
ಔರಾದ:ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರು, ಈ ದೇಶ ಕಂಡ ಅಪರೂಪದ ಸಮಾಜ ಸುಧಾರಕ, ಶಾಂತಿದೂತ, ಶ್ರೇಷ್ಠ ಸಂತ, ಹೋರಾಟದ ಮೂಲಕ ದೇಶದಕ್ಕೆ ಸ್ವಾತಂತ್ರವನ್ನು ತಂದು ಕೋಟ್ಟ ಮಹಾತ್ಮಗಾಂಧಿಜೀ ಕೋಡುಗೆ ಅಪಾರವಾಗಿದೆ ಎಂದು ಮುಖಂಡ ಡಾ: ಭೀಮಸೇನರಾವ ಸಿಂದೆ ತಿಳಿಸಿದರು.
ಔರಾದ ಪಟ್ಟಣದ ಬಸವೇಶ್ವರ ವೃತದಬಳಿ ತಾಲೂಕು ಕಾಂಗ್ರೆಸ್ ಕಮಿಟಿವತಿ ಯಿಂದ ಆಯೋಜಿಸಲಾಗಿದ್ದ ಮಹಾತ್ಮಗಾಂಧಿ ಜೀ ಅಧ್ಯಕ್ಷತೆಯಲ್ಲಿ ಬೆಳಗಾವಿ ಕಾಂಗ್ರೆಸಗೆ ಅಧಿವೇಶನಕ್ಕೆ ೧೦೦ ವರ್ಷದ ಸಂಭ್ರಮಾಚರಣೆಯನ್ನು ಉದೇಶಿಸಿ ಮಾತಾಡಿದರು.
ಯುದ್ಧ, ಹಿಂಸೆ ಇಲ್ಲದೇ, ಅಹಿಂಸಾ ತತ್ವದಡಿ ದೇಶಕ್ಕೆ ಸ್ವಾತಂತ್ರ ಕೊಡಿಸಿದ ಮಹಾತ್ಮ ಎಂದು ಹೇಳಿದ ಅವರು, ಯುವಕರಲ್ಲಿ ದೇಶಭಕ್ತಿಯನ್ನು ಪುಟಿದೆಬ್ಬಿಸಿ, ಸಮಾಜದಲ್ಲಿನ ಅನಿಷ್ಠಗಳ ವಿರುದ್ದ ಜಾಗೃತಿ ಮೂಡಿಸಿ, ಶಾಂತಿಯ ಮೂಲಕವೇ ಎಲ್ಲವೂ ಸಾಧ್ಯ ಎಂದು ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಶಕ್ತಿ ಮಹಾತ್ಮ ಗಾಂಧೀಜಿಯವರು ಎಂದು ಹೇಳಿದ್ದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ ಮಾತನಾಡಿ,
ಅಹಿಂಸಾವಾದದ ಮೂಲಕ ವಿಶ್ವ ಗಮನ ಸೆಳೆದ ಭಾರತ ಸ್ವಾತಂತ್ರ್ಯ ಚಳುವಳಿಗೆ ಹೊಸ ಭಾಷ್ಯ ಬರೆದ ಮಹಾತ್ಮಾ ಗಾಂಧಿಜೀ, ಗ್ರಾಮ ಸ್ವರಾಜ್ಯದ ಜೊತೆಗೆ ರಾಮರಾಜ್ಯದ ಕನಸನ್ನು ಕಂಡಿದ್ದರು ಸತ್ಯ, ಅಹಿಂಸೆ, ಪರಧರ್ಮ ಇವುಗಳನ್ನು ಪಾಲಿಸು ತ್ತಿದ್ದ ಅವರು ತಮ್ಮ ತತ್ವ ಆದರ್ಶಗಳ ಮೂಲಕವೇ ಹಲವಾರು ಜನ ಮಹಾನ್ ನಾಯಕರಿಗೆ ಸ್ಪೂರ್ತಿದಾ ಯಕರಾಗಿದ್ದರು, ಉಪ್ಪಿನ ಸತ್ಯಾಗ್ರಹ ಮೂಲಕ ಚಳುವಳಿ ಆರಂಭಿಸಿದರು,
ಮಹಾತ್ಮಗಾಂಧಿಜೀ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಶಕ್ತಿ ನಮ್ಮ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹಾಗೂ ನಾಯಕರಿಗೆ ಮಾತ್ರಯಿದೆ ಹಿಗಾಗಿಯೇ ರಾಜ್ಯದಲ್ಲಿ ಇಲ್ಲ ಸಲ್ಲದ ಸುಳ್ಳು ಆರೋಪಗಳನ್ನು ನಮ್ಮ ಮುಖ್ಯಮಂತ್ರಿಯ ಮೇಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದರು
ಮಹಾತ್ಮಗಾಂಧಿ ಜೀ ಅಧ್ಯಕ್ಷತೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ೧೦೦ ವರ್ಷಗಳ ಸಂಭ್ರಮ ನಾಡಿನಲ್ಲಿನ ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಹಬ್ಬದಂತೆ ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು ಆಚರಣೆ ಮಾಡುತ್ತಿದ್ದೆವೆಂದು ಹರ್ಷ ವ್ಯಕ್ತ ಪಡಿಸಿದರು.
ಇದಕ್ಕೂ ಮುನ್ನ ಪಟ್ಟಣದ ಕನ್ನಡಾಂಬೆಯ ವೃತಿದಿಂದ ಬಸವೇಶ್ವರ ವೃತದ ತನಕ ಪಾದಯಾತ್ರೆಯ ಮೂಲಕ ಮಹಾತ್ಮಗಾಂಧಿ ಹಾಗೂ ಲಾಲ್ ¨ಹಾದುರ್ ಶಾಸ್ತ್ರಿ ಭಾವಚಿತ್ರದೊಂದೆ ಮೆರವಣಿಗೆ ನಡೆಸಿದರು.
ಮುಖಂಡ ಬಸವರಾಜ ದೇಶಮುಖ,ಶಿವರಾಜ ದೇಶಮುಖ, ಸುಧಾಕರ ಕೊಳ್ಳುರ್,ಡಾ” ಫಯಾಜ್ ಅಲಿ, ಸಂತೋಷ ಜಾದವ,ಬಿ ಪ್ರಹಲಾದ್,ಸುನೀಲ ಮೀತ್ರಾ, ಆನಂದ ಚವ್ಹಾಣ,ರಾಮಣ್ಣ ವಡೇಯರ್,ರತ್ನದೀಪ ಕಸ್ತೂರೆ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಇದ್ದರು.