
ಬೀದರ:-ಸಪ್ಟೆಂಬರ್ ೧೭ ರಿಂದ ಅಕ್ಟೋಬರ್ ೨ ರ ವರೆಗೆ ಬೀದರ ಜಿಲ್ಲಾದ್ಯಂತ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದ ಸಮಾರೋಪ ಮತ್ತು ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮವು ಬೀದರ ನಗರದ ಬರೀದ ಶಾಹಿ ಉದ್ಯಾನವನದಲ್ಲಿ ನೆಹರು ಯುವ ಕೇಂದ್ರ, ಬೀದರ, ರೈಜಿಂಗ್ ಹ್ಯಾಂಡ್ಸ್ ಕಲೆ ಮತ್ತು ಸಾಂಸ್ಕೃತಿಕ ಯುವಕರ ಸಂಘ, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ೩೨ ಕರ್ನಾಟಕ ಬೆಟಾಲಿಯನ್ ಕಲಬುರಗಿ ಬೀದರ ಆರ್ಮಿ ಎನ್.ಸಿ.ಸಿ. ಯುನಿಟ್ ಹಾಗೂ ಜಿ.ಎನ್.ಡಿ. ಪ್ರಥಮ ದರ್ಜೆ ಕಾಲೇಜು ಸಹಯೋಗದೊಂದಿಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೀದರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶಿಲ್ಪಾ ಶರ್ಮಾ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಬೀದರ ಜಿಲ್ಲೆಯ ನಾಗರೀಕರು ತಮ್ಮ ತಮ್ಮ ಮನೆಯ ಕಸಗಳನ್ನು ಬೇರೆಯವರ ಮನೆಯ ಕಂಪೌAಡ್ ಹಾಗೂ ಖುಲ್ಲಾ ಜಾಗದಲ್ಲಿ ಹಾಕದೇ ಸ್ವಚ್ಛತಾ ವಾಹನ ಹಾಗೂ ಗ್ರಾಮದ ಹೊರಗಡೆ ಕಸವನ್ನು ಹಾಕಿಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ನುಡಿದರು. ಇದರ ಜಾಗೃತಿಗಾಗಿ ಸಪ್ಟೆಂಬರ್ ೧೭ ರಿಂದ ಅಕ್ಟೋಬರ್ ೨ ರ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನುಡಿದು, ಪ್ರತಿಯೊಬ್ಬ ನಾಗರೀಕರು ಸ್ವಚ್ಛತಾ ಕಾಪಾಡಿಕೊಳ್ಳುವುದು ತಮ್ಮ ಕರ್ತವ್ಯವಾಗಿದೆ. ಆದ್ದರಿಂದ ಸ್ವಚ್ಛತೆಗೆ ಎಲ್ಲರೂ ಆದ್ಯತೆ ಕೊಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರ‍್ರಾಸ್ತಾವಿಕವಾಗಿ ಕೇಂದ್ರ ಸರ್ಕಾರದ ಸಾಂಸ್ಥಿಕ ಪ್ರಾಣಿ ನೀತಿ ಸಮಿತಿ ಸದಸ್ಯ ಶಿವಯ್ಯ ಸ್ವಾಮಿ ಮಾತನಾಡಿ, ಬೀದರ ಜಿಲ್ಲೆಯನ್ನು ಸ್ವಚ್ಛ ಭಾರತ-ಸ್ವಚ್ಛ ಬೀದರ ಶೀರ್ಷಿಕೆಯಡಿ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಬೀದರ ಜಿಲ್ಲೆಯನ್ನು ಸ್ವಚ್ಛ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮ, ಜಾಥಾ, ಕರಪತ್ರ ಮತ್ತು ಕಾರ್ಯಾಗಾರ ಹಾಗೂ ಶ್ರಮದಾನದ ಮೂಲಕ ಸ್ವಚ್ಛ ಬೀದರಗಾಗಿ ಶಾಂತೀಶ್ವರಿ ಸಂಸ್ಥೆಯ ಮೂಲಕ ಶ್ರಮಿಸಲಾಗಿದೆ ಎಂದು ನುಡಿದು, ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಸ್ವಚ್ಛ ಮತ್ತು ಸುಂದರ ನಗರಕ್ಕೆ ಕಾರ್ಯಪ್ರವರ್ತರಾಗಬೇಕೆಂದು ನುಡಿದರು.
ರಾಷ್ಟಿçÃಯ ಯುವ ಪ್ರಶಸ್ತಿ ಪುರಸ್ಕೃತರಾದ ಓಂಪ್ರಕಾಶ ರೊಟ್ಟೆ, ಬಿವಿಬಿ ಕಾಲೇಜಿನ ಪ್ರಾಚಾರ್ಯರಾದ ಮೆ. ಡಾ|| ಪಿ. ವಿಠಲರೆಡ್ಡಿ ಅವರು ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಿದರು. ವೇದಿಕೆ ಮೇಲೆ ಉಪ ಪ್ರಾಚಾರ್ಯರಾದ ಅನೀಲಕುಮಾರ ಆಣದೂರೆ, ಎನ್.ಎಸ್.ಎಸ್. ಅಧಿಕಾರಿಗಳಾದ ಅಶ್ವಿನ್, ಸಂದೀಪಕುಮಾರ, ಜಿ.ಎಸ್. ಮಠಪತಿ, ರಫೀಕ್ ತಾಳಿಕೋಟೆ, ಡಾ. ಪ್ರಭುಲಿಂಗ ಬಿರಾದಾರ, ಶಿವಶಂಕರ ಬೆಮಳಗಿ ಅವರು ಉಪಸ್ಥಿತರಿದ್ದರು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮಯೂರ್ ಕುಮಾರ ಗೋರಮೆ ಅವರು ಸ್ವಾಗತಿಸಿದರೆ, ಸತೀಷ ಬೆಳಕೋಟೆ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಎನ್.ಸಿ.ಸಿ. ಬೆಟಾಲಿಯನ್, ಎನ್.ಎಸ್.ಎಸ್. ಘಟಕ, ಸ್ವಯಂ ಸೇವಾ ಸಂಸ್ಥೆ, ಯುವಕ ಸಂಘಗಳು ಹಾಗೂ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರಮದಾನದ ನಂತರ ಬರೀದ ಶಾಹಿ ಉದ್ಯಾನದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಸ್ವಚ್ಛತಾ ವಾಕ್‌ಥಾನ್ ಮಾಡಲಾಯಿತು. ನಂತರ ಸ್ವಚ್ಛತೆಯ ಜಾಗೃತಿ ಕರಪತ್ರಗಳು ಸಾರ್ವಜನಿಕರಿಗೆ ವಿತರಿಸಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.