತ್ಮವಿಶ್ವಾಸದಿಂದ ಧೈರ್ಯವಾಗಿ ಉದ್ಯೋಗ ಮಾಡಬೇಕು ಮತ್ತು ಯಾವಾಗಲೂ ನಾವು ಮಾಡುವ ಕೆಲಸದಲ್ಲಿ ಆಸಕ್ತಿ ಇರಬೇಕು, ಈ ತರಬೇತಿಯಲ್ಲಿ ಯಾವ ರೀತಿ ಉದ್ಯೋಗ ಪ್ರಾರಂಭಿಸಬೇಕು, ಮಾರ್ಕೆಟ್ ಹೇಗೆ ಮಾಡಬೇಕು ಮತ್ತು ಲೆಬಲಿಂಗ ಬ್ರ್ಯಾಂಡಿಂಗ್ ಬಗ್ಗೆ ಮಾಹಿತಿ ನೀಡುತ್ತಾರೆ ತಾವೆಲ್ಲರೂ ಒಳ್ಳೆ ರೀತಿಯಿಂದ ತರಬೇತಿ ಪಡೆದುಕೊಳ್ಳಿ ಎಂದು ಎಲ್ಲ ಮಹಿಳೆಯರಿಗೆ ಪ್ರೋತ್ಸಾಹಿಸಿದರು.

ತಾಲುಕಾ ಕಾರ್ಯಕ್ರಮ ವ್ಯವಸ್ಥಾಪಕರು ಕು ಕವಿತಾ ಬಿರಾದಾರವರು ಕಾರ್ಯಕ್ರಮನುದ್ದೆಶಿಸಿ ಮಾತನಾಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಸಂಜೀವಿನಿ ಮಾಸಿಕ ಸಂತೆಮೇಳದಲ್ಲಿ ತಮಗೆ ಮಾರಲು ಅವಕಾಶವಿದೆ ಹಾಗೂ ಸರಸ ಮೇಳಗಳಲ್ಲಿ ಭಾಗವಹಿಸಲು ಅವಕಾಶ ಇದೆ ತಮಗೆ ಹಣಕಾಸಿನ ನೆರವು ಬೇಕಾದರೆ ಒಕ್ಕೂಟದಲ್ಲಿ ಸಮುದಾಯ ಬಂಡವಾಳ ನಿಧಿ ಪಡೆದುಕೊಂಡು ಉದ್ಯೋಗ ಮಾಡಬೇಕು, ಇನ್ನೂ ಹೆಚ್ಚಿನ ಸಾಲ ಬೇಕಾದರೆ ಬ್ಯಾಂಕವರು ಸಾಲ ನೀಡಲು ಮುಂದಾಗಿದೆ ಎಂದು ಎಲ್ಲ ಸ್ವ ಸಹಾಯ ಸಂಘದ ಮಹಿಳೆಯರಿಗೆ ಉದ್ಯೋಗ ಮಾಡಲು ಮಾಹಿತಿ ತಿಳಿಸಿದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಚಂದ್ರಕಾಂತ ಪ್ರಾಸ್ತಾವಿಕವಾಗಿ ಮಾತನಾಡಿದರು ಉದ್ಯಮ ಶೀಲತೆ ತರಬೇತಿಯಲ್ಲಿ ಆರು ದಿವಸಗಳು ಬೇರೆ ಬೇರೆ ವಿಷಯಗಳ ಕುರಿತು ಮಾಹಿತಿ ನೀಡಲಾಗುವುದು ಮತ್ತು ಒಂದು ದಿನ ಕ್ಷೇತ್ರ ಭೇಟಿ ಮಾಡಿಸುವುದು ಇದರ ಬಗ್ಗೆ ತಮ್ಮೆಲ್ಲರಿಗೂ ಉತ್ತಮವಾದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿಡಾಕ ತರಬೇತಿ ಆಯೋಜಿಸಿದ್ದ ಮಲ್ಲಪಾ ರವರು ಕಾರ್ಯಕ್ರಮ ನಿರೂಪಿಸಿದರು ತಾಲೂಕು ವ್ಯವಸ್ಥಾಪಕರು ನಾಗಪ್ಪ ಕಂಬಾರಿ ವಂದಿಸಿದರು

Leave a Reply

Your email address will not be published. Required fields are marked *

ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 94489 56771