????????????????????????????????????????????????????????????????????????????????????????????????????????????????????????????
ಔರಾದ:-ಮಕ್ಕಳು ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಶಾಲಾ ಸಂಸತ್ ಚುನಾವಣೆ ನಡೆಸುತ್ತಿರುವುದು ಮಹತ್ವದಾಗಿದೆ ಎಂದು ಹೋಲಿ ಕ್ರಾಸ್ ಶಾಲಾ ವ್ಯವಸ್ಥಾಪಕ ಫಾದರ್ ಕ್ಲಿವನ್ ಹೇಳಿದರು.
ತಾಲ್ಲೂಕಿನ ಸಂತಪುರ ಹೋಲಿ ಕ್ರಾಸ್ ಶಾಲೆಯಲ್ಲಿ ಶನಿವಾರ ಜರುಗಿದ ಶಾಲಾ ಸಂಸತ್ ಚುನಾವಣೆಯಲ್ಲಿ ವಿಜೇತ ಸದಸ್ಯರಿಗೆ ಹಮ್ಮಿಕೊಂಡ ಅಧಿಕಾರ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,
ಮಕ್ಕಳು ಮತದಾನ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಭವಾತ್ಮಕವಾಗಿ ಅರಿತುಕೊಂಡು, ಅವರು ಮುಂದಿನ ದಿನಗಳಲ್ಲಿ ಯಾವ ರೀತಿ ನೈಜ ಮತದಾನ ಪ್ರಕ್ರಿಯೇ ಜರುಗುತ್ತದೆ ಅನ್ನುವುದು ಶಾಲಾ ಹಂತದಲ್ಲಿಯೇ ಅರಿತುಕೊಂಡು ಸಮಗ್ರ ಮಾಹಿತಿ ಅರಿತಿರುವುದು ಉತ್ತಮ ಸಂಗತಿಯಾಗಿದೆ ಎಂದರು.
ಮುಖ್ಯಗುರು ಮುಖ್ಯಗುರು ಸಿಸ್ಟರ್ ಜೋಸ್ಫಿನ್ ಮಾತನಾಡಿ, “ಪಠ್ಯದ ಜೊತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಾಯಕತ್ವದ ಗುಣಗಳನ್ನು ಪರಿಚಯಿಸುವ ಉದ್ದೇಶವಾಗಿದೆ. ವಿಧಾನಸಭೆ, ವಿಧಾನಪರಿಷತ್, ಲೋಕಸಭೆ ಹಾಗೂ ರಾಜ್ಯಸಭೆಯ ಚುನಾವಣಾ ಪ್ರಕ್ರಿಯೆ, ಒಂದು ಮತದ ಮಹತ್ವ, ಮತದಾನ, ಮತ ಎಣಿಕೆ, ಸಚಿವ ಸಂಪುಟ ರಚನೆ ಮತ್ತು ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತು ಮಾಹಿತಿ ಒದಗಿಸಲಾಗಿದೆ. ವಿದ್ಯಾರ್ಥಿಗಳ ಪ್ರಾಣಾಳಿಕೆ ಮಂಡಿಸಿ, ಮತ ಯಾಚಿಸಿ, ಭಾಷಣ ಮಾಡುವ ಮೂಲಕ ಆತ್ಮವಿಶ್ವಾಸವನ್ನು ಬೆಳೆಸಿದೆ” ಎಂದು ಹೇಳಿದರು.
ಚುನಾವಣೆಯ ಬಳಿಕ ಶಾಲಾ ಸಂಸತ್ತಿನ ಪದಾಧಿಕಾರಿಗಳನ್ನು ಘೋಷಿಸಿ ಪ್ರಮಾಣ ವಚನ ಬೋಧಿಸಿ ಅವರಿಗೆ ಸಚಿವ ಸ್ಥಾನಗಳನ್ನು ಪ್ರಧಾನ ಮಾಡಲಾಯಿತು. ಪ್ರಿಯಾಂಕಾ, ಪ್ರತಿಭಾ, ಸುವರ್ಣ, ಮಂದಾಕಿನಿ, ರೆಮೋಲಿನ್, ಸಪನಾ ಪವಾರ, ನಮೃತಾ, ಅನೀಲ, ಸೀಮಾ, ಸತೀಷ ನಾಗೂರೆ, ವಿಜಯಕುಮಾರ ಸೇರಿದಂತೆ ಮಕ್ಕಳಿದ್ದರು.
